ETV Bharat / state

ಚನ್ನಗಿರಿಯಲ್ಲಿ ಹೆಚ್ಚಿದ ಕೊರೊನಾ: ಸಾರ್ವಜನಿಕರಲ್ಲಿ ಆತಂಕ - ದಾವಣಗೆರೆ ಕೊರೊನಾ ನ್ಯೂಸ್​

ದಾವಣಗೆರೆ ನಗರದಲ್ಲಿ ಆತಂಕ ಮೂಡಿಸಿದ್ದ ಕೊರೊನಾ ಈಗ ತಾಲೂಕು ಮಟ್ಟದಲ್ಲೂ ಸದ್ದು ಮಾಡಿದೆ. ಚೆನ್ನೈ ಬಳಿಯ ಶಿವಕಾಶಿಗೆ ಸೋಂಕಿತ ವ್ಯಕ್ತಿ ಪಟಾಕಿ ತರಲು ಹೋಗಿದ್ದ. ಅಲ್ಲಿಂದಲೇ ಈ ವೈರಸ್​ನ್ನು ಹೊತ್ತು ತಂದಿರಬಹುದು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ‌.

corona case found at davanagere
ಚನ್ನಗಿರಿಯಲ್ಲಿ ಕೊರೊನಾ
author img

By

Published : Jun 24, 2020, 1:06 PM IST

ದಾವಣಗೆರೆ: ನಗರದಲ್ಲಿ ಜನರ ನಿದ್ದೆಕೆಡಿಸಿದ್ದ ಹೆಮ್ಮಾರಿ ಕೊರೊನಾ ಈಗ ತಾಲೂಕು ಮಟ್ಟದಲ್ಲೂ ಆತಂಕ ಸೃಷ್ಟಿಸಿದೆ. ಚನ್ನಗಿರಿ ಪಟ್ಟಣದ ಗೌಡರ ಬೀದಿಯ ನಿವಾಸಿಗೆ ಸೋಂಕು ತಗುಲಿದ್ದು, ಈತನ ಕುಟುಂಬದವರಿಗೂ ವಕ್ಕರಿಸಿದೆ.

ಚನ್ನಗಿರಿಯಲ್ಲಿ ಹೆಚ್ಚಿದ ಕೊರೊನಾ ಆತಂಕ

ತಮಿಳುನಾಡಿನ ಶಿವಕಾಶಿಗೆ ಸೋಂಕಿತ ವ್ಯಕ್ತಿ ಪಟಾಕಿ ತರಲು ಹೋಗಿದ್ದ. ಅಲ್ಲಿಂದಲೇ ಈ ವೈರಸ್​ನ್ನು ಹೊತ್ತು ತಂದಿರಬಹುದು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ‌. ಜಿಲ್ಲಾಡಳಿತವು ಸೋಂಕಿತ ಶಿವಕಾಶಿಗೆ ಹೋಗಿ ಬಂದಿದ್ದು ನಿಜ. ಆದ್ರೆ ಸೋಂಕು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದೆ.

ಈತನಿಂದ ಹನ್ನೊಂದು ಜನರಿಗೆ ಸೋಂಕು ತಗುಲಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರೇರಿತವಾಗಿ ಚನ್ನಗಿರಿ ಪಟ್ಟಣ ಲಾಕ್​ಡೌನ್​​ ಮಾಡಲಾಗಿದೆ. ಪಟ್ಟಣದ ಕುಂಬಾರ ಬೀದಿ ಹಾಗೂ ಗೌಡರ ಬೀದಿ ಸೀಲ್​ಡೌನ್​ ಮಾಡಲಾಗಿದ್ದು, ಈವರೆಗೆ 520 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ.

ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 24 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.