ಮಂಗಳೂರು : ಮೂಡಬಿದ್ರೆ ತಾಲೂಕು ಪಂಚಾಯತ್ನ ಮೊದಲ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಕೊನೆ ಕ್ಷಣದಲ್ಲಿ ಕೈಕೊಟ್ಟ ಪರಿಣಾಮ ಎರಡೂ ಸ್ಥಾನ ಬಿಜೆಪಿ ಪಾಲಾಗಿವೆ.
ತಾಪಂ ಮೊದಲ ಅಧ್ಯಕ್ಷರಾಗಿ ರೇಖಾ ಸಾಲ್ಯಾನ್, ಉಪಾಧ್ಯಕ್ಷರಾಗಿ ಸಂತೋಷ್ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು. ಮೂಡಬಿದ್ರೆ ತಾಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ತಾಲೂಕು ಪಂಚಾಯತ್ ರಚಿಸಲಾಗಿದೆ.
ಮಂಗಳೂರು ತಾಪಂನ ಎಂಟು ಸದಸ್ಯರು ಮೂಡಬಿದ್ರೆ ತಾಲೂಕು ಪಂಚಾಯತ್ಗೆ ಸೇರಿದ್ದಾರೆ. ಎಂಟು ಮಂದಿಯಲ್ಲಿ ನಾಲ್ಕು ಮಂದಿ ಬಿಜೆಪಿ, ನಾಲ್ಕು ಮಂದಿ ಕಾಂಗ್ರೆಸ್ನವರಾಗಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸುಕುಮಾರ್ ಸನಿಲ್ ಗೈರು ಹಾಜರಾಗಿದ್ದು, ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಅನಾಯಾಸವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ವಲಿದು ಬಂದಿವೆ.