ಮಂಗಳೂರು: ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ಕೆಲ ಹೊತ್ತಿನ ಕಾಲ ವೀರ ಸಾವರ್ಕರ್ ಹೆಸರುಳ್ಳ ಬ್ಯಾನರ್ ಕಾಣಿಸಿಕೊಂಡಿತು.
ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ಬಗ್ಗೆ ನಡೆಯುತ್ತಿರುವ ಚರ್ಚೆ ನಡುವೆ ಈ ಬ್ಯಾನರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ವೀರಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂದು ಬರೆದಿರುವ ಬ್ಯಾನರನ್ನು ಮೇಲ್ಸೇತುವೆಯ ಗೋಡೆಗೆ ಅಂಟಿಸಲಾಗಿತ್ತು. ಅದರ ಪಕ್ಕದಲ್ಲಿ ಬಜರಂಗದಳ ಎಂದು ಬರೆಯಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಬ್ಯಾನರ್ ನ್ನು ತೆಗೆಯಲಾಗಿದೆ.