ETV Bharat / state

ಮಂಗಳೂರು ವಿವಿಯಲ್ಲಿ ತುಳು ಪಠ್ಯ: ಮೊದಲ ವರ್ಷದಲ್ಲೇ ಉತ್ತಮ ಪ್ರತಿಕ್ರಿಯೆ - kannadanews

ಇದೇ ಮೊದಲ ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ತುಳುವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯಲು ವಿದ್ಯಾರ್ಥಿಗಳಿಗೆ ‌ ಅವಕಾಶ ನೀಡಲಾಗಿದೆ.

ಮಂಗಳೂರು ವಿವಿ ಪದವಿಯಲ್ಲಿ ತುಳು ಪಠ್ಯ
author img

By

Published : Jul 6, 2019, 7:05 PM IST

ಮಂಗಳೂರು: ಪದವಿ ತರಗತಿಗಳಿಗೆ ವಿದ್ಯಾರ್ಥಿಗಳು ತುಳುವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯಲು‌ ಮಂಗಳೂರು ವಿವಿಯಲ್ಲಿ ಅವಕಾಶ ನೀಡಲಾಗಿದ್ದು, ಮೊದಲ ವರ್ಷದಲ್ಲೇ ಉತ್ತಮ ರೆಸ್ಪಾನ್ಸ್​ ದೊರೆತಿದೆ.

ಈವರೆಗೆ ಆರನೇ ತರಗತಿಯಿಂದ ಎಸ್​ಎಸ್​​ಎಲ್​​ಸಿವರೆಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತುಳು ಭಾಷೆಯನ್ನು ಕಲಿಯುವ ಅವಕಾಶ ಇತ್ತು. ಆದರೆ ತುಳು ಭಾಷೆಯನ್ನು ಪದವಿಯಲ್ಲಿ ಕಲಿಯುವ ಅವಕಾಶ ಇರಲಿಲ್ಲ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಯತ್ನಕ್ಕೆ ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಒಪ್ಪಿಗೆ ಸೂಚಿಸಿದ್ದು, ಈ ವರ್ಷದಿಂದ ಪದವಿಯಲ್ಲಿ ವಿದ್ಯಾರ್ಥಿಗಳು ತುಳುವನ್ನು ಭಾಷೆಯಾಗಿ ಕಲಿಯಲು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಮಂಗಳೂರಿನ ರಥ ಬೀದಿಯಲ್ಲಿರುವ ಡಾ. ಪಿ.ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 40 ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ.

ಮಂಗಳೂರು ವಿವಿ ಪದವಿಯಲ್ಲಿ ತುಳು ಪಠ್ಯ

ತುಳು ಭಾಷೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೊ. ಬಿ.ಶಿವರಾಮ ಶೆಟ್ಟಿ ಅವರ ಸಂಪಾದಕತ್ವದ ಸಿರಿದೊಂಪ ಎನ್ನುವ ಪಠ್ಯ ಪುಸ್ತಕ ಮುದ್ರಿಸಲಾಗಿದೆ. ಈ ಬಾರಿ ಆರಂಭವಾಗಿರುವ ಪದವಿಯಲ್ಲಿ ತುಳು ಭಾಷೆ ಕಲಿಯುವ ಅವಕಾಶಕ್ಕೆ ಉತ್ತಮ‌ ರೆಸ್ಪಾನ್ಸ್ ವ್ಯಕ್ತವಾಗಿದೆ. ತುಳುವಿನಲ್ಲಿ ಅಧ್ಯಯನ ಮಾಡುವ ತುಡಿತ, ಆಸಕ್ತಿ ಇರುವವರಿಗೆ‌ ಈ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಉತ್ತಮ ಅವಕಾಶವನ್ನು ನೀಡಿದೆ.

Intro:ಮಂಗಳೂರು: ದಕ್ಷಿಣ ಕನ್ನಡ , ಉಡುಪಿ ಮತ್ತು ಕೇರಳದ ಕಾಸರಗೋಡು ಭಾಗದಲ್ಲಿ ತುಳು ಭಾಷಿಕರು ಜಾಸ್ತಿ. ತುಳು ಮಾತೃಭಾಷೆ ಆಗಿದ್ದರೂ ತುಳುವಿನಲ್ಲಿ ಕಲಿಯುವ ಅವಕಾಶ ಈ ಹಿಂದೆ ಇರಲಿಲ್ಲ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳು ತುಳು ವನ್ನು ಭಾಷೆಯಾಗಿ ಆಯ್ಕೆ ಮಾಡಿ ಕಲಿಯಲು‌ ಅವಕಾಶ ನೀಡಲಾಗಿದೆ.

Body:ಆರನೇ ತರಗತಿಯಿಂದ ಎಸ್ ಎಸ್ ಎಲ್ ಸಿ ವರೆಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತುಳು ಭಾಷೆಯನ್ನು ಕಲಿಯುವ ಅವಕಾಶ ಇತ್ತು. ಆದರೆ ಈ ವರೆಗೆ ತುಳು ಭಾಷೆಯನ್ನು ಪದವಿಯಲ್ಲಿ ಕಲಿಯುವ ಅವಕಾಶ ಇರಲಿಲ್ಲ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಯತ್ನಕ್ಕೆ ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಒಪ್ಪಿಗೆ ಸೂಚಿಸಿದ್ದು ಈ ವರ್ಷದಿಂದ ಪದವಿಯಲ್ಲಿ ವಿದ್ಯಾರ್ಥಿಗಳು ತುಳು ವನ್ನು ಭಾಷೆಯಾಗಿ ಕಲಿಯಲು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಮಂಗಳೂರಿನ ರಥಬೀದಿಯಲ್ಲಿರುವ ಡಾ.ಪಿ ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 40 ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ. ಇನ್ನಷ್ಟು ಕಾಲೇಜಿನಲ್ಲಿ ತುಳು ಭಾಷೆಯಾಗಿ ಕಲಿಯಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಬೈಟ್- ಎ ಸಿ ಭಂಡಾರಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಪದವಿಯಲ್ಲಿ ಸ್ಥಳೀಯ ಭಾಷೆಗಳನ್ನು ಸೇರಿಸಬೇಕೆಂಬ ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 2016-17 ರ ಸಾಲಿನಿಂದ ಒಂದು ತುಳು ಕವನವನ್ನು ಕನ್ನಡ ಪಠ್ಯದಲ್ಲಿ ಸೇರಿಸಲಾಗಿತ್ತು. ಆದರೆ ಈ ಬಾರಿ ಒಂದು ಭಾಷೆಯಾಗಿ ತುಳುವನ್ನು ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆ. ತುಳು ಭಾಷೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೊ.ಬಿ ಶಿವರಾಮ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಸಿರಿದೊಂಪ ಎನ್ನುವ ಪಠ್ಯ ಪುಸ್ತಕ ಮುದ್ರಿಸಲಾಗಿದೆ.
ಬೈಟ್- ಪ್ರೊ. ಬಿ ಶಿವರಾಮ ಶೆಟ್ಟಿ, ಅಧ್ಯಕ್ಷರು, ಪದವಿ ಪಠ್ಯ ತುಳು ರಚನಾ ಸಮಿತಿ
ಈ ಬಾರಿ ಆರಂಭವಾಗಿರುವ ಪದವಿಯಲ್ಲಿ ತುಳು ಭಾಷೆ ಕಲಿಯುವ ಅವಕಾಶಕ್ಕೆ ಉತ್ತಮ‌ ರೆಸ್ಪಾನ್ಸ್ ವ್ಯಕ್ತವಾಗಿದೆ. ತುಳುವಿನಲ್ಲಿ ಅಧ್ಯಯನ ಮಾಡುವ ತುಡಿತ, ಆಸಕ್ತಿ ಇರುವವರಿಗೆ‌ ಈ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಉತ್ತಮ ಅವಕಾಶವನ್ನು ನೀಡಿದೆ.

reporter- vinodpudu

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.