ETV Bharat / state

ದಾವಣಗೆರೆಯಲ್ಲಿ ಇಂದು 8 ಕೊರೊನಾ ಕೇಸ್​ ಪತ್ತೆ: ಒಬ್ಬರು ಗುಣಮುಖ

ದಾವಣಗೆರೆ ಜಿಲ್ಲೆಯಲ್ಲಿಂದು ಏಂಟು ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಗುಣಮುಖರಾಗಿ ಕೋವಿಡ್​ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕೊರೊನಾ ಪಾಸಿಟಿವ್ ಪ್ರಕರಣಗಳು
ಕೊರೊನಾ ಪಾಸಿಟಿವ್ ಪ್ರಕರಣಗಳು
author img

By

Published : Jun 24, 2020, 8:47 PM IST

ದಾವಣಗೆರೆ: ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ರೋಗಿ-9889, 35 ವರ್ಷದ ಮಹಿಳೆ ಇವರು ರೋಗಿ- 8492ರ ಸಂಪರ್ಕಿತರು. ರೋಗಿ - 9890, 24 ವರ್ಷದ ಪುರುಷ ಇವರು ರೋಗಿ- 8065ರ ಸಂಪರ್ಕ ಹೊಂದಿದ್ದರು. ರೋಗಿ- 9891, 14 ವರ್ಷದ ಬಾಲಕ ಈತ ರೋಗಿ - 8806ರ ಸಂಪರ್ಕಿತನಾಗಿದ್ದಾನೆ. ರೋಗಿ ಸಂಖ್ಯೆ- 9892, 34 ವರ್ಷದ ಪುರುಷ ಇವರು ಬೆಂಗಳೂರಿಗೆ ಹೋಗಿ ಬಂದ ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ- 9893, 35 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ- 9894, 10 ವರ್ಷದ ಬಾಲಕ ಇವರು ಬಳ್ಳಾರಿ ಜಿಲ್ಲೆಗೆ ಹೋಗಿ ಬಂದಿರುವ ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ-9895, 11 ವರ್ಷದ ಬಾಲಕ ಮತ್ತು ರೋಗಿ ಸಂಖ್ಯೆ- 9896, 39 ವರ್ಷದ ಪುರುಷ ಇವರು ರೋಗಿ ಸಂಖ್ಯೆ 7778ರ ಸಂಪರ್ಕಿತರಾಗಿದ್ದಾರೆ.

ರೋಗಿ ಸಂಖ್ಯೆ-7577 ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 275 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 227 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 7 ಸಾವು ಸಾವನ್ನಪ್ಪಿದ್ದು, ಪ್ರಸ್ತುತ 41 ಸಕ್ರಿಯ ಪ್ರಕರಣಗಳು ಇವೆ.

222 ಜನರ ಗಂಟಲು ದ್ರವದ ಸ್ಯಾಂಪಲ್​ಗಳು ನೆಗೆಟಿವ್ ಬಂದಿದ್ದು, ಇಂದು 781 ಸ್ವ್ಯಾಬ್ ಸಂಗ್ರಹಿಸಲಾಗಿದೆ. ಒಟ್ಟು 2047 ಸ್ಯಾಂಪಲ್​​ಗಳ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.