ETV Bharat / state

ದ.ಕನ್ನಡ ಸಂಪೂರ್ಣ ಬಂದ್ ಅವೈಜ್ಞಾನಿಕ: ಮರು ಪರಿಶೀಲನೆಗೆ ಕಾಂಗ್ರೆಸ್ ಒತ್ತಾಯ - Congress delegation

ದಕ್ಷಿಣ ಕನ್ನಡ ಸಂಪೂರ್ಣ ಬಂದ್ ಅವೈಜ್ಞಾನಿಕವಾಗಿದೆ. ಜಿಲ್ಲಾಡಳಿತ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ನೇತೃತ್ವದ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿತು.

ದ.ಕನ್ನಡ ಸಂಪೂರ್ಣ ಬಂದ್ ಅವೈಜ್ಞಾನಿಕ
ದ.ಕನ್ನಡ ಸಂಪೂರ್ಣ ಬಂದ್ ಅವೈಜ್ಞಾನಿಕ
author img

By

Published : Mar 29, 2020, 10:59 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಆದೇಶ ಅವೈಜ್ಞಾನಿಕವಾಗಿದ್ದು, ಜನರು ಅಗತ್ಯ ವಸ್ತುಗಳ ಖರೀದಿಗೂ ಹೊರಬರಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಆದೇಶ ಮರುಪರಿಶೀಲನೆ ಮಾಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ನೇತೃತ್ವದ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಯನ್ನು ಭೇಟಿ ಮಾಡಿದ ನಿಯೋಗದ ಸದಸ್ಯರು, ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲೆಯ ಎಲ್ಲ ದಿನಸಿ ಅಂಗಡಿಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಿತ್ಯವೂ ತೆರೆಯಲು ಅನುಮತಿ ನೀಡಬೇಕು. ಗ್ರಾಮಾಂತರ ಪ್ರದೇಶದ ಬಹುತೇಕ ಮಂದಿ ಈಗಲೂ ದಿನಸಿ ಸಾಮಗ್ರಿಗಳನ್ನು ಸ್ಥಳೀಯ ಅಂಗಡಿಗಳಿಂದ ಸಾಲ ಪಡೆಯುವವರಿದ್ದಾರೆ. ಆದ್ದರಿಂದ ಕೇವಲ ಸೂಪರ್ ಮಾರ್ಕೆಟ್ ಹಾಗೂ ದೊಡ್ಡ ಅಂಗಡಿಗಳಿಗೆ ಮಾತ್ರ ದಾಸ್ತಾನು ಮತ್ತು ಮಾರಾಟಕ್ಕೆ ಅನುಮತಿ ನೀಡಿದಲ್ಲಿ ಜನರಿಗೆ ಅಗತ್ಯ ಸಾಮಗ್ರಿಗಳು ಸಿಗದೇ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಲು ನಿಯೋಗ ಒತ್ತಾಯಿಸಿತು.

ದ.ಕನ್ನಡ ಸಂಪೂರ್ಣ ಬಂದ್ ಅವೈಜ್ಞಾನಿಕ
ದ.ಕನ್ನಡ ಸಂಪೂರ್ಣ ಬಂದ್ ಅವೈಜ್ಞಾನಿಕ

ಅಲ್ಲದೆ ಆನ್ಲೈನ್ ಆ್ಯಪ್​​ಗಳ ಮೂಲಕ ಜನರಿಗೆ ದಿನಸಿ ಸಾಮಗ್ರಿಗಳ ಪೂರೈಕೆ ಮಾಡಿದರೆ ಕೇವಲ 20 ಶೇಕಡಾ ನಗರವಾಸಿಗಳು ಮತ್ತು ಶ್ರೀಮಂತರಿಗೆ ಮಾತ್ರ ದೊರೆಯುತ್ತದೆ. ಇದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಲಿದೆ. ಮಂಗಳೂರಿನ ಬಂದರು ವ್ಯಾಪ್ತಿಯಲ್ಲಿ ಎಲ್ಲ ದಾಸ್ತಾನು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಗ್ರಾಮಾಂತರದ ಸಣ್ಣ ವ್ಯಾಪಾರಸ್ಥರಿಗೆ ದಿನಸಿ ಸಾಮಗ್ರಿಗಳ ಪೂರೈಕೆ ಕೊರತೆ ಉಂಟಾಗಿ ಜನರಿಗೆ ತೊಂದರೆಯಾಗಲಿದೆ.

ನಗರದ ಎಲ್ಲ 60 ವಾರ್ಡ್​ಗಳಲ್ಲಿ ವಾಹನಗಳ ಮೂಲಕ ತರಕಾರಿ ಪೂರೈಕೆ ಮಾಡಲು ಸಂಬಂಧಿಸಿದ ಸ್ಥಳೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬೇಕು. ಇದರಿಂದ ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ತಪ್ಪಿಸಬಹುದು. ಅಲ್ಲದೇ ಎಲ್ಲ ಮಾಂಸದ ಅಂಗಡಿಗಳನ್ನು ತೆರೆಯಬೇಕು. ನಗರದ ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್​​ಗಳಲ್ಲಿ 24×7 ಸಾಮಗ್ರಿ ಪೂರೈಕೆಗೆ ಅವಕಾಶ ನೀಡಿದ್ದಲ್ಲಿ, ನಗರ ಪ್ರದೇಶದ ಜನರು ಮನೆಗಳಿಂದ ಹೊರ ಬರುವುದನ್ನು ತಪ್ಪಿಸಬಹುದು ಎಂದು ನಿಯೋಗದ ಸದಸ್ಯರು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.