ETV Bharat / state

4 ದಿನ ಗಾರೆ ಕೆಲಸ, 3 ದಿನ ಕಾಲೇಜಿಗೆ ಹೋಗಿ ಇಂಗ್ಲಿಷ್ ಎಂಎನಲ್ಲಿ ರ‍್ಯಾಂಕ್​ ಪಡೆದ ಯುವಕ

author img

By

Published : Apr 15, 2022, 5:15 PM IST

Updated : Apr 15, 2022, 8:22 PM IST

ಮನೆಯಲ್ಲಿ ಬಡತನವಿದ್ದ ಕಾರಣ ತಂದೆಯೊಂದಿಗೆ ಗಾರೆ ಕೆಲಸಕ್ಕೆ ಹೋಗಿ, ಜೊತೆಯಲ್ಲೇ ಎಂಎ ಇಂಗ್ಲಿಷ್​​ ಪದವಿ ಓದುವ ಮೂಲಕ ದಾವಣಗೆರೆಯ ಯುವಕ ರಾಝೀಕ್ ಉಲ್ಲಾ ರ‍್ಯಾಂಕ್ ಪಡೆದಿದ್ದಾನೆ.

Get a gold medal in MA in English
ಗಾರೆ ಕೆಲಸ ಮಾಡ್ತಾ ಎಂಎ ಇನ್​ ಇಂಗ್ಲಿಷ್​ನಲ್ಲಿ ರ‍್ಯಾಂಕ್

ದಾವಣಗೆರೆ: ರಾಝೀಕ್ ಉಲ್ಲಾ ಇವರು ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದವರು. ಬಡತನವಿರುವ ಕುಟುಂಬದಲ್ಲಿ ಜನಿಸಿ, ಈಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಇವರು ಎಂಎ ಇಂಗ್ಲಿಷ್​ನಲ್ಲಿ ಯೂನಿವರ್ಸಿಟಿ ಟಾಪರ್ ಆಗಿ, ಎರಡು ಚಿನ್ನದ ಪದಕ ಗೆದ್ದಿದ್ದಾರೆ.

ತಂದೆ ಕಷ್ಟ ನೋಡಲಾಗದೇ ಕೆಲಸಕ್ಕೆ ಹೋದ ಮಗ: ಜಮಾಲ್ದೀನ್ ಸಾಬ್ ಹಾಗೂ ಶಕೀಲಾ ಬಾನು ದಂಪತಿ ಪುತ್ರ ರಾಝೀಕ್ ಉಲ್ಲಾ. ಜಮಾಲ್ದೀನ್ ಸಾಬ್​ ಗಾರೆ ಕೆಲಸ ಮಾಡುತ್ತಿದ್ದರು. ದಿನವಿಡೀ ಕಷ್ಟಪಟ್ಟರೂ ಮನೆಯ ಆರು ಮಂದಿಗೆ ಊಟ ಹಾಕಲು ಅವರು ಹರಸಾಹಸ ಪಡುತ್ತಿದ್ದರು. ರಾಝೀಕ್​​ಗೆ ತಂದೆಯ ಕಷ್ಟ ನೋಡಲಾಗಲಿಲ್ಲ. ಹಾಗಾಗಿ ಅವನೂ ಕೆಲಸಕ್ಕೆ ಹೋಗತೊಡಗಿದ. ದಿನವಿಡೀ ಗಾರೆ ಕೆಲಸ ಮಾಡ ತೊಡಗಿದ. ಆದ್ರೆ ಶಿಕ್ಷಣವನ್ನು ಮುಂದುವರಿಸಬೇಕು ಎಂಬುದು ಆತನ ಆಸೆಯಾಗಿತ್ತು. ಹೀಗಾಗಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮುಂದುವರಿಸಿದ.

ಇಂಗ್ಲಿಷ್ ಎಂಎನಲ್ಲಿ ರ‍್ಯಾಂಕ್​ ಪಡೆದ ಯುವಕ
ಇಂಗ್ಲಿಷ್ ಎಂಎನಲ್ಲಿ ರ‍್ಯಾಂಕ್​ ಪಡೆದ ಯುವಕ

3 ದಿನ ಮಾತ್ರ ಕಾಲೇಜು​​: ರಾಝೀಕ್ ವಾರದಲ್ಲಿ ಮೂರು ದಿನ ಮಾತ್ರ ಕಾಲೇಜಿಗೆ ಹೋಗಿ ಪಾಠ ಕೇಳುತ್ತಿದ್ದರು. ಉಳಿದ ನಾಲ್ಕು ದಿನ ಗಾರೆ ಕೆಲಸ ಮಾಡುತ್ತಿದ್ದರು. ದಾವಣಗೆರೆ ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ಸಹಪಾಠಿಗಳು ಇವರ ಕಷ್ಟ ನೋಡಿ ಸಹಾಯ ಮಾಡಿದ್ದಾರೆ. ಇದೀಗ ರಾಝೀಕ್​​ ವಿಶ್ವವಿದ್ಯಾಲಯದ ಟಾಪರ್ ಆಗಿದ್ದು, ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ರಾಝೀಕ್ ಅವರ ಸಾಧನೆ ಬಗ್ಗೆ ತಿಳಿದ ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ. ಇತ್ತೀಚೆಗೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಝೀಕ್ ಅವರನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ: ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮನೆಗಳ ನಿರ್ಮಾಣ

Last Updated : Apr 15, 2022, 8:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.