ETV Bharat / state

ಕಡಬದಲ್ಲಿ ಎರಡು ಪಿಸ್ತೂಲ್ ಸಹಿತ ಸ್ಫೋಟಕ ಪತ್ತೆ, ವ್ಯಕ್ತಿಯ ಬಂಧನ - ಕಡಬ ಇಂದಿನ ಸುದ್ದಿ

ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿಟ್ಟುಕೊಂಡಿದ್ದ ಆರೋಪಿಯೊಬ್ಬನ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಆತನ ಮೇಲೆ ಶಸ್ತ್ರಾಸ್ತಗಳು ಹಾಗೂ ಸ್ಫೋಟಕಗಳ ಅಧಿನಿಯಮದಂತೆ ಕ್ರಮ ಕೈಗೊಂಡಿದ್ದಾರೆ.

Two illegal pistol found in Kadaba
ಬಂಧಿತ ಆರೋಪಿ
author img

By

Published : Aug 5, 2020, 4:51 PM IST

ಕಡಬ(ದಕ್ಷಿಣ ಕನ್ನಡ) : ಯಾವುದೇ ಪರವಾನಗಿ ಇಲ್ಲದ ಅಕ್ರಮ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಆಧಾರದ ಮೇರೆಗೆ ಕಡಬ ಪೊಲೀಸ್​ ಠಾಣಾಧಿಕಾರಿ ರುಕ್ಮಯ ನಾಯ್ಕ್ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ ಬುಧವಾರ ಬಂಧಿಸಿದೆ. ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಜನಾರ್ಧನ ಗೌಡ ಎಂಬಾತನನ್ನು ಬಂಧಿಸಲಾಗಿದೆ.

ಈತನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು ಪರವಾನಗಿ ಇಲ್ಲದ ಎರಡು ಅಕ್ರಮ ಪಿಸ್ತೂಲ್ ಮತ್ತು ಎರಡು ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಷಿಯಂ ಕೇಪುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿಟ್ಟುಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದೆ. ಹೀಗಾಗಿ ಆರೋಪಿ ವಿರುದ್ಧ ಪೊಲೀಸರು ಶಸ್ತ್ರಾಸ್ತಗಳು ಹಾಗೂ ಸ್ಫೋಟಕಗಳ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.