ETV Bharat / state

ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ದಾವಣಗೆರೆ ಇಂದಿರಾ ಕ್ಯಾಂಟೀನ್​​ಗಳಿಗೆ ಜೀವಕಳೆ.. ಬೆಣ್ಣೆ ನಗರಿ ಜನ ಖುಷ್​ ! - ಮೂಲೆಗುಂಪಾಗಿದ್ದ ಇಂದಿರಾ ಕ್ಯಾಂಟೀನ್

ಹಿಂದೆ ಮೂಲೆಗುಂಪಾಗಿದ್ದ ಇಂದಿರಾ ಕ್ಯಾಂಟೀನ್​ಗಳಿಗೆ ಸೌಲಭ್ಯ ಒದಗಿಸಲು ಕಾಂಗ್ರೆಸ್ ಸರ್ಕಾರ ಆದೇಶಿಸಿದ್ದು, ಬಡವರ ಹಸಿವು ತಣಿಸುವ ಇಂದಿರಾ ಕ್ಯಾಂಟೀನ್​ಗಳು ನಗರದಲ್ಲಿ ನಿತ್ಯ ಸೇವೆಗೆ ನಿರತವಾಗಿವೆ.

Indira Canteen in Davangere
ದಾವಣಗೆರೆಯ ನಗರದ ಇಂದಿರಾ ಕ್ಯಾಂಟೀನ್​..
author img

By

Published : May 24, 2023, 8:16 PM IST

Updated : May 25, 2023, 5:36 PM IST

ದಾವಣಗೆರೆ ಇಂದಿರಾ ಕ್ಯಾಂಟೀನ್​​ಗಳಿಗೆ ಜೀವಕಳೆ

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಶುರುವಾಗುತ್ತಿದ್ದಂತೆ ದಾಣಗೆರೆ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್​ಗಳಿಗೆ ಮತ್ತೆ ಕಳೆ ಬಂದಿದೆ. ಹಿಂದೆ ಸಿದ್ದರಾಮಯ್ಯನ ಸರ್ಕಾರದಲ್ಲಿ ಕಡಿಮೆ ದರದಲ್ಲಿ ಬಡಜನರಿಗೆ ಊಟ ತಿಂಡಿ ಸಿಗಬೇಕೆಂಬ ಯೋಜನೆ ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇಂದಿರಾ ಕ್ಯಾಂಟೀನ್​ ಯೋಜನೆ ನಿರ್ಲಕ್ಷ್ಯಕ್ಕೊಳಪಟ್ಟಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇಂದಿರಾ ಕ್ಯಾಂಟೀನ್​ಗಳಿಗೆ ಸೌಲಭ್ಯ ಒದಗಿಸಲು ಆದೇಶಿಸಿದ್ದು,ಬಡವರ ಹಸಿವು ತಣಿಸಲು ಜಿಲ್ಲೆಯಲ್ಲಿ ಕಾರ್ಯನಿರತವಾಗಿವೆ.

ದಾವಣಗೆರೆಯಲ್ಲಿ ಬಡಜನ ಹೆಚ್ಚು ವಾಸ ಮಾಡ್ತಿರುವುದರಿಂದ ನಗರದಲ್ಲಿ ಎಂಟು ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲಾಗಿತ್ತು. ಬಡವರ್ಗದ ಜನರು ಹೆಚ್ಚು ಕ್ಯಾಂಟೀನ್ ಆಹಾರಕ್ಕೆ ಹೊಂದಿಕೊಂಡಿದ್ದರು. ಇವರೆಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸೇವಿಸಿ, ಸಿದ್ದರಾಮಯ್ಯ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ 2018ರಲ್ಲಿ ಆರಂಭವಾಗಿದ್ದ ಎಂಟು ಕ್ಯಾಂಟೀನ್ ಗಳನ್ನು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸರಾಗವಾಗಿ ನಡೆದುಕೊಂಡು ಹೋಗ್ತಿದ್ದವು. ಅದ್ರೇ 2018 ರಲ್ಲಿ ಸಮ್ಮಿಶ್ರ ಸರ್ಕಾರ ಬಳಿಕ ಬಿಜೆಪಿ ಸರ್ಕಾರ ಆಡಳಿತ ಬರುತ್ತಿದ್ದಂತೆ ಕ್ಯಾಂಟೀನ್​ಗಳು ಮೂಲೆಗುಂಪಾಗಿದ್ದವು. ಹಿಂದಿನ ಸರ್ಕಾರ ಕ್ಯಾಂಟೀನ್​​ಗಳ ನಿರ್ವಹಣೆಗೆ ಹಣ ಇಲ್ಲವೆಂದಿದ್ದಕ್ಕೆ ಕೆಲ ಇಂದಿರಾ ಕ್ಯಾಂಟೀನ್ ಗಳು ಮುಚ್ಚಲ್ಪಟ್ಟಿದ್ದವು.

ಇನ್ನು ಕೆಲವು ಬೇಕೋ ಬೇಡ್ವೋ ಎಂಬಂತೆ ನಡೆದುಕೊಂಡು ಬಂದಿದ್ದು, ಕಣ್ ಮುಂದೇನೆ ಆಗಿದೆ. ಅದೇ ಇದೀಗ ಬಡ ವರ್ಗದ ಜನ ಕಡಿಮೆ ಹಣದಲ್ಲಿ ಊಟ ಮಾಡುವ ಅವಕಾಶ ಮತ್ತೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಒದಗಿಸಿದ್ದಾರೆ. ಅದರ ಬೆನ್ನಲ್ಲೆ ಇನ್ನೂ ದಾವಣಗೆರೆ ನಗರದ ಎಂಟು ಕ್ಯಾಂಟೀನ್​​ಗಳು ಮತ್ತೆ ಆರಂಭಗೊಂಡು ಬಡವರ್ಗದ ಜನರಿಗೆ ಸಾಥ್ ನೀಡಲಿವೆ.

ಈಗಾಗಲೇ ನಗರದಲ್ಲಿ ಎಂಟು ಇಂದಿರಾ ಕ್ಯಾಂಟೀನ್​ಗಳು ಆರಂಭವಾಗಿದ್ದು, ಜನ ಖುಷಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ನೆನೆದು ಊಟ ಉಪಹಾರ ಸೇವಿಸುತ್ತಿದ್ದಾರೆ. ಈ ವೇಳೆ ಇಂದಿರಾ ಕ್ಯಾಂಟೀನ್​ದಲ್ಲಿ ಊಟ ಸವಿದ ಗದಿಗೆಪ್ಪ ನಾಯಕ್ ಈಟಿವಿ ಭಾರತದೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ್ ಊಟ ಚೆನ್ನಾಗಿದೆ. ಕಡಿಮೆ ದರದಲ್ಲಿ ಬಡವರಿಗೆ ಊಟ ತಿಂಡಿ ಸಿಗಲಿದೆ. ಶುಚಿ ಹಾಗೂ ಗುಣಮಟ್ಟತೆ ಇಂದಿರಾ ಕ್ಯಾಂಟಿನ್​ಗಳು ಅಳವಡಿಸಿಕೊಳ್ಳಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದರಿಂದ ಇಂದಿರಾ ಕ್ಯಾಂಟೀನ್​ ಯೋಜನೆ ಸಫಲಗೊಳಿಸಬೇಕು. ಇಂದಿರಾ ಕ್ಯಾಂಟೀನ್​​ನಲ್ಲಿ ಸೌಲಭ್ಯಗಳು ಕಡಿಮೆ ಇದ್ದು, ಒಳ್ಳೆ ಊಟ ಸಿಗಲು ಹೆಚ್ಚುವರಿ ಅನುದಾನ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.

ಈಟಿವಿ ಭಾರತ ಜೊತೆಗೆ ದಾವಣಗೆರೆ ಮಹಾನಗರ ಪಾಲಿಕೆ ಕಮಿಷನರ್ ರೇಣುಕಾ ಅವರು ಮಾತನಾಡಿ, ನಗರದಲ್ಲಿ ಎಂಟು ಕ್ಯಾಂಟೀನ್​ಗಳಿದ್ದು, ಅನುದಾನದ ಕೊರತೆಯಿಂದ ಇಂದಿರಾ ಕ್ಯಾಂಟೀನ್​ಗಳು ಆಮೆಗತಿಯಲ್ಲಿ ಕಾರ್ಯ ನಿರ್ವಹಿಸಿದ್ದವು. ಶೇ. 70 ರಷ್ಟು ಅನುದಾನ ಮಹಾನಗರ ಪಾಲಿಕೆಯಿಂದ ಉಳಿದ ಶೇ. 30% ರಷ್ಟು ಅನುದಾನ ಕಾರ್ಮಿಕ ಇಲಾಖೆಯಿಂದ ಸಂದಾಯ ಮಾಡ್ಬೇಕಾಗುತ್ತದೆ.

ದಿನದ ಮೂರು ಹೊತ್ತಿಗೆ 500 ಪ್ಲೇಟ್ ಊಟ ಎಂಬಂತೆ ನಿಗದಿ ಮಾಡಲಾಗಿತ್ತು, ರಾತ್ರಿ ಊಟ ಹೋಗದಿರುವುದರಿಂದ ಅದನ್ನು ಕಡಿಮೆ ಪ್ಲೇಟ್ ಮಾಡಿ, ಬೆಳಗ್ಗೆ, ಮಧ್ಯಾಹ್ನಕ್ಕೆ ನೀಡುವಂತೆ ಸರ್ಕಾರ ಸೂಚಿಸಿದೆ. ಹೊಸ ಸರ್ಕಾರ ಬಂದ ಬಳಿಕ ಊಟದ ಗುಣಮಟ್ಟ ಚೆನ್ನಾಗಿರಬೇಕು. ಕ್ಯಾಂಟೀನ್​ಗಳು ಸ್ವಚ್ಛವಾಗಿರಬೇಕೆಂದು ನಿರ್ದೇಶಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಇಂದಿರಾ ಕ್ಯಾಟೀನ್​ಗಳಿಗೆ ಭೇಟಿ ನೀಡಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕ್ವಿಕ್ ಕಾಮರ್ಸ್​ ವಿಸ್ತಾರ: ಡೆಲಿವರಿ ಬಾಯ್​ಗಳಿಗೆ ಹೆಚ್ಚುತ್ತಿರುವ ಬೇಡಿಕೆ

Last Updated : May 25, 2023, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.