ETV Bharat / state

ಫೆ.9 ರಂದು ಮಂಗಳೂರಿನಲ್ಲಿ ಬೃಹತ್ ಯೋಗ, ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ - health awareness camp in mangalore

ಫೆ.9 ರಂದು ಅಡ್ಯಾರ್​ನ ಸಹ್ಯಾದ್ರಿ ತಾಂತ್ರಿಕ ಕಾಲೇಜು ಆವರಣದಲ್ಲಿ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ ಆಯೋಜಿಸಲಾಗಿದ್ದು, ಅಂದು ನಡೆಯುವ ಚಿಕಿತ್ಸೆ ಸಂಪೂರ್ಣ ಉಚಿತ.

Yoga and Naturopathy Awareness Camp in Mangalore on 9th February
ಫೆ.9 ರಂದು ಮಂಗಳೂರಿನಲ್ಲಿ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ
author img

By

Published : Feb 7, 2020, 8:08 AM IST

ಮಂಗಳೂರು: ಫೆ.9 ರಂದು ಅಡ್ಯಾರ್​ನ ಸಹ್ಯಾದ್ರಿ ತಾಂತ್ರಿಕ ಕಾಲೇಜು ಆವರಣದಲ್ಲಿ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ ಎಂದು ಎಸ್​ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ

ಫೆ.9 ರಂದು ಮಂಗಳೂರಿನಲ್ಲಿ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಶಾಂತ್​ ಶೆಟ್ಟಿ, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥಾನ , ಭಾರತ ಸರ್ಕಾರ ಆಯುಷ್ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಆಸ್ಪತ್ರೆ ಈ ಶಿಬಿರ ನಡೆಸುತ್ತಿದ್ದು, ಅಂದು ನಡೆಯುವ ಚಿಕಿತ್ಸೆ ಸಂಪೂರ್ಣ ಉಚಿತ ಎಂದು ತಿಳಿಸಿದರು.

ಶಿಬಿರದಲ್ಲಿ ಯೋಗಚಿಕಿತ್ಸೆ, ಜಲಚಿಕಿತ್ಸೆ ಮತ್ತು ಮಣ್ಣಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ಎಣ್ಣೆ ಮಾಲೀಶಿನ ಚಿಕಿತ್ಸೆ, ಪ್ರಕೃತಿ ಚಿಕಿಎ ಆಹಾರೋತ್ಸವ, ಪ್ರಯೋಗಾಲಯ, ಚಿಣ್ಣರ ಕಲರವ ಶಿಬಿರದಲ್ಲಿ ಇರಲಿದೆ. ಬೆನ್ನು ನೋವು, ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಒತ್ತಡ ಸಂಬಂಧಿಸಿದ ಕಾಯಿಲೆ, ಉದರ ಸಂಬಂಧಿಸಿದ ಕಾಯಿಲೆ, ನಿದ್ರಾಹೀನತೆ, ಸಂಧಿವಾತ, ಥೈರಾಯಿಡ್ ಸಂಬಂಧಿಸಿದ ಕಾಯಿಲೆಗೆ ಉಪಚರಿಸಲಾಗುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.