ದಾವಣಗೆರೆ : ಸಾಗುವಾನಿ ಮರದ ತುಂಡುಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ನಾಗರಕಟ್ಟೆ ಗ್ರಾಮದ ಮಂಜನಾಯ್ಕ, ನಾಗೇಶ್ ನಾಯ್ಕ, ಸುರೇಶ್ ನಾಯ್ಕ, ಮಂಜನಾಯ್ಕ, ಸುರೇಶ್ ನಾಯ್ಕ, ಲೋಕೇಶ್ ನಾಯ್ಕ ಬಂಧಿತ ಆರೋಪಿಗಳು. ಎಲೆಬೇತೂರಿನ ಬಾಲರಾಜು ಎಂಬುವವರು ಎರಡು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಗಾಗಿ ಸಾಗುವಾನಿ ಮರ ಕಡಿದು ತುಂಡುಗಳನ್ನು ತನ್ನ ಜಮೀನಿನ ಶೆಡ್ನಲ್ಲಿ ದಾಸ್ತಾನು ಇಟ್ಟಿದ್ದರು. ಜುಲೈ 5 ರಂದು ಅದು ಕಳ್ಳತನವಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಬೇರೆ ಬೇರೆ ಕಡೆಗಳಲ್ಲಿ ಮಾರಾಟ ಮಾಡಿದ್ದ 1 ಲಕ್ಷ ರೂಪಾಯಿ ಮೌಲ್ಯದ ಸಾಗುವಾನಿ ಹಾಗೂ ಮಾವಿನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಇದೇ ಮೊದಲ ಬಾರಿಗೆ ಈ ಕೃತ್ಯ ಎಸಗಿದ್ದಾರೋ ಅಥವಾ ಈ ಹಿಂದೆಯೂ ಕಳ್ಳತನ ಮಾಡಿದ್ದಾರೋ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.