ETV Bharat / state

ಜೆಡಿಎಸ್​ ಅಧಿಕಾರಕ್ಕೆ ಬಂದ್ರೆ ಹಿರಿಯ ನಾಗರಿಕರಿಗೆ 5000 ರೂ ಮಾಶಾಸನ, ಮಹಿಳಾ ಸಂಘಗಳ ಸಾಲಮನ್ನಾ: ಹೆಚ್​ಡಿಕೆ - ಭವಾನಿ ರೇವಣ್ಣಗೆ ಟಿಕೆಟ್ ಸುಳಿವು ನೀಡಿದ ಹೆಚ್​ಡಿಕೆ

ಎರಡನೇ ಹಂತದದಲ್ಲಿ 40 ರಿಂದ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - ಜೆಡಿಎಸ್​ ಅಧಿಕಾರಕ್ಕೆ ಬಂದ್ರೆ ಮಹಿಳಾ ಸಂಘ, ಹಿರಿಯ ನಾಗರಿಕರು ವಿಕಲಚೇತನರಿಗೆ ಮಾಶಾಸನ ಹೆಚ್ಚಳ- ಕುಮಾರಸ್ವಾಮಿ ಭರವಸೆ

an-important-meeting-likely-to-finalize-the-ticket-issue-for-bhavani-revanna
ಫೆ.04ರಂದು ಮಹತ್ವದ ಸಭೆ, ಭವಾನಿ ರೇವಣ್ಣಗೆ ಟಿಕೆಟ್ ಸುಳಿವು ನೀಡಿದ ಹೆಚ್​ಡಿಕೆ
author img

By

Published : Jan 31, 2023, 9:38 PM IST

ದಾವಣಗೆರೆ: ಫೆಬ್ರವರಿ ನಾಲ್ಕನೇ ತಾರೀಖಿನಂದು ಜೆಡಿಎಸ್​ ಪಕ್ಷದ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಭವಾನಿ ರೇವಣ್ಣಗೆ ಟಿಕೆಟ್ ನೀಡುವ ಸುಳಿವು ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಮಾತನಾಡಿದ ಅವರು, ಫೆಬ್ರವರಿ 4ರಂದು ಪಕ್ಷದ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಯಲಿದ್ದು, ಎರಡನೇ ಹಂತದಲ್ಲಿ ಸುಮಾರು 40 ರಿಂದ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಭವಾನಿ ರೇವಣ್ಣ ವಿಚಾರದ ಬಗ್ಗೆ ಯಾವುದೇ ಗೊಂದಲವಿಲ್ಲಾ, ಈಗಾಗಲೇ ಚರ್ಚೆ ನಡೆದಿದ್ದು, ನಾಲ್ಕನೇ ತಾರೀಖಿನಂದು ಸ್ಪಷ್ಟ ಸಂದೇಶ ಹೊರ ಬರಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು.? : ರಾಜ್ಯದಲ್ಲಿ ಇನ್ನೂ ಮೂರು ತಿಂಗಳಿನಲ್ಲಿ ಚುನಾವಣೆ ಇದೆ ಅದಕ್ಕಾಗಿ ಪ್ರಧಾನಿ ಮೋದಿ ಅವರು ಪದೇ ಪದೇ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ, ರಾಜ್ಯಕ್ಕೆ ಅವರ ಕೊಡುಗೆ ಏನು?. ರಾಜ್ಯದಲ್ಲಿ ನೀರಾವರಿ ಸಮಸ್ಯೆಗಳಿಗೆ ಎನು ಉತ್ತರ ಕೊಟ್ಟಿದ್ದಾರೆ?. ಈ ಒಂಬತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ಕೊಟ್ಟಂತಹ ಕೊಡುಗೆಗಳೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಫೆ.04ರಂದು ಮಹತ್ವದ ಸಭೆ, ಭವಾನಿ ರೇವಣ್ಣಗೆ ಟಿಕೆಟ್ ಸುಳಿವು ನೀಡಿದ ಹೆಚ್​ಡಿಕೆ
ಫೆ.04ರಂದು ಮಹತ್ವದ ಸಭೆ, ಭವಾನಿ ರೇವಣ್ಣಗೆ ಟಿಕೆಟ್ ಸುಳಿವು ನೀಡಿದ ಹೆಚ್​ಡಿಕೆ

ಹರಿಹರದಲ್ಲಿ ಪಂಚರತ್ನ ಯಾತ್ರೆಗೆ ಅದ್ಧೂರಿ ಸ್ವಾಗತ : 59ನೇ ದಿನಕ್ಕೆ ಕಾಲಿಟ್ಟ ಪಂಚರತ್ನ ರಥಯಾತ್ರೆ ದಾವಣಗೆರೆಯ ಹರಿಹರಕ್ಕೆ ಆಗಮಿಸಿದೆ, ಹರಿಹರದ ಕೊಂಡಜ್ಜಿ ಕೆರೆಗೆ ಆಗಮಿಸಿದ ಪಂಚರತ್ನ ಯಾತ್ರೆಯ ರಥವನ್ನು ಭಾರೀ ಪ್ರಮಾಣದಲ್ಲಿ ಸೇರಿದ್ದ ಸಾರ್ವಜನಿಕರು, ಮತ್ತು ಜೆಡಿಎಸ್ ಕಾರ್ಯಕರ್ತರು ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು.

ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಮಾತನಾಡಿದ ಹೆಚ್​ಡಿಕೆ, 2018ರಲ್ಲಿ ಮುಖ್ಯಮಂತ್ರಿ ಆದ ಸಮಯದಲ್ಲಿ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದೆ, ಆ ಸಮಯದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ ಮಾಡಿದ್ದೆ, ಆದರೆ, ಕಾಂಗ್ರೆಸ್ ಪಕ್ಷ ರೈತರ ಸಾಲ ಮನ್ನಾ ಮಾಡಲು ಯಾವುದೇ ಸಹಕಾರ ಕೊಡಲಿಲ್ಲ. ಆದರೂ ಹಠ ಬಿಡದೆ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ. ಕೊಂಡಜ್ಜಿ ಗ್ರಾಮ ಒಂದರಲ್ಲೇ 85 ಲಕ್ಷ ರೂ. ರೈತರ ಸಾಲ ಮನ್ನಾ ಆಗಿದೆ ಎಂದು ಹೆಚ್​ಡಿಕೆ ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ವಿಧವಾ ವೇತನವನ್ನು 800 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಳ ಮಾಡುವೆ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾಸಿಕ 5000 ಮಾಸಾಶನ ಕೊಡುವೆ, ವಿಕಲಚೇತನರಿಗೆ ಮಾಸಿಕ 1200 ಮಾಶಾಸನ ಇದ್ದು, ಅದನ್ನು 2500ಕ್ಕೆ ಹೆಚ್ಚಿಸುವೆ. ಹಾಗೆಯೇ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದರು.

ರೈತರಿಗೆ ನಿತ್ಯ 24 ಗಂಟೆಯೂ ಉಚಿತ ವಿದ್ಯುತ್ : ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ, ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡುತ್ತೇನೆ, ಬಿತ್ತನೆ ಮಾಡುವ ಕಾಲಕ್ಕೆ ಸರಿಯಾಗಿ ಪ್ರತಿ ವರ್ಷ ಎಕರೆಗೆ 10 ಸಾವಿರ ರೂ. ಕೊಡಲಾಗುವುದು ಮತ್ತು ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ, ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ, ರೈತರಿಗೆ ನಿತ್ಯ 24 ಗಂಟೆಯೂ ಉಚಿತ ವಿದ್ಯುತ್ ಜೊತೆಗೆ ರಾಜ್ಯದಲ್ಲಿ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ನನ್ನ ಗುರಿ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಡ್ರೈವರ್ ಆಗಲು ಮ್ಯಾನೇಜರ್ ಹುದ್ದೆ ತೊರೆದ ಮಹಿಳೆ: ಸಾರಿಗೆ ಸಂಸ್ಥೆಯಲ್ಲಿ ಮಹಿಳಾ ಡ್ರೈವರ್​ಗಳ ಯುಗಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.