ETV Bharat / state

ದಕ್ಷಿಣ ಕನ್ನಡ - ಕಾಸರಗೋಡು ರಸ್ತೆ ಸಂಚಾರ ಮುಕ್ತ: ಡಿಸಿ ಡಾ.ಕೆ.ವಿ.ರಾಜೇಂದ್ರ - kasaragodu transport

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಮಧ್ಯೆ ಸಂಚಾರ ಮುಕ್ತವಾಗಿದ್ದು, ಪ್ರಯಾಣಿಕರು ಮಾಸಿಕ ಪಾಸ್​ ಪಡೆದು ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

DC dr.K.V.rajendra
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
author img

By

Published : Aug 16, 2020, 5:01 PM IST

ಮಂಗಳೂರು: ಅನ್​ಲಾಕ್ 0.3 ಅನ್ವಯ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ನಡುವಿನ ಸಂಚಾರವನ್ನು ಮುಕ್ತಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಕಾಸರಗೋಡು-ದ.ಕ ಸಂಚಾರ ಮುಕ್ತ

ಗಡಿ ಭಾಗಗಳಲ್ಲಿ ದೈನಂದಿನ ಕೆಲಸದ ನಿಮಿತ್ತ ಸಂಚರಿಸುವ ಸಾರ್ವಜನಿಕರು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯಿಂದ ಮಾಸಿಕ ಪಾಸ್ ಪಡೆಯಬೇಕು. ಈ ಸಂದರ್ಭದಲ್ಲಿ ಪ್ರಯಾಣಿಕರು ಚೆಕ್ ಪೋಸ್ಟ್​ಗಳಲ್ಲಿ ಮಾಹಿತಿ ದಾಖಲಿಸಬೇಕು ಎಂದು ತಿಳಿಸಿದ್ದಾರೆ.

ಕೇರಳದ ನಿವಾಸಿಗಳು ಜಿಲ್ಲೆಯಲ್ಲಿಯೇ ವಾಸಿಸುತ್ತಿದ್ದರೇ ತಕ್ಷಣ ಸೇವಾ ಸಿಂಧು ಆ್ಯಪ್ ಮೂಲಕ ಪಾಸ್ ಪಡೆದು ತಲಪಾಡಿ ಅಥವಾ ಜಾಲ್ಸೂರು ಮೂಲಕ ಸಂಚರಿಸಬೇಕು.‌ ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಕೋವಿಡ್-19 ಕ್ವಾರೆಂಟೈನ್ ನಿಯಮಕ್ಕೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.