ETV Bharat / state

ಕೋವಿಡ್​ ನಿಯಂತ್ರಣಕ್ಕೆ ಮಂಗಳೂರು ಪಾಲಿಕೆ ಕೈಗೊಂಡ ಕ್ರಮಗಳಿವು......

ಕೋವಿಡ್​ ನಿಯಂತ್ರಣಕ್ಕೆ ಮಂಗಳೂರು ಪಾಲಿಕೆ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

actions to control covid
ಕೋವಿಡ್​ ನಿಯಂತ್ರಣಕ್ಕೆ ಕ್ರಮ
author img

By

Published : Jun 5, 2021, 1:25 PM IST

ಮಂಗಳೂರು: ಕೋವಿಡ್​ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಇಲಾಖೆಗಳಿಗೆ ಅದರದ್ದೇ ಆದ ಜವಾಬ್ದಾರಿಗಳಿರುತ್ತದೆ. ಅದರಂತೆ ಮಂಗಳೂರಿನಲ್ಲಿ ಮಹಾನಗರ ಪಾಲಿಕೆ ಕೂಡ ಹಲವು ಕ್ರಮಗಳ ಮೂಲಕ ಸೋಂಕು‌ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಪಾಲಿಕೆಯಿಂದ ಮೂಲಸೌಕರ್ಯ ಮತ್ತು ಮಾನವ ಶಕ್ತಿಯ ಸದ್ಭಳಕೆಯಾಗುತ್ತಿದೆ.

ಈಗಾಗಲೇ‌ ಮಂಗಳೂರು ‌ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳ ಮೇಲಿನ ಹೊರೆ ತಗ್ಗಿಸಲು ಕೋವಿಡ್ ಕೇರ್ ಸೆಂಟರ್​​ಗಳನ್ನು ತೆರೆಯಲಾಗಿದೆ. ಮಂಗಳೂರಿನ ಇಎಸ್ಐ, ಎನ್ಐಟಿಕೆಗಳಲ್ಲಿ ಕೋವಿಡ್ ಕೇರ್ ಸೆಂಟರ್​​ಗಳನ್ನು ಆರಂಭಿಸಲಾಗಿದೆ. ಕೊರೊನಾ ಸೋಂಕಿತರ ಮನೆಯನ್ನು ಗುರುತಿಸಿ ಅಲ್ಲಿ ಸ್ಟಿಕ್ಕರ್ ಹಾಕುವ ಕಾರ್ಯವನ್ನು ‌ಮಾಡಲಾಗುತ್ತಿದೆ. ಇದರಿಂದಾಗಿ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿಗಳನ್ನು ಸ್ಥಳೀಯರಿಗೆ ನೀಡಿ ಜಾಗೃತಿ ವಹಿಸುವಂತೆ ಮಾಡುವ ಜತೆಗೆ ಕೊರೊನಾ ಸೋಂಕಿತರು ಮನೆಯಿಂದ ಹೊರ ಹೋಗದಂತೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.

ಅದೇ ರೀತಿ ಹೋಂ ಐಸೋಲೇಷನ್​ನಲ್ಲಿರುವ ಪ್ರತಿ ಸೋಂಕಿತರಿಗೂ ಪಾಲಿಕೆಯಿಂದಲೇ ಮೆಡಿಕಲ್ ಕಿಟ್ ನೀಡಲಾಗುತ್ತಿದೆ. ಜಿಂಕ್, ವಿಟಮಿನ್ ಮಾತ್ರೆಗಳು ಸೇರಿದಂತೆ ಸೋಂಕಿತರಿಗೆ ಕಾಡುವ ಸಮಸ್ಯೆಗಳಿಗೆ ಸರಿಯಾದ ಔಷಧಿಗಳು ಈ ಕಿಟ್​ನಲ್ಲಿರುತ್ತವೆ.

ಇನ್ನೂ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ದುಬಾರಿ ದರಗಳನ್ನು ಹಾಕಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ, ಮಂಗಳೂರಿನ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಪಾಲಿಕೆ ವತಿಯಿಂದಲೇ ಉಚಿತವಾಗಿ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಮಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಮಹಾನಗರ ಪಾಲಿಕೆ ವಿಶೇಷ ಯೋಜನೆಗಳ ಮೂಲಕ ಗಮನ ಸೆಳೆದಿದೆ.

ಇದನ್ನೂ ಓದಿ: ಕೋವಿಡ್​​ನಿಂದ ಸಾವನ್ನಪ್ಪಿದ ವ್ಯಕ್ತಿಯ ಶವ ನೀಡುವಂತೆ ಪಟ್ಟು ಹಿಡಿದ‌ ಸಂಬಂಧಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.