ETV Bharat / state

ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ಕೊರೊನಾ ಕಂಟಕ... ಇಂದು 14 ಜನರಲ್ಲಿ ಸೋಂಕು ಪತ್ತೆ

author img

By

Published : May 31, 2020, 7:58 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 14 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ ವಿದೇಶದಿಂದ ಬಂದ ಇಬ್ಬರಿಗೆ, ಮುಂಬೈಯಿಂದ ಬಂದ 9 ಮಂದಿಗೆ ಹಾಗೂ ಪ್ರಾಥಮಿಕ ಸಂಪರ್ಕದಿಂದ ಮೂವರಲ್ಲಿ ಸೋಂಕು ದೃಢವಾಗಿದೆ.

today fourteen new corona case in dhakshina kannada
ದ.ಕ.ಜಿಲ್ಲೆಗೆ ಮತ್ತೆ ಕೊರೊನಾ ಕಂಟಕ, ಇಂದು 14 ಜನರಲ್ಲಿ ಸೋಂಕು ಪತ್ತೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು 14 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 133 ಕ್ಕೆ ಏರಿಕೆಯಾಗಿದೆ.

ದೋಹಾ ಹಾಗೂ ಮಲೇಷಿಯಾದಿಂದ ಇಬ್ಬರು ಪುರುಷರು, ಮುಂಬೈಯಿಂದ ಬಂದ ಏಳು ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಮಂಗಳೂರಿನ ಕೆಂಜಾರು ಗ್ರಾಮದ ನಿವಾಸಿ ಪಿ-2287 ಸೋಂಕಿತನಿಂದ ಮೂರು ಮಂದಿ ಪುರುಷರಿಗೆ ಸೋಂಕು ತಗುಲಿದೆ.

ಈ ಮೂಲಕ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 133ಕ್ಕೆ ಏರಿದೆ. ಈವರೆಗೆ ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ 82 ಮಂದಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.