ETV Bharat / state

ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​: ದಾವಣಗೆರೆಯಲ್ಲಿ ಸ್ಟಾಫ್​ ನರ್ಸ್​ ದೂರು - Complaint from Davanagere Staff Nurse

ದಾವಣಗೆರೆ ನಗರದಲ್ಲಿ ದೊಡ್ಡ ಮಟ್ಟದಲ್ಲಿ ತನ್ನ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ನಿಂದಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಾಷಾ ನಗರದ ಸ್ಟಾಫ್ ನರ್ಸ್​ವೊಬ್ಬರು ದೂರು ನೀಡಿದ್ದಾರೆ.

dw
ಸ್ಟಾಫ್​ ನರ್ಸ್​ ದೂರು
author img

By

Published : May 30, 2020, 1:13 PM IST

Updated : May 30, 2020, 2:12 PM IST

ದಾವಣಗೆರೆ: ತನ್ನ ಮಾನಹಾನಿ ಮಾಡಿದವಂತ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಕುರಿತಂತೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಕೊರೊನಾ ಸೋಂಕಿನಿಂದ ಗುಣಮುಖರಾದ ಬಾಷಾ ನಗರದ ಸ್ಟಾಫ್ ನರ್ಸ್​ವೊಬ್ಬರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

'ವಂದು ವಾಣಿ' ಎಂಬ ಫೇಸ್​ಬುಕ್​ ಪೇಜ್​ನಲ್ಲಿ ರೋಗಿ ಸಂಖ್ಯೆ 533 ಸ್ಟಾಫ್ ನರ್ಸ್ ಬಗ್ಗೆ ಇಲ್ಲಸಲ್ಲದ ಸಂದೇಶ ಹಾಕಿ ಕೆಟ್ಟದಾಗಿ ಬಿಂಬಿಸಲಾಗಿದೆಯಂತೆ. ಬಾಷಾ ನಗರದ ಪ್ರಸೂತಿ ಕೇಂದ್ರವು ಬಡ ಕೂಲಿ ಕಾರ್ಮಿಕರು ವಾಸ ಮಾಡುವಂತಹ ಪ್ರದೇಶ. ಬಹಳಷ್ಟು ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ನಿಗದಿತ ಸಮಯ ಮೀರಿ ತನ್ನ ವ್ಯಾಪ್ತಿಯಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿದ್ದೆ. ದುರದೃಷ್ಟವಶಾತ್ ಯಾರೋ ಒಬ್ಬ ರೋಗಿಯಿಂದ ನನಗೆ ಕೋವಿಡ್ - 19 ಸೋಂಕು ತಗುಲಿದೆ. ಇಡೀ ನಗರದಲ್ಲಿ ದೊಡ್ಡ ಮಟ್ಟದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವಿಷಯಗಳು ಹರಿದಾಡತೊಡಗಿವೆ ಎಂದು ನರ್ಸ್​ ಅಳಲು ತೋಡಿಕೊಂಡಿದ್ದಾರೆ.

ತಾನು ಗುಣಮುಖಳಾಗಿ ಬಿಡುಗಡೆಯಾದ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯಕರ ಜಾತಿ ನಿಂದನಾತ್ಮಕ ಹಾಗೂ ತನ್ನ ಸ್ತ್ರೀತನಕ್ಕೆ ಧಕ್ಕೆ ತರುವ ಹೇಳಿಕೆ ಅಪ್ಲೋಡ್ ಮಾಡಿದ್ದಾರೆ. ವಂದು ವಾಣಿ ಪೇಜ್ ಕ್ರಿಯೇಟ್ ಮಾಡಿದವರು ಹಾಗೂ ಕೆಟ್ಟದಾಗಿ ಕಾಮೆಂಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸ್ಟಾಫ್ ನರ್ಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

Last Updated : May 30, 2020, 2:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.