ETV Bharat / state

ರಸ್ತೆ ಬಿಟ್ಟು ಮಸೀದಿ ಆವರಣದೊಳಗೆ ನುಗ್ಗಿದ ಕಾರು ಪಲ್ಟಿ - Belthangady accident News

ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಎದುರಿನಿಂದ ಬಂದ ಲಾರಿಯೊಂದಿಗಿನ ಡಿಕ್ಕಿ ತಪ್ಪಿಸಲು ಹೋಗಿ ರಸ್ತೆ ಬಿಟ್ಟು ಪಕ್ಕದ ಮಸೀದಿ ಆವರಣದೊಳಗೆ ಮಗುಚಿ ಬಿದ್ದಿದೆ.

ಮಸೀದಿ ಆವರಣದೊಳಗೆ ನುಗ್ಗಿದ ಕಾರು
ಮಸೀದಿ ಆವರಣದೊಳಗೆ ನುಗ್ಗಿದ ಕಾರು
author img

By

Published : Aug 4, 2020, 8:44 AM IST

ಬೆಳ್ತಂಗಡಿ: ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಮೂಡಬಿದ್ರೆಯ ವ್ಯಕ್ತಿಯೊಬ್ಬರ ಕಾರು ಮದ್ದಡ್ಕ ಸನಿಹದ ಪಣಕಜೆ ಸಬರಬೈಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಸೀದಿಯ ಆವರಣಕ್ಕೆ ನುಗ್ಗಿ ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಎದುರಿನಿಂದ ಬಂದ ಲಾರಿಯೊಂದಿಗಿನ ಡಿಕ್ಕಿ ತಪ್ಪಿಸಲು ಹೋಗಿ ರಸ್ತೆ ಬಿಟ್ಟು ಪಕ್ಕದ ಮಸೀದಿ ಆವರಣದೊಳಗೆ ಮಗುಚಿ ಬಿದ್ದಿದೆ.

ಅಪಘಾತದ ರಭಸಕ್ಕೆ ಕಾರು ತಲೆಕೆಳಗಾಗಿ ಬಿದ್ದಿದ್ದು, ಕಾರಿನ‌ ಚಾಲಕ ಮತ್ತು ಇನ್ನೋರ್ವ ಸಹ ಪ್ರಯಾಣಿಕ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಕಾರು ಮಗುಚಿ ಬಿದ್ದ ಜಾಗ ಮಸೀದಿ‌ ಆವರಣವಾಗಿದ್ದು, ಅಲ್ಲಿ ಧಾರ್ಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸಂಜೆ ವೇಳೆ ಸುತ್ತಾಡುವ ಪ್ರದೇಶವಾಗಿತ್ತು. ಆದರೆ, ಇದೀಗ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದು ಮಸೀದಿ ಗಳಲ್ಲೂ ಜನ ಪಾರ್ಥನೆಗೆ ಬಾರದಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.