ETV Bharat / state

ಶಾಮನೂರು ಮೊಮ್ಮಗಳ ವರಿಸಿದ ಸಿಎಂ ಬೊಮ್ಮಾಯಿ ಆಪ್ತನ ಪುತ್ರ - cam attend marriage at davanagere

ಶಾಮನೂರು ಶಿವಶಂಕರಪ್ಪನವರ ಮೊಮ್ಮಗಳಾದ ಅಕ್ಷತ ಹಾಗು ಸಿಎಂ ಬಸವರಾಜ ಬೊಮ್ಮಾಯಿಯರ ಆಪ್ತನ ಮಗನಾದ ಅಭಿಷೇಕ್‌ ಪಾಟೀಲ್ ಕಲ್ಯಾಣ ಅದ್ಧೂರಿಯಾಗಿ ಜರುಗಿತು. ದಾವಣಗೆರೆಯ ಬಾಪೂಜಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಬೊಮ್ಮಾಯಿ ಬೆಳಿಗ್ಗೆಯೇ ಆಗಮಿಸಿದ್ದರು.

ತಂಗಿ ಮಗನ ಮದುವೆಯಲ್ಲಿ ಸಿಎಂ ಭಾಗಿ
ತಂಗಿ ಮಗನ ಮದುವೆಯಲ್ಲಿ ಸಿಎಂ ಭಾಗಿ
author img

By

Published : Jun 16, 2022, 7:35 PM IST

Updated : Jun 16, 2022, 8:30 PM IST

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ರಾಜಕೀಯ ಜಂಜಡ ಬದಿಗಿಟ್ಟು ಆಪ್ತನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಾಮನೂರು ಶಿವಶಂಕರಪ್ಪನವರ ಮೊಮ್ಮಗಳು ಅಕ್ಷತಾ ಹಾಗು ಸಿಎಂ ಬೊಮ್ಮಾಯಿ ಆಪ್ತನ ಪುತ್ರ ಅಭಿಷೇಕ್‌ ಪಾಟೀಲ್ ವಿವಾಹ ಇಲ್ಲಿನ ಬಾಪೂಜಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು.

ಪಕ್ಷಭೇದ ಮರೆತು ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ, ಅವರ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಿಎಂ ಬೊಮ್ಮಾಯಿ ಜೊತೆ ಕುಳಿತು ಮದುವೆ ಮನೆಯಲ್ಲಿ ಮಾತುಕತೆ ನಡೆಸಿದರು. ಅಭಿಷೇಕ್‌ ಪಾಟೀಲರನ್ನು ತಬ್ಬಿಕೊಂಡ ಸಿಎಂ ಮದುವೆಯ ಶುಭಾಶಯ ಕೋರಿದರು. ಸಚಿವರಾದ ಭೈರತಿ ಬಸವರಾಜ್, ಮಾಧುಸ್ವಾಮಿ ಇದ್ದರು.

ಶಾಮನೂರು ಶಿವಶಂಕರಪ್ಪ ಈ ಮೂಲಕ ಸಿಎಂ ಬೊಮ್ಮಾಯಿ ಆಪ್ತರೊಂದಿಗೆ ಸಂಬಂಧ ಬೆಳೆಸಿದ್ದಾರೆ. "ಶೆಟ್ಟರ್, ಸಿಎಂ ಬೊಮ್ಮಾಯಿ, ಎಂ.ಬಿ.ಪಾಟೀಲ್ ಎಲ್ಲರೂ ವೀರಶೈವ ಲಿಂಗಾಯತರು. ಅದಕ್ಕೆ ನಮ್ಮ ಮನೆ ಪವರ್ ಸೆಂಟರ್ ಆಗ್ತಿದೆ" ಎಂದು ಕಾಂಗ್ರೆಸ್ ಮಾಜಿ ಸಚಿವ ಶಾಮನೂರು ಮಾಧ್ಯಮದವರ ಪ್ರಶ್ನೆಗೆ ನಗೆಚಟಾಕಿ ಹಾರಿಸಿದರು.

ಇದನ್ನೂ ಓದಿ: ನಮಾಜ್ ನಂತರ ದ್ವೇಷ ಭಾಷಣ ಮಾಡದಂತೆ ನೋಟಿಸ್ ನೀಡಿದ್ದ ಕೇರಳ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ

Last Updated : Jun 16, 2022, 8:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.