ದಾವಣಗೆರೆ: ದೇಶ ಸೇವೆ ಮಾಡಿದ ಸೈನಿಕರು ನಿವೃತ್ತಿಯ ನಂತರವೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನಿಯ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಹರಿಹರದ ವಿದ್ಯಾನಗರದಲ್ಲಿ ಮಾಜಿ ಅರೆ ಸೈನಿಕರ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಉದ್ಘಾಟಿಸಿ ಮಾತನಾಡಿ ಅವರು, ಸೈನಿಕರು ನಿವೃತ್ತಿಯಾದ ಮೇಲೆ ವಿಶ್ರಾಂತಿ ಜೀವನವನ್ನು ನಡೆಸುವವರೇ ಹೆಚ್ಚು. ಆದರೆ, ಅರೆಸೈನಿಕರು ಸಾರ್ವಜನಿಕರಲ್ಲಿ ಮತ್ತು ಮಕ್ಕಳಿಗೆ ಪರಿಸರ ರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಿಸುವುದು, ಮಳೆ ನೀರು ಶೇಖರಣೆ, ನೀರನ್ನು ಮಿತವಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯ ಯಶಸ್ವಿಯಾಗಲಿ ಎಂದು ಹರಸಿದರು.
![Basavaprabhu swamiji inaugurated the Rural Development Agency](https://etvbharatimages.akamaized.net/etvbharat/prod-images/kn-dvg-15-xarmy_15102019172119_1510f_1571140279_968.jpg)
ಈ ವೇಳೆ ಶಾಸಕ ಎಸ್. ರಾಮಪ್ಪ, ಸಂಸ್ಥೆಯ ಅಧ್ಯಕ್ಷರಾದ ಹೆಚ್. ಬಸವರಾಜ್, ಕಾರ್ಯದರ್ಶಿ ಎಂ. ಗಂಗಾದರ ಸೇರಿದಂತೆ ನಿವೃತ್ತ ಸೈನಿಕರು ಇದ್ದರು.