ETV Bharat / state

'ಈಟಿವಿ ಭಾರತ' ಫಲಶ್ರುತಿ: ಸಿಎಂ ತವರಿನ ಮಹಿಳೆ ಸುರಕ್ಷಿತವಾಗಿ ಕುಲುಮನಾಲಿಯಿಂದ ವಾಪಸ್​​​! - ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ರ

ಕಳೆದ ನಾಲ್ಕು ವರ್ಷಗಳಿಂದ ಹಿಮಾಚಲ ಪ್ರದೇಶದ ಕುಲುಮನಾಲಿಯಲ್ಲಿ ಉಳಿದು ಭಾಷಾ ಸಮಸ್ಯೆಯಿಂದ ತವರಿಗೆ ಬರಲಾಗದೇ ಒದ್ದಾಡುತ್ತಿದ್ದ ಮಹಿಳೆಯನ್ನು ಕರ್ನಾಟಕಕ್ಕೆ ಕರೆತರಲಾಗಿದೆ.

ಈಟಿವಿ ಭಾರತ್​ ಬಿಗ್ ಇಂಪ್ಯಾಕ್ಟ್
author img

By

Published : Oct 9, 2019, 7:10 PM IST

ದಾವಣಗೆರೆ: ಕಳೆದ ನಾಲ್ಕು ವರ್ಷಗಳಿಂದ ಹಿಮಾಚಲ ಪ್ರದೇಶಗಳ ಕುಲುಮನಾಲಿ ತಾಲೂಕಿನ ಕಲಾತ್​ನಲ್ಲೇ ಉಳಿದಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹೆಸ್ರಿ ಗ್ರಾಮದ ಸುಶೀಲಮ್ಮ ಎಂಬುವರು ಕೊನೆಗೂ ತವರಿಗೆ ಮರಳಿದ್ದಾರೆ.

ಭಾಷಾ ಸಮಸ್ಯೆಯಿಂದ ಒದ್ದಾಡುತ್ತಿದ್ದ ಸುಶೀಲಮ್ಮ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದು 'ಈಟಿವಿ ಭಾರತ್'. ವರದಿ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಾವಣಗೆರೆ ಜಿಲ್ಲಾಡಳಿತ ಸುಶೀಲಮ್ಮರನ್ನು ಕರೆತರುವಲ್ಲಿ ಕೊನೆಗೂ ಯಶಸ್ವಿ ಆಗಿದೆ. ಉಕ್ಕಡಗಾತ್ರಿ ಅಂತಾ ಮಾತ್ರ ಹೇಳುತ್ತಿದ್ದ ಆಕೆಯನ್ನ ಕರೆತರುವಂತೆ ಹಿಂದಿನ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಅವರಿಗೆ ಸೂಚನೆ ನೀಡಿದ್ದರು. ಬಳಿಕ ಕಳೆದ ಮಾರ್ಚ್ 10ರಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಯೋಜನಾ ನಿರ್ದೇಶಕ ದುರುಗೇಶ್ ಕುಲುಮನಾಲಿಗೆ ತೆರಳಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರಾದ ಸುಶೀಲ ಶರ್ಮಾ ಅವರನ್ನು ಭೇಟಿ ಮಾಡಿ ಸುಶೀಲಮ್ಮರನ್ನು ವಾಪಾಸ್ ತವರಿಗೆ ಕರೆದುಕೊಂಡು ಬರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದು ಬಂದಿದ್ದರು.

'ಈಟಿವಿ ಭಾರತ' ಬಿಗ್ ಇಂಪ್ಯಾಕ್ಟ್

ಸುಶೀಲಮ್ಮ ಮಾನಸಿಕ ಅಸ್ವಸ್ಥರಾದ ಕಾರಣ ವಾಪಸ್ ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ.‌ ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗಿತ್ತು. ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ರ ಮುಖೇನ ಕಾನೂನಿನ ಪ್ರಕಾರ ವಾಪಸ್ ಕರ್ನಾಟಕಕ್ಕೆ ಸುಶೀಲಮ್ಮರನ್ನ ಕರೆತರುವ ಪ್ರಯತ್ನ ನಡೆಸಿತು. ತಮ್ಮನ್ನು ತವರಿಗೆ ಮರಳಿ ಕರೆತರುವ ಪ್ರಯತ್ನದಲ್ಲಿ ಈಟಿವಿ ಭಾರತ ಯಶಸ್ವಿಯಾಗಿದ್ದು, ವಾಪಸ್ ಬಂದ ಸುಶೀಲಮ್ಮ ಈಟಿವಿ ಭಾರತ್​ಗೆ ಧನ್ಯವಾದ ಹೇಳಿದ್ದಾರೆ.

Intro:ರಿಪೋರ್ಟರ್ : ಯೋಗರಾಜ್

ಸಿಎಂ ತವರಿನ ಮಹಿಳೆ ಮನಾಲಿಯಿಂದ ತವರಿಗೆ ವಾಪಾಸ್ ಆದ ರೋಚಕ ಸ್ಟೋರಿ...!

ಈಟಿವಿ ಭಾರತ್ ಸತತ ಪರಿಶ್ರಮ ಸಕ್ಸಸ್... ಬಿಗ್ ಇಂಪ್ಯಾಕ್ಟ್

ದಾವಣಗೆರೆ: ಕಳೆದ ನಾಲ್ಕು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಮನಾಲಿ ತಾಲೂಕಿನ ಕಲಾತ್ ನಲ್ಲಿದ್ದ ಸಿಎಂ ಬಿ. ಎಸ್. ಯಡಿಯೂರಪ್ಪ ತವರು ಶಿಕಾರಿಪುರ ತಾಲೂಕಿನ ಗಾಮ ಗ್ರಾಮ ಬಳಿಯ ಹೆಸ್ರಿಯ ಸುಶೀಲಮ್ಮ ಅಂತೂ ತವರಿಗೆ ಮರಳಿದ್ದು, ಇದು "ಈಟಿವಿ ಭಾರತ್' ನ ಬಿಗ್ ಇಂಪ್ಯಾಕ್ಟ್.

ಭಾಷಾ ಸಮಸ್ಯೆಯಿಂದ ಒದ್ದಾಡುತ್ತಿದ್ದ ಸುಶೀಲಮ್ಮರ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದು "ಈಟಿವಿ ಭಾರತ್'. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಾವಣಗೆರೆ ಜಿಲ್ಲಾಡಳಿತ ಸುಶೀಲಮ್ಮರನ್ನು ಕರೆತರುವಲ್ಲಿ ಕೊನೆಗೂ ಯಶಸ್ವಿ ಆಗಿದೆ. ಉಕ್ಕಡಗಾತ್ರಿ ಅಂತಾ ಮಾತ್ರ ಹೇಳುತ್ತಿದ್ದ ಆಕೆಯನ್ನ ಕರೆತರುವಂತೆ ಹಿಂದಿನ ಜಿಲ್ಲಾಧಿಕಾರಿ ಜಿ. ಎನ್‌ ಶಿವಮೂರ್ತಿ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಅವರಿಗೆ ಸೂಚನೆ ನೀಡಿದ್ದರು.

ಬಳಿಕ ಕಳೆದ ಮಾರ್ಚ್ ೧೦ ರಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಯೋಜನಾ ನಿರ್ದೇಶಕ ದುರುಗೇಶ್ ಮನಾಲಿಗೆ ತೆರಳಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರಾದ ಸುಶೀಲ ಶರ್ಮಾ ಅವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಆದರ್ಶ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸತ್ವಿಂದ್ರ ಸಿಂಗ್ ಹಾಗೂ ಯೋಜನಾ ನಿರ್ದೇಶಕಿ ಅನಿತಾ ಠಾಕೂರ್ ಜೊತೆ ಚರ್ಚಿಸಿ ಸುಶೀಲಮ್ಮರ ವಾಪಾಸ್ ಕರುನಾಡಿಗೆ ಕರೆದುಕೊಂಡು ಬರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದು ಬಂದಿದ್ದರು.

ಸುಶೀಲಮ್ಮ ಸಿಎಂ ಯಡಿಯೂರಪ್ಪರ ತವರು ಶಿಕಾರಿಪುರದ ಗಾಮ ಬಳಿಯ ಹೆಸ್ರಿಯವರು...!

ಉಕ್ಕಡಗಾತ್ರಿ ಅಂತಾ ಹೇಳುತ್ತಿದ್ದ ಸುಶೀಲಮ್ಮ ಮೊದಲು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕುರುಬಗೊಂಡ ಗ್ರಾಮದವರು ಎಂದು ಹೇಳಲಾಗಿತ್ತು. ಆದ್ರೆ ತನ್ನ ಪತಿ ನಾಗಪ್ಪನ ಜೊತೆ ಕೆಲ ವರ್ಷ ಇಲ್ಲಿ ವಾಸವಾಗಿದ್ದರು. ಆದ್ರೆ, ಸುಶೀಲಮ್ಮ ಸಿಎಂ ಬಿ. ಎಸ್. ಯಡಿಯೂರಪ್ಪರ ತವರು ಶಿಕಾರಿಪುರ ತಾಲೂಕಿನ ಗಾಮ ಸಮೀಪದ ಹೆಸ್ರಿ ಗ್ರಾಮದವರು.‌ ಈಕೆಯ ಸಹೋದರ ಕೂಡ ಮಾನಸಿಕ ಅಸ್ವಸ್ಥ. ಆತನೂ ಈಗ ಇಲ್ಲ.‌ ಸಂಬಂಧಿಕರೂ ಈಕೆಗಿಲ್ಲ. ಹಾಗಾಗಿ, ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಈಗ ಕಾಲ ಕಳೆಯುತ್ತಿದ್ದಾಳೆ.

"ಯಾರೋ ಜೀಪ್ ಹತ್ತಿಸಿದರು. ನಾನು ಹೋದೆ. ಅಲ್ಲಿ ಭಾಷೆನೂ ತಿಳಿತಿರಲಿಲ್ಲ. ಊಟ, ವಾತಾವರಣ ಸರಿ ಹೊಂದುತ್ತಿರಲಿಲ್ಲ. ವರ್ಷಾನುಗಟ್ಟಲೇ ಯಾತನೆ ಅನುಭವಿಸಿದೆ. ನನ್ನ ಮೇಲೆ ದೆವ್ವ ಬರುತ್ತಿದ್ದ ಕಾರಣಕ್ಕೆ ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ದೇವಸ್ಥಾನಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದೆ.‌ ನನ್ನ ಗಂಡ ನನ್ನನ್ನು ಬಿಟ್ಟು ಹೋದ. ಬಳಿಕ ನಾನು ಹೇಗೆ ಅಲ್ಲಿಗೆ ಹೋದೆ ಎಂಬುದೇ ಗೊತ್ತಿಲ್ಲ. ಈಗ ದಾವಣಗೆರೆಗೆ ವಾಪಾಸ್ ಬಂದದ್ದು ಖುಷಿ ಕೊಟ್ಟಿದೆ' ಅಂತಾರೆ ಸುಶೀಲಮ್ಮ.

ವಾಪಾಸ್ ಬಂದದ್ದೇ ರೋಚಕ ಕಥೆ...!

ಸುಶೀಲಮ್ಮ‌ ಮಾನಸಿಕ ಅಸ್ವಸ್ಥರಾದ ಕಾರಣ ವಾಪಾಸ್ ಕರೆ ತರುವುದು ಅಷ್ಟು ಸುಲಭವಾಗಿರಲಿಲ್ಲ.‌ ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗಿತ್ತು. ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ರ ಮುಖೇನ ಕಾನೂನಿನ ಪ್ರಕಾರ ವಾಪಸ್ ಕರ್ನಾಟಕಕ್ಕೆ ಸುಶೀಲಮ್ಮರನ್ನ ಕರೆತರುವ ಪ್ರಯತ್ನ ನಡೆಸಿತು.

" ಮೊದಲು ಅಲ್ಲಿಗೆ ಹೋಗಿ ಆಕೆ ಕರ್ನಾಟಕದವರು ಅಂತಾ ಗೊತ್ತು ಮಾಡಿಕೊಂಡ ಬಳಿಕ ಈ ಎಲ್ಲಾ ಪ್ರಕ್ರಿಯೆ ಆರಂಭಿಸಿದೆವು. ಬಳಿಕ ಲೇಡಿ ಎಸ್ಕಾರ್ಟ್ ಅವರನ್ನು ಕರೆದುಕೊಂಡು ಆಕೆಯನ್ನು ರೈಲಿನ ಮೂಲಕ ಇಲ್ಲಿಗೆ ಕರೆದುಕೊಂಡು ಬರಲಾಗಿದೆ. ಆಕೆ ಹೇಳುವ ಪ್ರಕಾರ ಶಿಕಾರಿಪುರ ತಾಲೂಕಿನ ಗಾಮ ಅಥವಾ ಪಕ್ಕದ ಹೆಸ್ರಿ ಗ್ರಾಮದಾಕೆ. ಆಕೆ ಮನಾಲಿಯಲ್ಲಿ ಭಾಷಾ ಸಮಸ್ಯೆ, ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಊಟದ ಸಮಸ್ಯೆ ಎದುರಿಸಿದ್ದಳು. ಈಟಿವಿ ಭಾರತ್ ನ ಶ್ರಮದಿಂದಲೇ ಸುಶೀಲಮ್ಮ ವಾಪಾಸ್ ಕರುನಾಡಿಗೆ ಮರಳುವಂತಾಯ್ತು' ಅಂತಾರೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್.

ಒಟ್ಟಿನಲ್ಲಿ ಭಾಷೆ ಬಾರದ ನಾಡಿನಲ್ಲಿ ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದ ಕನ್ನಡತಿಯನ್ನು ಮರಳಿಗೆ ಕರೆತರುವ ಪ್ರಯತ್ನದಲ್ಲಿ ಈಟಿವಿ ಭಾರತ್ ಯಶಸ್ವಿಯಾಗಿದ್ದು, ವಾಪಾಸ್ ಬಂದ ಸುಶೀಲಮ್ಮ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.

ಬೈಟ್ -೦೧

ಸುಶೀಲಮ್ಮ, ಮನಾಲಿಯಿಂದ ವಾಪಸ್ ಬಂದ ಮಹಿಳೆ

ಬೈಟ್ -೦೨

ಶಶಿಧರ್, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ

( ಮತ್ತಷ್ಟು ವಿಡಿಯೋ ಫೋಟೋ ಹಾಗೂ ವಿಡಿಯೋಗಳನ್ನು wrapನಲ್ಲಿ ಕಳುಹಿಸಲಾಗಿದೆ)

Body:ರಿಪೋರ್ಟರ್ : ಯೋಗರಾಜ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.