ETV Bharat / state

ಬಿಜೆಪಿಗೆ ಬರಲು ಕಾಂಗ್ರೆಸ್​ನವರು ತುದಿಗಾಲಲ್ಲಿ ನಿಂತಿದ್ದಾರೆ : ಸಚಿವ  ಭೈರತಿ ಬಸವರಾಜ್ - Bhairati Basavaraj news

ಕಾಂಗ್ರೆಸ್‌ನವರಿಗೆ ವಿರೋಧಿಸಲು ಬೇರೆ ವಿಚಾರಗಳಿಲ್ಲ. ಬೆಲೆ ಏರಿಕೆಯನ್ನೇ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ. ಜನ ಬುದ್ಧಿವಂತರಿದ್ದಾರೆ. ಅವರಿಗೂ ಎಲ್ಲವೂ ಅರ್ಥವಾಗುತ್ತೆ..

congress-leaders-ready-to-join-bjp-bhairati-basavaraj
ಭೈರತಿ ಬಸವರಾಜ್
author img

By

Published : Sep 27, 2021, 3:28 PM IST

ದಾವಣಗೆರೆ : ಕಾಂಗ್ರೆಸ್‌ನಿಂದ ಸಾಕಷ್ಟು ಶಾಸಕರು ಬಿಜೆಪಿಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾದು ನೋಡಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬಾಂಬ್​ ಸಿಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಪ್ರತಿಭಟನೆಯಿಂದ ಏನೂ ಆಗಲ್ಲ, ಜನರ ಬೆಂಬಲ ಬಿಜೆಪಿಗೆ ಇದೆ. ಇದಕ್ಕೆ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗಳೇ ಸಾಕ್ಷಿಯಾಗಿವೆ.

ಕಾಂಗ್ರೆಸ್‌ನವರಿಗೆ ವಿರೋಧಿಸಲು ಬೇರೆ ವಿಚಾರಗಳಿಲ್ಲ. ಬೆಲೆ ಏರಿಕೆಯನ್ನೇ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ. ಜನ ಬುದ್ಧಿವಂತರಿದ್ದಾರೆ. ಅವರಿಗೂ ಎಲ್ಲವೂ ಅರ್ಥವಾಗುತ್ತೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಭಾರತ್‌ ಬಂದ್‌ ಕುರಿತಂತೆ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿರುವುದು..

ಭಾರತ್ ಬಂದ್ ಅಗತ್ಯವಿರಲಿಲ್ಲ : ಭಾರತ್ ಬಂದ್ ಮಾಡುವ ಅಗತ್ಯವಿದ್ದಿಲ್ಲ. ಸರ್ಕಾರ ರೈತರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ರಾಜ್ಯ ಸರ್ಕಾರ ವಿಶೇಷ ಸ್ಕಾಲರ್‌ಶಿಪ್ ಯೋಜನೆ ಜಾರಿಗೊಳಿಸಿದೆ. ಸಿಎಂ ಬೊಮ್ಮಾಯಿ ಆಡಳಿತದಲ್ಲಿ ರೈತರಿಗೆ ಸಾಕಷ್ಟು ಅನುಕೂಲವಾಗಿವೆ.

ಈ ಪ್ರತಿಭಟನೆ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಈ ರೀತಿ ಪ್ರತಿಭಟನೆಗಳಿಂದ ಆರ್ಥಿಕತೆಗೆ ಧಕ್ಕೆಯಾಗುತ್ತೆ. ಯಾವುದೇ ಸಮಸ್ಯೆಗಳಿದ್ದರೆ ಸಿಎಂ ಜತೆ ಮಾತನಾಡಿ‌ ಪರಿಹರಿಸಿಕೊಳ್ಳಿ ಎಂದು ಭೈರತಿ ಬಸವರಾಜ್ ರೈತರಿಗೆ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.