ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಮರ ಧರೆಗುರುಳಿದೆ.
ಬಂಟ್ವಾಳ ತಾಲೂಕಿನ ಮಾಣಿ ಎಂಬ ಪ್ರದೇಶದ ಪಲಿಕೆ ಎಂಬಲ್ಲಿ ಮರವೊಂದು ರಸ್ತೆಗೆ ಮಗುಚಿ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವರು ಮರವನ್ನು ತೆರವುಗೊಳಿಸಲು ಯತ್ನಿಸಿದರೂ, ಅದರ ಕಾಂಡ ಸಹಿತ ಮರದ ತುಂಡುಗಳು ರಸ್ತೆಯಲ್ಲೇ ಇದೆ. ಅಲ್ಲದೇ, ಮಳೆಯೂ ಜೋರಾಗಿರುವ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.