ETV Bharat / state

ಉಳ್ಳಾಲಕ್ಕೆ ಹೋಗುವ ಮುಖ್ಯ ರಸ್ತೆಗೆ ವೀರ ರಾಣಿ ಅಬ್ಬಕ್ಕ ರಸ್ತೆ ನಾಮಕರಣಕ್ಕೆ ವಿಹೆಚ್​​​​ಪಿ ಒತ್ತಾಯ - ರಸ್ತೆಗೆ ವೀರ ರಾಣಿ ಅಬ್ಬಕ್ಕ ರಸ್ತೆ ನಾಮಕರಣಕ್ಕೆ ವಿಎಚ್​​​​ಪಿ ಒತ್ತಾಯ

ಉಳ್ಳಾಲಕ್ಕೆ ಹೋಗುವ ಮುಖ್ಯರಸ್ತೆಗೆ ಉಳ್ಳಾಲದ ವೀರರಾಣಿ ಅಬ್ಬಕ್ಕ ರಸ್ತೆ ಹಾಗೂ ಅಬ್ಬಕ್ಕನ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಿಸಬೇಕೆಂದು ವಿಹೆಚ್​​​ಪಿ, ಬಜರಂಗದಳ ಆಗ್ರಹಿಸಿವೆ..

ವಿಎಚ್​​​ಪಿ ಬಜರಂಗದಳ ಆಗ್ರಹ
ವಿಎಚ್​​​ಪಿ ಬಜರಂಗದಳ ಆಗ್ರಹ
author img

By

Published : Jan 29, 2022, 6:50 PM IST

ಮಂಗಳೂರು : ನಗರದ ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಿಂದ ಉಳ್ಳಾಲಕ್ಕೆ ಹೋಗುವ ಮುಖ್ಯ ರಸ್ತೆಗೆ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ರಸ್ತೆ ಎಂದು ನಾಮಕರಣ ಮಾಡಬೇಕು. ಅದೇ ರೀತಿ ಉಳ್ಳಾಲಕ್ಕೆ ಹೋಗುವ ಮುಖ್ಯ ತಿರುವು ಓವರ್ ಬ್ರಿಡ್ಜ್ ಬಳಿ ಅಬ್ಬಕ್ಕನ‌ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಿಸಬೇಕೆಂದು ವಿಹೆಚ್​​​ಪಿ, ಬಜರಂಗದಳ ಆಗ್ರಹಿಸಿವೆ.

ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಈ ರಸ್ತೆಗೆ ವಿವಿಧ ಹೆಸರಿಡಬೇಕೆಂದು ಬೇರೆ ಬೇರೆ ಸಂಘಟನೆಗಳು ಮನವಿ ಮಾಡಿದ್ದವು. ಆದ್ದರಿಂದ ವಿಹೆಚ್​​ಪಿ, ಬಜರಂಗದಳ ಉಳ್ಳಾಲ ಪ್ರಖಾಂಡ ಆಗ್ರಹ ಮಾಡುವುದೇನೆಂದರೆ, ಉಳ್ಳಾಲಕ್ಕೆ ಹೋಗುವ ಮುಖ್ಯರಸ್ತೆಗೆ ಉಳ್ಳಾಲದ ವೀರರಾಣಿ ಅಬ್ಬಕ್ಕ ರಸ್ತೆ ಹಾಗೂ ಅಬ್ಬಕ್ಕನ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಿಸಬೇಕೆಂದು ಆಗ್ರಹ ಮಾಡುತ್ತಿದೆ. ನಿನ್ನೆ ಈ ಬಗ್ಗೆ ಉಳ್ಳಾಲ ನಗರಸಭಾ ಅಧ್ಯಕ್ಷರಿಗೆ, ಪೌರ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಮಂಗಳೂರಿನಲ್ಲಿ ವಿಹೆಚ್‌ಪಿ, ಬಜರಂಗದಳ ಮುಖಂಡರು ಮಾತನಾಡಿರುವುದು..

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಬೇಕೆಂಬ ಬಜರಂಗದಳದ ಹೋರಾಟ ಇಂದು ನಿನ್ನೆಯದ್ದಲ್ಲ. ಕಳೆದ ಹಲವಾರು ವರ್ಷಗಳಿಂದ ಈ ವಿಚಾರವಾಗಿ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ. ಈ ಹಿಂದೆಯೂ ಒಂದು ಬಾರಿ ನಾರಾಯಣ ಗುರು ವೃತ್ತವೆಂದು ಬಜರಂಗದಳ ಬೋರ್ಡ್ ಅಳವಡಿಸಿತ್ತು. ಕಾರಣಾಂತರಗಳಿಂದ ಅದನ್ನು ತೆಗೆಸುವ ಪ್ರಯತ್ನ ನಡೆಯಿತು.

ನಾವು ಬೋರ್ಡ್ ಅಳವಡಿಕೆ ಮಾಡಿದ ಬಳಿಕ ಬಿರುವೆರ್ ಕುಡ್ಲ ಎಂಬ ಸಂಘಟನೆಯೂ ಅಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ನಾಮಫಲಕ ಅಳವಡಿಸಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದಷ್ಟು ಶೀಘ್ರದಲ್ಲಿ ಅಧಿಕೃತವಾಗಿ ಲೇಡಿಹಿಲ್ ಸರ್ಕಲ್‌ಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ನಾಮಕರಣ ಮಾಡಲಿ ಎಂದು ಗುರುಪ್ರಸಾದ್ ಉಳ್ಳಾಲ ಆಗ್ರಹಿಸಿದರು.

ಹಿಂದೂ ದೈವ, ದೇವರುಗಳಿಗೆ ಅಪಮಾನ ಮಾಡುವ, ಹಿಂದೂ ವಿರೋಧಿ ಕೃತ್ಯದಲ್ಲಿ ತೊಡಗಿರುವವರ ಬಳಿ ವ್ಯಾಪಾರ ಮಾಡಬಾರದೆಂದು ಹಿಂದೂ ಬಾಂಧವರಲ್ಲಿ ನಾವು ಉಳ್ಳಾಲಬೈಲು ಬಳಿ‌ ಬಜರಂಗದಳ ಬ್ಯಾನರ್ ಅಳವಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬ್ಯಾನರ್ ಅಳವಡಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ನಾವು ಯಾವುದೇ ಬಲವಂತದ ಪ್ರಯತ್ನ ಮಾಡಿಲ್ಲ. ಅನ್ಯ ಧರ್ಮದವರು ಅಲ್ಲಿ ಬಂದು ವ್ಯಾಪಾರ ಮಾಡಬಾರದೆಂದು ನಾವು ಹೇಳಿಲ್ಲ. ಫತ್ವಾ, ಆದೇಶ ಹೊರಡಿಸಿಲ್ಲ. ಹಿಂದೂ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಇದರಿಂದ ನಾವು ಯಶಸ್ವಿಯಾಗಿದ್ದೇವೆ ಎಂದು ಗುರುಪ್ರಸಾದ್ ಉಳ್ಳಾಲ ಹೇಳಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.