ದಾವಣಗೆರೆ: ಮಹಿಳೆಯ ಗರ್ಭಕೋಶದಲ್ಲಿ ಬೆಳೆದ 18.4 ಕೆ.ಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವ ಮೂಲಕ ಬೆಣ್ಣೆ ನಗರಿ ದಾವಣಗೆರೆಯ ವೈದ್ಯರು ಮಹಿಳೆಯೊಬ್ಬರಿಗೆ ಮರುಜೀವ ನೀಡಿದರು.
ದಾವಣಗೆರೆ ಜಿಲ್ಲಾಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಗಿರಿಧರ ಹಾಗೂ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರು ಬಳ್ಳಾರಿ ಮೂಲದ ಮಹಿಳೆಗೆ ಆಪರೇಶನ್ ಮಾಡುವ ಮೂಲಕ ಗಡ್ಡೆ ಹೊರತೆಗೆದರು. ಕಳೆದ ಆರು ತಿಂಗಳಿಂದ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಡ್ಡೆ ಇಟ್ಟುಕೊಂಡು ನರಳುತ್ತಿದ್ದ ಮಹಿಳೆಗೆ ಕೆಲ ದಿನಗಳ ಹಿಂದೆಯೇ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರು. ಆದರೆ ಆಪರೇಷನ್ಗೆ ಹೆದರಿ ಸುಮ್ಮನಾಗಿದ್ದ ಮಹಿಳೆ ತೀವ್ರ ತೊಂದರೆ ಬಳಿಕ ವೈದ್ಯರ ಬಳಿ ಬಂದಿದ್ದರು.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಮಹಿಳೆ ಹಾಗೂ ಸಂಬಂಧಿಕರು ಧನ್ಯವಾದ ಅರ್ಪಿಸಿದ್ದಾರೆ.