ETV Bharat / state

ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ರೆ ಕಾನೂನು ಕ್ರಮ: ವಕ್ಪ್ ಮಂಡಳಿ ವಾರ್ನಿಂಗ್​​​​​​​

author img

By

Published : Jul 21, 2020, 2:37 PM IST

ಕೋವಿಡ್​ ಸೋಂಕಿನಿಂದ ಮೃತರಾದ ಮುಸ್ಲಿಮರ ದಫನ ಕಾರ್ಯಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ದಾವಣಗೆರೆ ಜಿಲ್ಲಾ ವಕ್ಫ್​ ಮಂಡಳಿ ಎಚ್ಚರಿಸಿದೆ.

Davanagere Waqf Board Warning
ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ್ರೆ ಕಾನೂನು ಕ್ರಮ

ದಾವಣಗೆರೆ: ಕೊರೊನಾ ಸೋಂಕಿನಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಶವ ಸಂಸ್ಕಾರಕ್ಕೆ ಖಬರಸ್ಥಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ವಕ್ಪ್ ಮಂಡಳಿ ಎಚ್ಚರಿಸಿದೆ.

ರಾಜ್ಯದ ಹಲವೆಡೆ ಕೋವಿಡ್​ ಸೋಂಕಿನಿಂದ ಸಾವಿಗೀಡಾದ ಮುಸ್ಲಿಮರ ಶವ ಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳ ನೀಡಲು ಅಡ್ಡಪಡಿಸುತ್ತಿರುವ ಬಗ್ಗೆ ವರದಿಗಳು ಬಂದಿವೆ. ಗೌರವಪೂರ್ಣ ಅಂತ್ಯಸಂಸ್ಕಾರ ಪ್ರತಿಯೊಬ್ಬ ಮೃತ ವ್ಯಕ್ತಿಯ ಹಕ್ಕು. ಈ ಹಕ್ಕಿಗೆ ಚ್ಯುತಿಯನ್ನುಂಟು ಮಾಡಲು ಯಾರಿಗೂ ಅವಕಾಶವಿಲ್ಲ ಎಂದು ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.

ಇನ್ನು ಮುಂದೆ ಜಿಲ್ಲೆಯ ಮುಸ್ಲಿಮರ ಶವಸಂಸ್ಕಾರಕ್ಕೆ ತೊಂದರೆಯುಂಟು ಮಾಡುವ, ಸ್ಥಳ ನಿರಾಕರಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.