ದಾವಣಗೆರೆ: ಅಯ್ಯಪ್ಪ ಸ್ವಾಮಿಯ 21 ನೇ ವರ್ಷದ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಜರುಗಿತು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ವೈಭವದಿಂದ ಸ್ವಾಮಿಯ ಮೂರ್ತಿ ಮೆರವಣಿಗೆ ಮೂಲಕ ಪ್ರಮುಖ ಗ್ರಾಮದ ಬೀದಿಗಳಲ್ಲಿ 21 ನೇ ವರ್ಷದ ದೀಪೋತ್ಸವ ಕಾರ್ಯಕ್ರಮ ನೆರವೇರಿತು.
ಇನ್ನು ಈ ವೇಳೆ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳಿಗೆ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಹೆಜ್ಜೆ ಹಾಕುತ್ತಾ ಸ್ವಾಮಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಕೆಂಚಪ್ಪ ಸ್ವಾಮಿ, ಯೋಗಿಶ್ ಸ್ವಾಮಿ, ಲೋಕಪ್ಪ ಸ್ವಾಮಿ. ಅಜ್ಜಪ್ಪ ಸ್ವಾಮಿ ನಟರಾಜ್ ಸ್ವಾಮಿ. ಗುಡ್ಡಪ್ಪ ಸ್ವಾಮಿ ಸೇರಿದಂತೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಕ್ತರು ಗ್ರಾಮಸ್ಥರು ಭಾಗವಹಿಸಿದ್ದರು.