ETV Bharat / state

ಸಂಡೇ ಲಾಕ್ ಡೌನ್: ಕೃಷಿ ಕಾರ್ಯದಲ್ಲಿ ತೊಡಗಿದ ಯುವಕ‌, ಯುವತಿಯರು!

author img

By

Published : Jul 21, 2020, 1:15 AM IST

ಭಾನುವಾರದ ಲಾಕ್ ಡೌನ್ ದಿನ ಸೋಮೇಶ್ವರ ಕೊಲ್ಯ ನಿವಾಸಿಗಳಾದ ಸುಮಾರು 20 ಯುವಕ-ಯುವತಿಯರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.

agricultural work
agricultural work

ಮಂಗಳೂರು: ತಾಲೂಕು ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತ ಕೊಲ್ಯ ನಿವಾಸಿ ಕೆ.ರಾಮ ಪೂಜಾರಿಯವರ 2 ಎಕರೆ ಕೃಷಿ ಭೂಮಿಯಲ್ಲಿ ನಾಟಿ ಕಾರ್ಯದಲ್ಲಿ ಯುವಕ-ಯುವತಿಯರು ತೊಡಗಿಸಿಕೊಂಡರು. ಆಸಕ್ತಿಯಿಂದ ಸಂಡೇ ಲಾಕ್‌ಡೌನ್‌ ಸಂದರ್ಭದಲ್ಲಿ ಸಮಯವನ್ನು ಮನೆಯಲ್ಲಿ ಕುಳಿತು ವ್ಯರ್ಥ ಮಾಡದೆ ಭತ್ತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.

ಲಾಕ್ ಡೌನ್ ಸಮಯ ವಿನಿಯೋಗಿಸಿ ಕೃಷಿ ಕಾರ್ಯದಲ್ಲಿ ತೊಡಗಿದ ಯುವಕ‌, ಯುವತಿಯರು

ಭೂಮಿ ತಾಯಿಯನ್ನು ಹಚ್ಚ ಹಸಿರಾಗಿ ಕಂಗೊಳಿಸುವಂತೆ ಮಾಡುವ ಕಾರ್ಯ ಯುವ ಸಮುದಾಯದಿಂದ ನಡೆಯಬೇಕಿದೆ. ಯುವ ಜನತೆ ಆಸಕ್ತಿಯಿಂದ ಮುಂದೆ ಬಂದು ಕೃಷಿ ಮಾಡಿದಲ್ಲಿ‌ ಮುಂದಿನ ದಿನಗಳಲ್ಲಿ ನಮ್ಮ ಕೃಷಿ ಭೂಮಿ ಉಳಿಯಬಹುದು ಎಂದು ಕೃಷಿ ಕಾರ್ಯದ ನೇತೃತ್ವ ವಹಿಸಿದ್ದ ಜೀವನ್‌ ಕೊಲ್ಯ ಹೇಳಿದರು.

ಈ ವೇಳೆ ಲತೀಶ್ ಪಾಪುದಡಿ, ಆನಂದ್ ಆಮೀನ್ ಸೋಮೇಶ್ವರ, ಮೋಹನ್ ಮಾಡೂರು,ನಿತಿನ್ ಕರ್ಕೇರ ಮಾಡೂರು, ಜಗಜೀವನ್ ಕೊಲ್ಯ, ಶಿರಾಲ್ ಕೊಲ್ಯ, ಗಣೇಶ್ ಕಿನ್ಯ, ಅನೀಶ್ ಕಿನ್ಯ,ರಕ್ಷತ್ ಕಿನ್ಯ, ಅರ್ಪಿತಾ ಕಾಸಿಂಬೆಟ್ಟು, ಸೌಮ್ಯ ಕಾಸಿಂಬೆಟ್ಟು ಸೇರಿದಂತೆ ಯುವಕ-ಯುವತಿಯರು ಕೃಷಿಯ ಮಹತ್ವನ್ನು ಅರಿತು ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.