ಉಳ್ಳಾಲ(ದಕ್ಷಿಣ ಕನ್ನಡ): ಮಾವಿನ ಹಣ್ಣು ಕೀಳಲು ಮರ ಹತ್ತಿದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ನಲ್ಲಿ ನಿನ್ನೆ(ಶುಕ್ರವಾರ) ಸಂಜೆ ವೇಳೆ ನಡೆದಿದೆ. ಮಹಮ್ಮದ್ ಇಲಿಯಾಸ್ (21) ಮೃತ ದುರ್ದೈವಿ.
ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನ ಮರದಲ್ಲಿ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ ಎನ್ನಲಾಗ್ತಿದೆ. ಯುವಕನ ಸಾವಿಗೆ ಮೆಸ್ಕಾಂ ಇಲಾಖೆ ಕಾರಣ. ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ಕಟಾವು ನಡೆಸದಿರುವುದರಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಅಪ್ರಾಪ್ತೆಗೆ ಬೆದರಿಸಿ ಅತ್ಯಾಚಾರ ಎಸಗಿದವನಿಗೆ 10 ವರ್ಷ ಜೈಲು ಶಿಕ್ಷೆ