ETV Bharat / state

ದಾವಣಗೆರೆಯಲ್ಲಿ ನರ್ಸ್​​ಗೆ ಕೊರೊನಾ‌ ಸೋಂಕು ದೃಢ: ಆತಂಕದಲ್ಲಿ ಜನತೆ

ಎರಡು ದಿನಗಳ ಹಿಂದೆ ನರ್ಸ್​ವೊಬ್ಬರು ಮೈ ಕೈ ನೋವು, ತಲೆನೋವು ಇದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿದ್ದ ಮಹಿಳೆಯ ಪರೀಕ್ಷಾ ವರದಿ ಬಂದಿದ್ದು, ಪಾಸಿಟಿವ್ ಎಂದು ದೃಢಪಟ್ಟಿದೆ. ಆಕೆಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.

Another corona positive case reported in Davanagere
ದಾವಣಗೆರೆಯಲ್ಲಿ ನರ್ಸ್​​ಗೆ ಕೊರೊನೊ‌ ಸೋಂಕು ದೃಢ: ಆತಂಕದಲ್ಲಿ ಜನತೆ
author img

By

Published : Apr 29, 2020, 6:59 PM IST

ದಾವಣಗೆರೆ: ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕಳೆದ 28 ದಿನಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಣ್ಣೆ ನಗರಿ ಮಂದಿಗೆ ಶಾಕ್ ಆಗಿದೆ. ಸದ್ಯ ಗ್ರೀನ್ ಝೋನ್​​​ನಲ್ಲಿದ್ದ ದಾವಣಗೆರೆಯಲ್ಲಿ ಈಗ ಆತಂಕ ಶುರುವಾಗಿದೆ. ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿದ್ದ ಮಹಿಳೆಯ ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದಿದೆ.

ಎರಡು ದಿನಗಳ ಹಿಂದೆ ಮೈ ಕೈ ನೋವು, ತಲೆನೋವು ಇದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗದ ಪ್ರಯೋಗಾಲಯಕ್ಕೆ ಗಂಟಲು ದ್ರವದ ಮಾದರಿ ಕಳುಹಿಸಲಾಗಿತ್ತು.‌ ಇದೀಗ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ನರ್ಸ್​​ಗೆ ಕೊರೊನೊ‌ ಸೋಂಕು ದೃಢ: ಆತಂಕದಲ್ಲಿ ಜನತೆ

ಬಾಷಾ ನಗರದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆ ಆಗುತ್ತಿದ್ದಂತೆ ಆ ಪ್ರದೇಶವನ್ನು ಸೀಲ್​ ​ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಆಕೆಯ ಗಂಡ, ಇಬ್ಬರು ಮಕ್ಕಳು ಸೇರಿದಂತೆ ಹಲವರ ಮಾದರಿ ಪರೀಕ್ಷೆಗಾಗಿ ಕಳುಹಿಸುತ್ತೇವೆ. ಆಕೆಯ ಪುತ್ರ ವಿಜಯಪುರ ಅಥವಾ ಬಾಗಲಕೋಟೆಗೆ ಹೋಗಿ ಬಂದಿರಬಹುದು ಎಂಬ ಶಂಕೆ ಇದೆ. ಕೊರೊನಾ ಸೋಂಕು ಇದ್ದ ಜಿಲ್ಲೆಗಳಿಗೆ ಹೋಗಿ ಬಂದಿದ್ದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ.

ನಿಟ್ಟುವಳ್ಳಿಯ ಮನೆಯಲ್ಲಿ ಕೆಲ ದಿನಗಳ ಕಾಲ ಆಕೆ ಪುತ್ರ ಇದ್ದ ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಟ್ರಾವೆಲ್ ಹಿಸ್ಟರಿ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದರೆ ಪೊಲೀಸರು ನೋಡಿಕೊಳ್ಳುತ್ತಾರೆ. ಮೊಬೈಲ್​ ಕರೆ ಸೇರಿದಂತೆ ತಾಂತ್ರಿಕತೆ ಬಳಸಿ ಪತ್ತೆ ಹಚ್ಚುತ್ತೇವೆ. ಆಕೆ ಮನೆ ಸುತ್ತಮುತ್ತ 100 ಮೀಟರ್ ಕಂಟೈನ್​ಮೆಂಟ್ ಝೋನ್​ ಮಾಡಲಾಗಿದೆ ಎಂದು ಹೇಳಿದರು.

ಹೆರಿಗೆ ಮಾಡಿಸಿದ್ದ ಕೊರೊನಾ ಸೋಂಕಿತ ಮಹಿಳೆ!

23ರಂದು ಸೋಂಕಿತ ಮಹಿಳೆಯು ಬಾಷಾ ನಗರದಲ್ಲಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆಯ ಪತಿ ಒತ್ತಾಯಿಸಿದ್ದರಿಂದ ಸೋಂಕಿತ ನರ್ಸ್ ಹೆರಿಗೆ ಮಾಡಿಸಿದ್ದಾರೆ. ಬಾಣಂತಿ ಮನೆಗೆ ಭೇಟಿ ನೀಡಿದ್ದು, ತಾಯಿ, ಮಗು ಚೆನ್ನಾಗಿದ್ದಾರೆ. ಆದರೂ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುವುದು. ಪ್ರಾಥಮಿಕ ಸಂಪರ್ಕದಲ್ಲಿದ್ದ ಜನರನ್ನು ಕ್ವಾರಂಟೈನ್​ಗೆ ಹಾಗೂ ಅವರನ್ನೂ ಪರೀಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.