ಉಳ್ಳಾಲ (ದಕ್ಷಿಣ ಕನ್ನಡ) : ಇಲ್ಲಿಯವರೆಗೆ ಮನೆಗೆ ನುಗ್ಗಿ ಹಣ, ಚಿನ್ನಾಭರಣ ಅಥವಾ ಇನ್ಯಾವುದೋ ಬೆಲೆ ಬಾಳುವ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿರುವ ಕೇಸ್ಗಳನ್ನು ನಾವು ನೀವೆಲ್ಲ ಓದಿದ್ದೇವೆ ಮತ್ತು ನೋಡಿದ್ದೇವೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವೊಂದು ವಿಚಿತ್ರವಾಗಿದೆ. ಇದೆಂಥ ಮಾರ್ರೆ.. ನಮ್ಮ ಒಳ ಉಡುಪನ್ನು ಹೊರಗೆ ಒಣಗಲು ಹಾಕೋದು ಕಷ್ಟ ಆಯಿತಲ್ಲ ಅಂತಾ ನೀವು ಹೇಳಬಹುದು..
ಮನೆಯಂಗಳದಲ್ಲಿ ಹಾಕಿದ್ದ ಒಳ ಉಡುಪು ಕದ್ದು ಪರಾರಿ.. ಹೌದು, ಮನೆಯೊಂದರಲ್ಲಿ ಮಹಿಳೆಯೊಬ್ಬರು ತಮ್ಮ ಮತ್ತು ತಮ್ಮ ಮಗಳ ಒಳ ಉಡುಪುಗಳನ್ನು ಸ್ವಚ್ಛವಾಗಿ ತೊಳೆದು ಮನೆಯಲ್ಲಿ ಒಣಗಲು ಹಗ್ಗದ ಮೇಲೆ ಹಾಕಿದ್ದರು. ಈ ಬಟ್ಟೆಗಳ ಮೇಲೆ ಕಾಮುಕರ ಕಣ್ಣು ಬಿದ್ದಿರುವುದು ಮನೆಯವರ ನಿದ್ದೆಗೆಡಿಸಿದ್ದು ಒಂದೆಡೆಯಾದರೆ, ಈ ಪರಿಸರದಲ್ಲಿನ ಸಾರ್ವಜನಿಕರಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ. ಯಾಕೆಂದರೆ ಇಲ್ಲಿ ಮನೆಯ ಬಾಲ್ಕನಿ ಮತ್ತು ಟೆರೇಸ್ ಅಲ್ಲದೆ ಮನೆಯಂಗಳದಲ್ಲಿ ಒಣ ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಜೊತೆಗೆ ಮನೆ ಬಾಗಿಲ ಲಾಕರ್ಗೆ ಕಿಡಿಗೇಡಿಗಳು ಕಾಂಡೋಮ್ ಸಿಕ್ಕಿಸಿ ವಿಕೃತಿ ಮೆರೆದ ಈ ಘಟನೆ ಸೋಮವಾರ ರಾತ್ರಿ ಉಳ್ಳಾಲ ಬೈಲಿನ ಪರಿಸರದಲ್ಲಿ ನಡೆದಿದೆ.
ಇದನ್ನೂ ಓದಿ : ₹41 ಕೋಟಿ ಮೌಲ್ಯದ ಹೆರಾಯಿನ್ ಸಾಗಾಟ: ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ
ಕೃಷಿ ಸಂಶೋಧನಕಾ ಕೇಂದ್ರ ಬಳಿಯ ಬಾಡಿಗೆ ಮನೆಯಲ್ಲಿ ಕಳ್ಳತನ.. ಉಳ್ಳಾಲ ಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯಲ್ಲಿ ಬಾಡಿಗೆ ಮನೆ ವಾಸವಾಗಿರುವ ನಿವಾಸಿಗಳ ಬೆಲೆ ಬಾಳುವ ಬಟ್ಟೆಗಳನ್ನು ಯಾರೋ ವಿಕೃತರು ಕಳವುಗೈದಿದ್ದಾರೆ. ಬಾಡಿಗೆ ಮನೆಯ ಮಹಿಳೆ ಮತ್ತು ಆಕೆಯ ಮಗಳ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳನ್ನು ನಿನ್ನೆ (ಸೋಮವಾರ) ಸಂಜೆ ಒಣ ಹಾಕಲಾಗಿತ್ತು. ಇಂದು ಬೆಳಿಗ್ಗೆ ಮನೆ ಯಜಮಾನ ಎದ್ದಾಗ ಮುಖ್ಯ ಬಾಗಿಲಿನ ಲಾಕರ್ಗೆ ಕಾಂಡೋಮ್ನ್ನು ಸಿಕ್ಕಿಸಿರುವುದು ಬೆಳಕಿಗೆ ಬಂದಿದೆ. ಸ್ವಲ್ಪ ಹೊತ್ತಲ್ಲಿ ಒಣ ಹಾಕಲಾಗಿದ್ದ ಮಹಿಳೆಯರ ಉಡುಪುಗಳು ಕಳವಾಗಿದ್ದು ತಿಳಿದಿದೆ.
ಇದನ್ನೂ ಓದಿ : ಪೋಷಕರೇ ಎಚ್ಚರ! ಪ್ಲೇ ಝೋನ್ನಲ್ಲಿ ಆಟವಾಡಲು ಹೋಗಿ 4 ಬೆರಳು ಕಳ್ಕೊಂಡ 3 ವರ್ಷದ ಮಗು
ವಿಶೇಷವೆಂದರೆ ಬಾಡಿಗೆ ಮನೆಯ ಯಜಮಾನನ ಬೆಲೆ ಬಾಳುವ ಶರ್ಟ್, ಟಿ ಶರ್ಟ್, ಪ್ಯಾಂಟ್ ಗಳನ್ನು ಬಿಟ್ಟು ಹೋಗಿದ್ದಾರೆ. ಪಕ್ಕದ ಮನೆಯಿಂದಲೂ ಮಹಿಳೆಯರ ಉಡುಪು, ಒಳ ಉಡುಪುಗಳನ್ನು ಕದ್ದೊಯ್ದಿದ್ದಾರೆ. ಸುಮಾರು 7 ಸಾವಿರ ರೂ. ಬೆಲೆಬಾಳುವ ಉಡುಪನ್ನು ಕಳವು ಮಾಡಲಾಗಿದೆ. ಮೇಲ್ನೋಟಕ್ಕೆ ಯಾರೋ ವಿಕೃತ ಕಾಮಿಗಳೇ ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ. ಆದ್ರೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ : ಊಟಕ್ಕೆ ಸಾಂಬಾರು ಮಾಡಿ, ಅನ್ನಕ್ಕಿಡದ ಪತ್ನಿ.. ಕೋಪದಲ್ಲಿ ಹೆಂಡ್ತಿಯನ್ನ ಕೊಂದೇಬಿಟ್ಟ ಪತಿ!