ETV Bharat / state

ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ: ಬೊಮ್ಮಾಯಿ - ಹಿಂದೂ ಮುಖಂಡೆ ಚೈತ್ರಾ ಕುಂದಾಪುರ

ವಂಚನೆ ಆರೋಪದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನದ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

Former CM Basavaraj Bommai
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By ETV Bharat Karnataka Team

Published : Sep 14, 2023, 1:42 PM IST

Updated : Sep 14, 2023, 3:10 PM IST

ಬಸವರಾಜ ಬೊಮ್ಮಾಯಿ

ಮಂಗಳೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಂದ ಕೋಟ್ಯಂತರ ರೂಪಾಯಿ ಪಡೆದ ಆರೋಪದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬುದು ನಮ್ಮ ಸ್ಪಷ್ಟವಾದ ನಿಲುವು. ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಉಗ್ರ ಶಿಕ್ಷೆ ಆಗಲಿ. ಯಾರು ಭಾಗಿಯಾಗಿದ್ದಾರೋ ಅವರ ಬಂಧನವಾಗಬೇಕು. ಇಂತಹ ದುರುಪಯೋಗ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಕುರಿತು ಮಾತನಾಡಿದ ಬೊಮ್ಮಾಯಿ, ಟಿಕೆಟ್ ಹಂಚಿಕೆ ಕ್ಷೇತ್ರ ಹಂಚಿಕೆಯ ಹಂತ ತಲುಪಿಲ್ಲ. ಈಗ ಪ್ರಾಥಮಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ವರಿಷ್ಠರು ನಮ್ಮನ್ನು ಮಾತನಾಡಿಸಿ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ. ನನ್ನ ಪ್ರಕಾರ ಕುಮಾರಸ್ವಾಮಿ ಅವರನ್ನು ವಿಪಕ್ಷ ನಾಯಕನಾಗಿ ಮಾಡುವ ಬಗ್ಗೆ ಚಿಂತನೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಹೆಚ್ಚು ಸ್ಥಾನ ಪಡೆಯುವುದೇ ನಮ್ಮ ಗುರಿ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಮುಂಗಾರುಪೂರ್ವ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಜೂನ್, ಜುಲೈ, ಆಗಸ್ಟ್​ ಎಂದು ಬರ ಘೋಷಣೆಯನ್ನು ಮುಂದೂಡಿಕೆ ಮಾಡುತ್ತಲೇ ಬಂದರು. ಸರ್ಕಾರ ಬರ ಘೋಷಣೆ ಮಾಡಿ ಪರಿಹಾರ ಘೋಷಿಸಿ, ಬೆಳೆ ನಷ್ಟ ಕೊಡಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ನಮ್ಮ ಕಾಲದಲ್ಲಿ ಪ್ರವಾಹ ಬಂದ ಒಂದು ತಿಂಗಳಲ್ಲಿ ನಾವು ಕೇಂದ್ರದ ಮಾನದಂಡಕ್ಕೆ ಕಾಯಲಿಲ್ಲ. ಕೇಂದ್ರ ಕೊಟ್ಟದ್ದಕ್ಕಿಂತ ಎರಡು ಪಟ್ಟು ಅನುದಾನ ಕೊಟ್ಟಿದ್ದೇವೆ. ಆ ರೀತಿ ಜನರಿಗೆ ಸಹಾಯ ಮಾಡುವ ಮನೋಭಾವ ಇವರಲ್ಲಿಲ್ಲ. ಸುಮ್ಮನೆ ಕುಂಟು ನೆಪ ಹೇಳ್ತಾರೆ ಎಂದು ಟೀಕಿಸಿದರು.

ಅಲ್ಪಾವಧಿ, ಮಧ್ಯಮಾವಧಿ ಸಾಲಗಳನ್ನು ದೀರ್ಘಾವಧಿ ಸಾಲ ಮಾಡಬೇಕು. ಮುಂಬರುವ ಸಾಲ ಬಿಡುಗಡೆ ಮಾಡಬೇಕು. ರೈತರನ್ನು ಆತ್ಮಹತ್ಯೆಯಿಂದ ರಕ್ಷಿಸಬೇಕು. ಕುಡಿಯುವ ನೀರು, ಮೇವು ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಬರಗಾಲದ ತಾಲೂಕಿನಲ್ಲಿ ಹೋರಾಟ ಮಾಡುತ್ತಿದ್ದೇವೆ.

ಜೂನ್​ನಲ್ಲಿ ತಮಿಳುನಾಡಿನ ಡ್ಯಾಂಗಳಲ್ಲಿ ನೀರು ಹೆಚ್ಚಿತ್ತು. ಟ್ರಿಬ್ಯುನಲ್ ಪ್ರಕಾರ, 1.8 ಲಕ್ಷ ಹೆಕ್ಟೇರ್ ಕೃಷಿ ಬೆಳೆಯಬೇಕು. ಆದರೆ ಅವರು ಅಕ್ರಮವಾಗಿ 4 ಲಕ್ಷ ಹೆಕ್ಟೇರ್ ಕೃಷಿ ಬೆಳೆದಿದ್ದಾರೆ. ನೀರು ಹಂತಹಂತವಾಗಿ ಬಿಟ್ಟರು. ಆದರೆ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇನ್ನು ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ. ನೀರು ಬಿಡುವುದಿಲ್ಲ ಎಂಬ ಗಟ್ಟಿ ನಿಲುವಿಗೆ ಬಿದ್ದರೆ ನಾವು ಸಪೋರ್ಟ್ ಮಾಡುತ್ತೇವೆ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಂಚನೆ ಆರೋಪ ಪ್ರಕರಣ: 'ಸ್ವಾಮೀಜಿ ಬಂಧನವಾಗಲಿ, ಸತ್ಯ ತಿಳಿಯಲಿದೆ' ಎಂದ ಚೈತ್ರಾ ಕುಂದಾಪುರ

Last Updated : Sep 14, 2023, 3:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.