ಮಂಗಳೂರು: ಕಟೀಲು ಯಕ್ಷಗಾನ ಮೇಳದ ಕಲಾವಿದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡೆತ್ತೂರು ಶಂಭು ಕುಮಾರ್ (46 ವರ್ಷ) ಆತ್ಮಹತ್ಯೆ ಮಾಡಿಕೊಂಡ ಕಲಾವಿದರು. ತಮ್ಮ ಉಲ್ಲಂಜೆಯ ಮನೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ಶಂಭುಕುಮಾರ್ ಅವರು ಹದಿನಾರನೆಯ ವಯಸ್ಸಿನಿಂದಲೇ ಎಡನೀರು, ಪುತ್ತೂರು, ಮುಂಡೂರು, ತಲಕಲ, ಮಂಗಳಾದೇವಿ, ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 7 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು.
ಶಂಭುಕುಮಾರ್ ಅವರು ದೇವೇಂದ್ರ, ಅರ್ಜುನ, ಭೀಮ, ಮಧುಕೈಟಭ, ರಕ್ತಬೀಜ, ಅರುಣಾಸುರ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಕಿನ್ನಿಗೋಳಿಯ ಯಕ್ಷಕೌಸ್ತುಭ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯವನ್ನು ಅವರು ಕಲಿಸುತ್ತಿದ್ದರು. ಹೊಯಿಗೆಗುಡ್ಡೆ ದೇವಸ್ಥಾನದ ಹೆಸರಿನಲ್ಲಿ ಮೂರು ಚಿಕ್ಕಮೇಳಗಳನ್ನೂ ನಡೆಸುತ್ತಿದ್ದ ಅವರು ಯಕ್ಷಗಾನ ಧ್ವನಿಸುರುಳಿಗಳನ್ನೂ ಮಾಡಿದ್ದರು.
ಇದನ್ನೂ ಓದಿ: ಎಂ ಎಸ್ ಬಿಲ್ಡಿಂಗ್ ನೀರಿನ ಸಂಪ್ನಲ್ಲಿ ಪುರುಷನ ಮೃತದೇಹ ಪತ್ತೆ