ETV Bharat / state

ಹಸುಗೂಸು ಸಹಿತ ಮಕ್ಕಳಿಬ್ಬರನ್ನು ಬಿಟ್ಟು ದಂಪತಿ ನಾಪತ್ತೆ: ಆಶ್ರಮ ಸೇರಿದ ಮಕ್ಕಳು, ಪೋಷಕರ ಪತ್ತೆಗೆ ಮನವಿ - ಈಟಿವಿ ಭಾರತ ಕನ್ನಡ

ಆಸ್ಪತ್ರೆಗೆ ಹೋಗಿ ಬರೋದಾಗಿ ಹೇಳಿ ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ದಂಪತಿಗಳು ನಾಪತ್ತೆಯಾಗಿರುವ ಘಟನೆ ನಡೆದಿದೆ.

ದಂಪತಿಗಳು ನಾಪತ್ತೆ
ದಂಪತಿಗಳು ನಾಪತ್ತೆ
author img

By

Published : Jun 6, 2023, 1:08 PM IST

ಉಪ್ಪಿನಂಗಡಿ (ದಕ್ಷಿಣಕನ್ನಡ): ಮನೆಯೊಂದರಲ್ಲಿ ತಮ್ಮ ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ದಂಪತಿ ನಾಪತ್ತೆಯಾಗಿದ್ದು, ಹೆತ್ತವರ ಪತ್ತೆಗಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಅಲ್ಲದೇ ಪ್ರಸ್ತುತ ಈ ಮಕ್ಕಳನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಿರುವ ಘಟನೆ ಕರಾಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ಅಲೆಮಾರಿ ಜನಾಂಗದವರು ಎನ್ನಲಾದ ದಂಪತಿಗಳು ಬುಟ್ಟಿ ಹೆಣೆಯುವ ಕಾಯಕ ಮಾಡುತ್ತಿದ್ದೂ, ಪರಿಸರದ ನಿವಾಸಿಗರ ವಿಶ್ವಾಸ ಗಳಿಸಿದ್ದರು. ಮದ್ಯಪಾನ ವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತವಾಗಿ ಜೀವನ ನಡೆಸುತ್ತಿದ್ದರು. ಈ ದಂಪತಿಗಳಿಗೆ ದಿನೇಶ ಎಂಬ ಹೆಸರಿನ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದು ಜನಿಸಿತ್ತು.

ಜೂ. 2ರಂದು ಈ ಇಬ್ಬರೂ ಮಕ್ಕಳನ್ನು ಕರಾಯ ಗ್ರಾಮದ ಮನೆಯೊಂದರಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಹೇಳಿ ಈ ದಂಪತಿ ತೆರಳಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಆ ಮನೆಯೊಡತಿ ಫಾತಿಮಾ ಅವರು ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಆ ಬಳಿಕ ಈ ದಂಪತಿಗಳ ಪತ್ತೆಯಿರಲಿಲ್ಲ. ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳ ಲಾಲನೆ ಪಾಲನೆಯನ್ನು ಫಾತಿಮಾ ಮಾಡಿದ್ದಾರೆ. ಆದರೆ 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡ ಫಾತಿಮಾ, ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪ್ರಸ್ತುತ ಈ ಮಕ್ಕಳನ್ನು ಪುತ್ತೂರಿನಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಲಾಗಿದೆ.

ಇದೀಗ ಮಕ್ಕಳನ್ನು ಬಿಟ್ಟು ಹೋಗಿ ನಾಲ್ಕು ದಿನಗಳು ಕಳೆದಿದೆ. ಹೆತ್ತವರ ಪತ್ತೆ ಇಲ್ಲದಿರುವುದನ್ನು ಗಮನಿಸಿದ ಫಾತಿಮಾ ನಿನ್ನೆ ಸೋಮವಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಫಾತಿಮಾ ಅವರು ದಂಪತಿಯನ್ನು ಪತ್ತೆ ಹಚ್ಚುವಂತೆ ತಾವು ನೀಡಿದ ದೂರಿನಲ್ಲಿ ವಿನಂತಿಸಿದ್ದಾರೆ. ದಂಪತಿಯ ಪೈಕಿ ಗಂಡನ ಹೆಸರು ತಿಳಿದಿಲ್ಲ ಎಂದಿರುವ ಅವರು, ಪತ್ನಿಯ ಹೆಸರು ಆಕೆಯ ಮಗ ತಿಳಿಸಿದ ರೀತಿಯಲ್ಲಿ ಲೀಲಾ ಎಂಬುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅವಾಚ್ಯ ಶಬ್ದಗಳಿಂದ ಜೆಡಿಎಸ್​ ಶಾಸಕಿ ಕರೇಮ್ಮಗೆ ನಿಂದನೆ ಆರೋಪ: 8 ಜನರ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.