ದಾವಣಗೆರೆ: ಇಲ್ಲಿರುವ ಸೇತುವೆ 1985ರ ಕಾಲದ್ದು. ಅಲ್ಲಿ ಹರಿಯುವ ಪುಟ್ಟ ನದಿಗೆ ಸೇತುವೆ ನಿರ್ಮಿಸಿ ಸುಮಾರು ಮೂವತ್ತೈದು ವರ್ಷಗಳೇ ಆಗಿವೆ. ಜೋರು ಮಳೆ ಬಂದು ಸೂಳೆಕೆರೆ ಕೋಡಿ ಬಿದ್ರೆ ಸಾಕು ಸೇತುವೆ ಜಲಾವೃತವಾಗುತ್ತಿದೆ. ಪರಿಣಾಮ, ಶಾಲೆಗೆ ತೆರಳುವ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೂಲಕ ಮಕ್ಕಳು ಶಾಲೆಗೆ ತೆರಳಬೇಕಿದೆ.
ವಿವರ: ಏಷ್ಯಾದ 2ನೇ ಅತಿದೊಡ್ಡ ಕೆರೆ ಸೂಳೆಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಪರಿಣಾಮ ಚನ್ನಗಿರಿ ತಾಲೂಕಿನ ಕೆಂಗಾಪುರ ಹಾಗೂ ಕಬ್ಬಳ ಗ್ರಾಮದ ನಡುವೆ ಹರಿಯುವ ಪುಟ್ಟ ಹರಿದ್ರಾವತಿ ನದಿ ತುಂಬಿ ಹರಿಯುತ್ತಿದೆ. ಹರನಹಳ್ಳಿ, ಕೆಂಗಾಪುರ ಸೇರಿ 8 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸದ್ಯ ಜಲಾವೃತವಾಗಿದ್ದು ರಸ್ತೆ ಬಂದ್ ಆಗಿದೆ. ಕಬಳ, ತ್ಯಾವಣಗಿ, ಹೊಸೂರು, ಕೆರೆಬೀಳಚಿ, ಕಣವೆ ಬಿಳ್ಚಿ ಸೇರಿ ಬೇರೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಒಂದು ಬದಿಯಲ್ಲಿ ನಿಂತು ಟ್ರ್ಯಾಕ್ಟರ್‌ಗಾಗಿ ಕಾದು ಶಾಲೆ ಸೇರುತ್ತಾರೆ. ಟ್ರ್ಯಾಕ್ಟರ್ ಬಾರದೇ ಇದ್ದರೆ ಶಿಕ್ಷಕರು ಗ್ರಾಮದಲ್ಲಿ ಯಾವುದಾದರೂ ಟ್ರಾಕ್ಟರ್ ಕಳುಹಿಸಿ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಗೆ ಕರೆತರುವ ಕೆಲಸ ಮಾಡಬೇಕು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ರಿಂಗ್ ಮಾಸ್ಟರ್ ಮಹಾನಾಯಕ ಆಗಿರಬಹುದೇ? ಮೀರ್‌ಸಾದಿಕ್ ಆಗಿರಬಹುದೇ?: ಬಿಜೆಪಿ