ದಾವಣಗೆರೆ: ಅಡಿಕೆ ದೋಟಿ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹೊಟ್ಯಾಪುರದಲ್ಲಿ ನಡೆದಿದೆ.
ಚನ್ನಮುಂಬಾಪುರ ಗ್ರಾಮದ ಸಿಕಾಮಣಿ(35) ಮೃತ ಕೂಲಿ ಕಾರ್ಮಿಕ. ಸಿಕಾಮಣಿ ಶಿವಲಿಂಗಪ್ಪ ಎಂಬುವರ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಲು ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ಮೃತ ಯುವಕ ಸಿಕಾಮಣಿ ಅಡಿಕೆ ಕೊಯ್ಲು ಮಾಡುತ್ತಿರುವಾಗ ಅಡಿಕೆ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ, ಅಲ್ಲಿಂದ ಬಿಡಿಸಿಕೊಳ್ಳಲಾಗದೆ ಸಿಕಾಮಣಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಈ ಸಂಬಂಧ ಸಾಸ್ವೆಹಳ್ಳಿ ಉಪಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಕೊಡುವಂತೆ ಜಮೀನಿನ ಮಾಲೀಕರಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸ್ಕೂಟಿ ಸ್ಕಿಡ್ ಆಗಿದ್ದಕ್ಕೆ ಕರೆಂಟ್ ಕಂಬ ಹಿಡಿದ ಯುವತಿ ದಾರುಣ ಸಾವು: ಬೆಸ್ಕಾಂ ವಿರುದ್ಧ ಆಕ್ರೋಶ