ಮಂಗಳೂರು: ಮನೆಯ ಹೊರಗಿರುವ ಬಾತ್ ರೂಂನಲ್ಲಿ ಸ್ನಾನ ಮಾಡಲೆಂದು ಹೋದ ಯುವತಿ ನಾಪತ್ತೆಯಾದ ಘಟನೆ ನಡೆದಿದೆ.
ಎಡಪದವು ಗ್ರಾಮ ಶಿಬ್ರಿಕೆರೆಯ ಸಮತಾ (20 ) ನಾಪತ್ತೆಯಾದ ಯುವತಿ. ಈಕೆ ಜು. 24 ರಂದು ಸಂಜೆ ಸ್ನಾನಕ್ಕೆ ಎಂದು ಮನೆಯ ಹೊರಗಿರುವ ಬಾತ್ರೂಂಗೆ ಹೋದವಳು ಮರಳಿ ಬಂದಿಲ್ಲ.
ನಾಪತ್ತೆಯಾದ ಯುವತಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿರುವ ಮನೆಯವರು, ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆ ಕೂಡ ಈಕೆ ನಾಪತ್ತೆಯಾದ ಪ್ರಕರಣ ದಾಖಲಾಗಿತ್ತು.