ಮಂಗಳೂರು: ಜಿಲ್ಲೆಯ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕರಿಂಜೆ, ಗಂಟಾಲ್ಕಟ್ಟೆ, ಕರಲ್ಲಬೆಟ್ಟು, ಮಾರೂರು ಪರಿಸರದಲ್ಲಿ ಕಾಡುಕೋಣವೊಂದು ಕಾಣಿಸಿಕೊಂಡಿದೆ.
ಆದರೆ, ಈವರೆಗೆ ಈ ಕಾಡುಕೋಣದಿಂದ ಯಾರಿಗೂ ತೊಂದರೆ ಸಂಭವಿಸಿಲ್ಲ ಎಂಬ ವರದಿ ಬಂದಿದೆ. ನಿನ್ನೆ ಬೆಳಗ್ಗಿನಿಂದ ಈ ಕಾಡುಕೋಣ ಕರಿಂಜೆ, ಗಂಟಾಲ್ಕಟ್ಟೆ, ಕರಲ್ಲಬೆಟ್ಟು, ಮಾರೂರು ಪರಿಸರದ ಗುಡ್ಡ, ಪೊದೆ, ಕೃಷಿ ತೋಟಗಳಲ್ಲಿ ಕಾಣತೊಡಗಿದೆ.
ಅರಣ್ಯ ಇಲಾಖಾ ಅಧಿಕಾರಿಗಳು ಈ ಕಾಡುಕೋಣವನ್ನು ಹಿಡಿದು ಕಾಡಿಗೆ ಬಿಡುವ ಬಗ್ಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಇಡೀ ದಿನದಿಂದ ಸುರಿಯುವ ಮಳೆ ಕೊಂಚ ಅಡ್ಡಿಯಾಗಿದೆ. ಇನ್ನು ಕಾಡುಕೋಣ ಅಶಕ್ತ ಸ್ಥಿತಿಯೊಂದಿಗೆ ಅಲೆದಾಡುತ್ತಿದೆ ಎನ್ನಲಾಗುತ್ತಿದೆ.