ETV Bharat / state

ಶಾಕಿಂಗ್​: ಮಂಗಳೂರು ಜ್ಯುವೆಲರಿ ಕಳ್ಳತನ ಪ್ರಕರಣಕ್ಕೆ ಅಫ್ಘಾನಿಸ್ತಾನ್​ ನಂಟು! - mangalore police

ಮಂಗಳೂರಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಅಫ್ಘಾನಿಸ್ತಾನ ನಂಟಿದೆ ಅನ್ನುವ ಆತಂಕಕಾರಿ ವಿಷಯವೊಂದು ಬಯಲಾಗಿದೆ. ಪ್ರಕರಣದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದಾಗ ಈ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಚಿನ್ನಾಭರಣ ಅಂಗಡಿ ಕಳವು ಪ್ರಕರಣ
author img

By

Published : Sep 27, 2019, 9:55 AM IST

ಮಂಗಳೂರು: ಇಲ್ಲಿನ ಭವಂತಿ ಸ್ಟ್ರೀಟ್​ನಲ್ಲಿ ಸೆಪ್ಟಂಬರ್​ 2 ರ ರಾತ್ರಿ ನಡೆದಿದ್ದ ಚಿನ್ನಾಭರಣ ಅಂಗಡಿ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆದ್ರೆ ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರು ಅಚ್ಚರಿಯ ವಿಷಯವೊಂದು ತಿಳಿದುಬಂದಿದೆ.

ಹೌದು, ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಇಬ್ಬರು ಅಫ್ಘಾನಿಸ್ತಾನಿಯರು ಅನ್ನೋದು ಅಚ್ಚರಿಗೆ ಕಾರಣವಾಗಿದೆ. ಒಟ್ಟು ಮೂವರನ್ನು ಮಂಗಳೂರು ಪೊಲೀಸರು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ. ಎಸ್. ಹರ್ಷ ತಿಳಿಸಿದ್ದಾರೆ.

ಚಿನ್ನಾಭರಣ ಅಂಗಡಿ ಕಳವು ಪ್ರಕರಣ

ಚಿನ್ನಾಭರಣ ಕಳ್ಳತನ ಪ್ರಕರಣದ ಮಾಸ್ಟರ್ ಮೈಂಡ್ ಕೇರಳದ ಮುಹ್ತಸಿಮು ಸಿ ಎಂ ಯಾನೆ ತಸ್ಲಿಂ (39), ಅಫ್ಘಾನಿಸ್ತಾನದ ವಲಿ ಮೊಹಮ್ಮದ್ ಸಫಿ(45), ಮೊಹಮ್ಮದ್ ಅಝೀಂ ಖುರಾಮ್ (25) ಬಂಧಿತರು.

ಸೆ. 2 ರ ರಾತ್ರಿ ಮಂಗಳೂರಿನ ಭವಂತಿ ರಸ್ತೆಯಲ್ಲಿರುವ ಅರುಣ್ ಜ್ಯುವೆಲರಿಯ ಗೋಡೆ ಕೊರೆದು ಒಳನುಗ್ಗಿದ್ದ ಖದೀಮರು ಲಾಕರ್​ನಲ್ಲಿದ್ದ ಒಂದು ಕೋಟಿ ಮೌಲ್ಯದ 3431.45 ಗ್ರಾಂ ಚಿನ್ನಾಭರಣ ಮತ್ತು 9.11 ಲಕ್ಷ ರೂ. ಮೌಲ್ಯದ 20.660 ಕೆ.ಜಿ. ಬೆಳ್ಳಿಯಾಭರಣ ಕದ್ದೊಯ್ದಿದ್ದರು. ಈ ಕೃತ್ಯಕ್ಕೆ ಅತ್ಯಾಧುನಿಕ ಸಾಧನಗಳನ್ನು ಬಳಸಿ, ಕೈಚಳಕ ತೋರಿಸಿದ್ದರು. ಸದ್ಯ ಈ ಪ್ರಕರಣವನ್ನು ಮಂಗಳೂರು ಪೊಲೀಸರ ತಂಡ ಭೇದಿಸಿದ್ದು, ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಂಡ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇನ್ನೂ ಹಲವರ ಬಂಧನ ಬಾಕಿಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಹ್ತಸಿಮು ಕೇರಳದ ಕಾಸರಗೋಡು ಜಿಲ್ಲೆಯವನಾಗಿದ್ದು, ಮುಂಬೈನ ಭೂಗತ ಪಾತಕಿಗಳ ಜೊತೆಗೆ ಸಂಪರ್ಕ ಹೊಂದಿದ್ದಾನೆ. ಈತನೊಂದಿಗೆ ಇದ್ದ ಇಬ್ಬರು ಅಪ್ಘಾನಿಸ್ತಾನಿಯರನ್ನು ಆರು ತಿಂಗಳ ಹಿಂದೆ ದೆಹಲಿ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧಿಸಿದ್ದರು. ಅಲ್ಲಿಂದ ಬಿಡುಗಡೆಯಾದ ಬಳಿಕ ಈ ಚಿನ್ನಾಭರಣ ಕಳವು ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ.

ಬಂಧಿತರ ವಿಚಾರಣೆ ಬಳಿಕ ಕಾಸರಗೋಡು ಮತ್ತು ಮುಂಬೈನ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಕಳ್ಳತನಾವಗಿದ್ದ ಚಿನ್ನಾಭರಣಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆರೋಪಿಗಳನ್ನು ಪತ್ತೆ ಹಚ್ಚಿದ ಮಂಗಳೂರು ನಗರ ಸಿಸಿಬಿ, ಉತ್ತರ ಪೊಲೀಸ್ ಠಾಣೆ ಮತ್ತು ಎಸಿಪಿ ಸೆಂಟ್ರಲ್ ಸ್ಕ್ವಾಡ್ ಪೊಲೀಸರನ್ನು ಮಂಗಳೂರು ಪೊಲೀಸ್ ಕಮೀಷನರ್ ಹರ್ಷ ಅಭಿನಂದಿಸಿದ್ದಾರೆ.

Intro:ಮಂಗಳೂರು: ಸೆಪ್ಟೆಂಬರ್ 2 ರ ರಾತ್ರಿ ಮಂಗಳೂರಿನ ಭವಂತಿ ಸ್ಟ್ರೀಟ್ ನಲ್ಲಿ ನಡೆದ ಚಿನ್ನಾಭರಣ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಫ್ಘಾನಿಸ್ತಾನಿಯರು ಸೇರಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ತಿಳಿಸಿದ್ದಾರೆ

Body:ಚಿನ್ನಾಭರಣ ಕಳವು ಮಾಸ್ಟರ್ ಮೈಂಡ್ ಕೇರಳದ ಮುಹ್ತಸಿಮು ಸಿ ಎಂ ಯಾನೆ ತಸ್ಲಿಂ (39) , ಅಫ್ಘಾನಿಸ್ತಾನದ ವಲಿ ಮೊಹಮ್ಮದ್ ಸಫಿ (45), ಮೊಹಮ್ಮದ್ ಅಝೀಂ ಖುರಾಮ್ (25) ಬಂಧಿತರು.
ಸೆಪ್ಟೆಂಬರ್ 2 ರ ರಾತ್ರಿ ಮಂಗಳೂರಿನ ಭವಂತಿ ರಸ್ತೆಯಲ್ಲಿರುವ ಅರುಣ್ ಜ್ಯುವೆಲ್ಲರಿಯ ಗೋಡೆ ಕೊರೆದು ಒಳನುಗ್ಗಿ ಲಾಕರ್ ನಲ್ಲಿದ್ದ ಒಂದು ಕೋಟಿ ಮೌಲ್ಯದ 3431.45 ಗ್ರಾಂ ಚಿನ್ನಾಭರಣ ಮತ್ತು 9.11 ಲಕ್ಷ ರೂ ಮೌಲ್ಯದ 20.660 ಕೆಜಿ ಬೆಳ್ಳಿಯಾಭರಣ ಕಳವುಗೈಯ್ಯಲಾಗಿತ್ತು. ಅತ್ಯಾಧುನಿಕ ಸಾಧನಗಳನ್ನು ಬಳಸಿ ನಡೆದ ಈ ಕಳವು ಪ್ರಕರಣವನ್ನು ಮಂಗಳೂರು ಪೊಲೀಸರ ತಂಡ ಭೇಧಿಸಿದ್ದು ಪ್ರಕರಣದಲ್ಲಿ ಅಂತರಾಷ್ಟ್ರೀಯ ಮಟ್ಟದ ತಂಡ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇನ್ನೂ ಹಲವರ ಬಂಧನ ಬಾಕಿಯಿದೆ.
ಮುಹ್ತಸಿಮು ಕೇರಳದ ಕಾಸರಗೋಡು ಜಿಲ್ಲೆಯವನಾಗಿದ್ದು ಮುಂಬಯಿಯೊಂದಿಗೆ ಸಂಪರ್ಕ ಬೆಳೆಸಿ ಭೂಗತ ಪಾತಕಿಗಳ ಜೊತೆಗೆ ಪಾತಕ ಕೃತ್ಯ ಎಸಗುತ್ತಿದೆ. ಈತನೊಂದಿಗೆ ಇದ್ದ ಇಬ್ಬರು ಅಪ್ಘಾನಿಸ್ತಾನಿಯರು ಆರು ತಿಂಗಳ ಹಿಂದೆ ದೆಹಲಿ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧಿಸಿದ್ದರು. ಅಲ್ಲಿಂದ ಬಿಡುಗಡೆ ಬಳಿಕ ಈ ಚಿನ್ನಾಭರಣ ಕಳವುಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಕಾಸರಗೋಡು ಮತ್ತು ಮುಂಬಯಿನಿಂದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು ಇನ್ನೂ ಕಳವಾದ ಚಿನ್ನಾಭರಣಗಳ ಶೋಧ ಮುಂದುವರಿದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಿದ ಮಂಗಳೂರು ನಗರ ಸಿಸಿಬಿ, ಉತ್ತರ ಪೊಲೀಸ್ ಠಾಣೆ ಮತ್ತು ಎಸಿಪಿ ಸೆಂಟ್ರಲ್ ಸ್ಕ್ವಾಡ್ ಪೊಲೀಸರನ್ನು ಮಂಗಳೂರು ಪೊಲೀಸ್ ಕಮೀಷನರ್ ಅಭಿನಂದಿಸಿದ್ದಾರೆ.

ಬೈಟ್- ಡಾ. ಪಿ ಎಸ್ ಹರ್ಷ, ಮಂಗಳೂರು ಪೊಲೀಸ್ ಕಮೀಷನರ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.