ETV Bharat / state

ಮನೆ ಬಾಡಿಗೆ ವಿಚಾರದಲ್ಲಿ ಮಧ್ಯಸ್ಥಿಕೆ.. ಮಂಗಳೂರಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ - ಮಂಗಳೂರಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮೊಹಮ್ಮದ್ ಅನಾಸ್ ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಪರಿಚಯದ ಅಬೂಬಕ್ಕರ್ ಎಂಬವರ ಮನೆಯ ಬಳಿ ತೆರಳಿದ್ದಾರೆ. ಆಗ ಗೇಟ್ ಬಳಿ ನಿಂತಿದ್ದ ವೇಳೆ ತಂಡವೊಂದು ಅವರ ಮೇಲೆ ದಾಳಿ ನಡೆಸಿದೆ. ಕಾರಿನಲ್ಲಿ ಬಂದ ಚಾರು ಎಂಬಾತ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

young-man-assaulted-in-mangaluru
ಮೊಹಮ್ಮದ್ ಅನಾಸ್
author img

By

Published : Feb 2, 2022, 3:37 PM IST

ಮಂಗಳೂರು: ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ ಹಿನ್ನೆಲೆ ನಗರದಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಮಂಗಳೂರಿನ ಸುರತ್ಕಲ್​ನ ಕಾಟಿಪಳ್ಳದ ಮೊಹಮ್ಮದ್ ಅನಾಸ್ (29) ಹಲ್ಲೆಗೊಳಗಾದವರು. ಮೊಹಮ್ಮದ್‌ ಅನಾಸ್ ಅವರು ಬಾಡಿಗೆ ಮನೆ‌ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ್ದರು. ಚಾರು ಮತ್ತು ರವೂಫ್ ಎಂಬವರು ವಾಸವಿದ್ದ ಬಾಡಿಗೆ ಮನೆಯ ತೆರವು ವಿಚಾರದಲ್ಲಿ ಮಾತುಕತೆಯ ವೈಷಮ್ಯದಿಂದ ಈ ಹಲ್ಲೆ ನಡೆದಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮೊಹಮ್ಮದ್ ಅನಾಸ್ ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಪರಿಚಯದ ಅಬೂಬಕ್ಕರ್ ಎಂಬವರ ಮನೆಯ ಬಳಿ ಹೋಗಿದ್ದು, ಗೇಟ್ ಬಳಿ ನಿಂತಿದ್ದ ವೇಳೆ ತಂಡವೊಂದು ದಾಳಿ ನಡೆಸಿದೆ. ಕಾರಿನಲ್ಲಿ ಬಂದ ಚಾರು ಎಂಬಾತ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ.

ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾರು ಎಂಬಾತನ ತಂದೆ ರವೂಫ್, ಅಕ್ಕಿ, ಮುಸ್ತಫ ಯಾನೆ ಅಪ್ಪು ಮತ್ತು ಇತರರು ತಪ್ಪಿಸಿಕೊಳ್ಳದಂತೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಯದ್ವಾತದ್ವ ಹಲ್ಲೆ ನಡೆಸಿದ್ದಾರೆ ಎಂದು ಮೊಹಮ್ಮದ್ ಅನಾಸ್ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಅನಾಸ್​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ವಾಹನ ಮಾರಾಟ ಮಾಡಿಕೊಡುವುದಾಗಿ ವಂಚನೆ : ನಕಲಿ ಸಿಸಿಬಿ ಅಧಿಕಾರಿ ಅರೆಸ್ಟ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.