ETV Bharat / state

ಮಂಗಳೂರಿನಲ್ಲಿ ಮಿಲಾದುನ್ನಬಿ ಮೆರವಣಿಗೆ: ಸೌಹಾರ್ದತೆ ಮೆರೆದ ಹಿಂದುಗಳು

author img

By

Published : Nov 10, 2019, 4:00 PM IST

ಮಂಗಳೂರಿನಲ್ಲಿ ಈದ್​ ಮಿಲಾದ್ ಹಬ್ಬದ​ ಪ್ರಯುಕ್ತ ನಡೆದ ​ಮಿಲಾದುನ್ನಬಿ  ಮೆರವಣಿಗೆಯ ವೇಳೆ ಹಿಂದುಗಳು ಮುಸ್ಲೀಮರಿಗೆ ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಮೀಲಾದುನ್ನಬಿ ಮೆರವಣಿಗೆ

ಮಂಗಳೂರು: ಈದ್​ ಮಿಲಾದ್​ ಪ್ರಯುಕ್ತ ನಡೆಯುವ ​ಮಿಲಾದುನ್ನಬಿ ಮೆರವಣಿಗೆ ವೇಳೆ ಹಿಂದುಗಳು ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಬಂದರ್ ಕಂದುಕ ಪ್ರದೇಶದಲ್ಲಿ ಬೆಳಗ್ಗೆ ನಡೆದ ಮೆರವಣಿಗೆಯ ಸಂದರ್ಭದಲ್ಲಿ ತುಳುನಾಡ ಸಂಜೀವಿನಿ ಸಂಸ್ಥೆ ಹಾಗೂ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ಹಂಚಲಾಯಿತು.

ಮಿಲಾದುನ್ನಬಿ ಮೆರವಣಿಗೆ ವೇಳೆ ಹಿಂದೂಗಳ ಸೌಹಾರ್ದತೆ

ಇನ್ನು, ಪುತ್ತೂರಿನಲ್ಲಿಯೂ ಕೂಡ ಮಿಲಾದುನ್ನಬಿ ಮೆರವಣಿಗೆಯಲ್ಲಿ ಅಲ್ಲಿನ ಹಿಂದುಗಳು ಸಿಹಿತಿಂಡಿ ವಿತರಿಸಿದ್ದಾರೆ. ಸೈಯದ್ ಮಲೆ ಮಿಸ್ಬಾಹುಲ್ ಹುದಾ ಮದರಸಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನದೊಂದಿಗೆ ಸಾಲ್ಮರ ಮಸೀದಿಯಿಂದ ಕೆರೆಮೂಲೆಯವರೆಗೆ ಮಿಲಾದ್ ಜಾಥಾ ನಡೆದಾಗ ಸಾಲ್ಮರ ನಾಗಬನ ಸೇವಾ ಸಮಿತಿಯು ಮಿಲಾದ್ ಸಂಭ್ರಮದಲ್ಲಿದ್ದವರಿಗೆ ಸಿಹಿ ತಿಂಡಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಬ್ಯಾರಿ ಭಾಷೆಯಲ್ಲಿ ಮಿಲಾದುನ್ನಬಿ ಶುಭಾಶಯ ಕೋರಿದ್ದಾರೆ.

Intro:ಮಂಗಳೂರು: ಮೀಲಾದುನ್ನಬಿ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಹಿಂದುಗಳು ತಂಪು ಪಾನೀಯಗಳ ನೀಡುವ ಮೂಲಕ ಸೌಹಾರ್ದ ಮೆರೆದಿದ್ದಾರೆBody:ಮಂಗಳೂರಿನ ಬಂದರ್ ಕಂದುಕ ಪ್ರದೇಶದಲ್ಲಿ ಬೆಳಗ್ಗೆ ನಡೆದ ಮೆರವಣಿಗೆಯ ಸಂದರ್ಭ ತುಳುನಾಡ ಸಂಜೀವಿನಿ ಸಂಸ್ಥೆ ಹಾಗೂ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.

ಪುತ್ತೂರಿನಲ್ಲಿ ನಡೆದ ಮೀಲಾದುನ್ನಬಿ ಮೆರವಣಿಗೆಯಲ್ಲಿಯೂ ಅಲ್ಲಿನ ಹಿಂದೂಗಳು ಸಿಹಿತಿಂಡಿ ವಿತರಿಸಿ ಸೌಹಾರ್ದ ಮೆರೆದಿದ್ದಾರೆ.
ಸೈಯದ್ ಮಲೆ ಮಿಸ್ಬಾಹುಲ್ ಹುದಾ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನದೊಂದಿಗೆ ಸಾಲ್ಮರ ಮಸೀದಿಯಿಂದ ಕೆರೆಮೂಲೆಯ ವರೆಗೆ ಮೀಲಾದ್ ಜಾಥಾ ನಡೆದಾಗ ಸಾಲ್ಮರ ನಾಗಬನ ಸೇವಾ ಸಮಿತಿಯು ಮೀಲಾದ್ ಸಂಭ್ರಮಾಚರಣೆಯಲ್ಲಿದ್ದವರಿಗೆ ಸಿಹಿತಿಂಡಿ ಹಂಚಿ ಸೌಹಾರ್ದ ಮೆರೆದಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಬ್ಯಾರಿ ಭಾಷೆಯಲ್ಲಿ ಮೀಲಾದುನ್ನಬಿ ಶುಭಾಶಯ ಕೋರಿದ್ದಾರೆ.
ಫೇಸ್ ಬುಕ್ ನಲ್ಲಿ ಬ್ಯಾರಿ ಭಾಷೆಯಲ್ಲಿ
‘‘ನಂಡೇ ಪಿರ್ಸತ್ತೊ ಮುಸ್ಲಿಂ ಸಮುದಾಯತ್ತೊ ಚಂಙಾಯಿಮಾರೆ, ನಿಂಕ್ ಎಲ್ಲಾರ್‌ಗುಂ ‘ಮೀಲಾದುನ್ನಬಿ’ರೇ ನಲ್ಮೆ ಆಶಿಕ್ಕ್‌ರೆ ಶುಭಾಶಯ. ನಬಿ ಮುಹಮ್ಮದ್(ಸ.ಅ.)ರೆ ಜೀವನ ಪಿನ್ನೆ ಆದರ್ಶಙ ನಂಕ್ ಎಲ್ಲಾರ್‌ಗುಂ ಮಾದರಿ ಆವಟ್’’ (ನನ್ನ ಪ್ರೀತಿಯ ಮುಸ್ಲಿಂ ಸಮುದಾಯದ ಸ್ನೇಹಿತರೇ.. ನಿಮ್ಮೆಲ್ಲರಿಗೂ 'ಮೀಲಾದುನ್ನೆಬಿ' ಆಚರಣೆಯ ಶುಭಾಷಯಗಳು..ಪ್ರವಾದಿ ಮುಹಮ್ಮದ್ (ಸ.ಅ) ಜೀವನ ಮತ್ತು‌ ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಲಿ) ಎಂದು ಶುಭ ಹಾರೈಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.