ETV Bharat / state

ಆರೋಗ್ಯ ಉಪಕೇಂದ್ರಕ್ಕೆ ವರ್ಲಿ ಕಲೆ: ಮಂಚಿ ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳ ಕೈಚಳಕ - ಮಂಚಿ ಕೊಳ್ನಾಡು ಪ್ರೌಢಶಾಲೆ

ಮಂಚಿ ಕೊಳ್ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಜಿಪ ಮುನ್ನೂರು ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ವೈವಿಧ್ಯಮಯ ವರ್ಲಿ ಚಿತ್ರಗಳು ಮೂಡಿಸಿದ್ದಾರೆ. ತುಳುನಾಡ ಪರಂಪರೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸುಮಾರು 17 ಚಿತ್ರಗಳಿಲ್ಲಿ ಆಕರ್ಷಕವಾಗಿ ಕಾಣುತ್ತಿವೆ.

warli painting done by kolnadu high school students
ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳ ಕೈಚಳಕದಿಂದ ಮೂಡಿಬಂತು ಸುಂದರ ವರ್ಲಿ ಚಿತ್ರ
author img

By

Published : Dec 3, 2020, 9:56 AM IST

ಬಂಟ್ವಾಳ (ದಕ್ಷಿಣ ಕನ್ನಡ): ತಾಲೂಕಿನ ಸಜೀಪ ಮುನ್ನೂರು ಗ್ರಾಮದಲ್ಲಿರುವ ಆರೋಗ್ಯ ಉಪಕೇಂದ್ರದ ಕಾಂಪೌಂಡ್​ ಗೋಡೆಯಲ್ಲಿ ವರ್ಲಿ ಚಿತ್ರ ಬಿಡಿಸುವ ಮೂಲಕ ಮಂಚಿ ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.

ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಪ್ರೌಢಶಾಲೆಯ ಸುಮಾರು 25 ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿದ್ದಾರೆ. ತುಳುನಾಡ ಪರಂಪರೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸುಮಾರು 17 ಚಿತ್ರಗಳನ್ನು ಇಲ್ಲಿ ಕಾಣಬಹುದು.

ವಿದ್ಯಾರ್ಥಿಗಳ ಕೈಚಳಕದಿಂದ ಮೂಡಿಬಂತು ಸುಂದರ ವರ್ಲಿ ಚಿತ್ರ

ನಂದಾವರ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ್ ಸಲಹೆಯಂತೆ ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಮಾರ್ಗದರ್ಶನದಲ್ಲಿ ದಿನವಿಡೀ ನಡೆದ ಈ ಕಾರ್ಯಾಗಾರಕ್ಕೆ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಚಾಲನೆ ನೀಡಿದರು.

ಓದಿ: ರಾಯಚೂರು: ನೀರು ಕುಡಿಯಲು ನದಿಗೆ ತೆರಳಿದ ಬಾಲಕ ಮೊಸಳೆ ಬಾಯಿಗೆ ತುತ್ತಾದ!

ಈ ಸಂದರ್ಭ ಉದ್ಯಮಿ ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಪ್ರಮುಖರಾದ ಜಯಶಂಕರ್, ಉದಯ ಕುಮಾರ್, ಗಿರೀಶ್, ನಂದಾವರ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ್, ಮಂಚಿ ಕೊಳ್ನಾಡು ಪ್ರೌಢಶಾಲೆಯ ಸಹಶಿಕ್ಷಕ ಶ್ರೀರಾಮಮೂರ್ತಿ, ಸಜಿಪ ಮುನ್ನೂರು ಆರೋಗ್ಯ ಉಪಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಸುಮನಾ ಕುಮಾರಿ ಕ್ರಾಸ್ತಾ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.