ದಾವಣಗೆರೆ: ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೊಳಗಾಗಿದ್ದ ಬ್ಯೂಟಿಷಿಯನ್ಗಳ ಕುರಿತು "ಈಟಿವಿ ಭಾರತ' ವರದಿ ಪ್ರಸಾರ ಮಾಡಿದ ಬಳಿಕ ನೆರವು ಸಿಕ್ಕಿದೆ.
ಕಳೆದ ಎರಡು ತಿಂಗಳಿಂದ ಯಾರ ಸಹಾಯ ಇಲ್ಲದೆ ಕಂಗೆಟ್ಟಿದ್ದ ನೂರಾರು ಬ್ಯೂಟಿಷಿಯನ್ಗಳಿಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೆರವು ನೀಡಿದ್ದಾರೆ. "ಸೌಂದರ್ಯ ಪ್ರಜ್ಞೆ ಮರೆತ ಜನ... ಬ್ಯೂಟಿಷಿಯನ್ಗಳ ಬದುಕು ಕಿತ್ತುಕೊಂಡ ಕೊರೊನಾ' ಎಂಬ ವಿಶೇಷ ವರದಿ ಪ್ರಸಾರ ಮಾಡಿತ್ತು. ಬಳಿಕ ನಮಗೆ ಸಹಾಯ ದೊರಕಿದ್ದು "ಈಟಿವಿ ಭಾರತ' ಕ್ಕೆ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: "ಸೌಂದರ್ಯ ಮರೆತ ಜನ... ಬ್ಯೂಟಿಷಿಯನ್ಗಳ ಬದುಕು ಕಿತ್ತುಕೊಂಡ ಕೊರೊನಾ'