ಚಿತ್ರದುರ್ಗ: ಸಚಿವ ಶ್ರೀ ರಾಮುಲು ವಾಸ್ತವ್ಯ ಹೂಡಿ ತೆರಳಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮತ್ತದೇ ಅವ್ಯವಸ್ಥೆ ತಲೆದೋರಿದೆ.
ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಹಾಕಲಾದ ಚಾಪೆಗಳ ಮೇಲೆ ಬಾಣಂತಿಯರು ಮಲಗಿರುವ ದೃಶ್ಯ ಕಂಡುಬಂತು. ಸಚಿವರು ನಿನ್ನೆ(ಗುರುವಾರ) ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದ್ದರು. ಆ ವೇಳೆ ಇಡೀ ಆಸ್ಪತ್ರೆ ಸಂಪೂರ್ಣವಾಗಿ ಸ್ವಚ್ಛಗೊಂಡಿತ್ತು. ಅಲ್ಲದೆ, ಬಾಣಂತಿಯರಿಗೆ ವಾರ್ಡ್‌ಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಚಿವರು ಆಸ್ಪತ್ರೆಯಿಂದ ನಿರ್ಗಮಿಸಿದ ಬಳಿಕ ಯಥಾಸ್ಥಿತಿಯ ಅವ್ಯವಸ್ಥೆ ಕಂಡು ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಹಾಗೂ ಸಚಿವರ ವಿರುದ್ಧ ಬಾಣಂತಿಯರು ಅಸಮಾಧಾನ ವ್ಯಕ್ತಪಡಿಸಿದ್ರು.