ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2019-20ನೇ ಸಾಲಿಗೆ ಪ್ರವೇಶಾತಿ ಪ್ರಾರಂಭಗೊಂಡಿದೆ. ಯುಜಿಸಿ ನಿಯಮಾವಳಿಯಂತೆ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯವಾಕ್ಯದಿಂದ ರಾಜ್ಯದ ವಿವಿಧೆಡೆ ಮುಕ್ತ ವಿವಿ ದೂರಶಿಕ್ಷಣ ನೀಡುತ್ತಿದೆ ಎಂದು ದಾವಣಗೆರೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಸುಧಾಕರ ಹೊಸಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ವಿವಿ ಸುಸಜ್ಜಿತ ಮೂಲ ಸೌಕರ್ಯಗಳನ್ನು ಒಳಗೊಂಡಿದ್ದು, ಅನುಭವಿ ಅಧ್ಯಾಪಕರ ನೆರವಿನಿಂದ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು .
2019-20ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದ್ದು, ದಂಡ ಶುಲ್ಕವಿಲ್ಲದೆ ಜನವರಿ 31 ರೊಳಗೆ ಪ್ರವೇಶಾತಿ ಪಡೆಯಬಹುದು, ಉಳಿದಂತೆ 200ರೂ ದಂಡದೊಂದಿಗೆ ಫೆ. 18 ಹಾಗೂ 400ರೂ ದಂಡದೊಂದಿಗೆ ಫೆ. 29ರೊಳಗೆ ಪ್ರವೇಶಾತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.