ETV Bharat / state

ಶ್ರೀಕ್ಷೇತ್ರ ಕಟೀಲು ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ..!

ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಧಾರ್ಮಿಕ ಪರಿಷತ್​​ನ ಮುಖಂಡರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಉತ್ತರ ಬರುವ ಮೊದಲೇ ವಸ್ತ್ರ ಸಂಹಿತೆ ಬೋರ್ಡ್​ ಹಾಕಲಾಗಿದೆ.

temple-request-to-devotees-to-wear-hindu-traditional-dress-code
ಶ್ರೀಕ್ಷೇತ್ರ ಕಟೀಲು ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ
author img

By

Published : Oct 7, 2021, 2:17 PM IST

ಮಂಗಳೂರು: ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕೆನ್ನುವ ಕೂಗು ಸಾಕಷ್ಟು ಕಾಲಗಳಿಂದ ಕೇಳಿಬರುತ್ತಿದ್ದು, ಹಿಂದೂ ಪರ ಸಂಘಟನೆಗಳು ಈ ಬಗ್ಗೆ ಒತ್ತಾಯಿಸುತ್ತಿದ್ದವು. ಇದೀಗ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಗಳಲ್ಲಿ ಭಕ್ತಾದಿಗಳು ದೇಗುಲ ಪ್ರವೇಶದ ಮುನ್ನ ವಸ್ತ್ರಸಂಹಿತೆ ಪಾಲಿಸಬೇಕೆನ್ನುವ ಬೋರ್ಡ್ ಹಾಕಲಾಗಿದೆ.

ದೇಗುಲಗಳ ಪಾವಿತ್ರ್ಯತೆ ಕಾಪಾಡುವ, ಹಿಂದೂ ಧಾರ್ಮಿಕ ಮನೋಸ್ಥಿತಿ ಬೆಳೆಸುವ ನಿಟ್ಟಿನಲ್ಲಿ ವಸ್ತ್ರಸಂಹಿತೆಯ ಬೋರ್ಡ್ ಹಾಕಲಾಗಿದೆ. ಈ ವಸ್ತ್ರಸಂಹಿತೆಯು ಮುಜರಾಯಿ ಇಲಾಖೆಯಿಂದಲೇ ಜಾರಿಯಾಗಬೇಕೆನ್ನುವುದನ್ನು ಧಾರ್ಮಿಕ ಪರಿಷತ್​​ನ ಮುಖಂಡರು ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿದ್ದರು.

ಶ್ರೀಕ್ಷೇತ್ರ ಕಟೀಲು ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ

ಆದರೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರೂ, ದೇವಸ್ಥಾನಗಳ ಪ್ರವೇಶ ದ್ವಾರಗಳಲ್ಲಿ ಈ ಬೋರ್ಡ್ ಹಾಕಲಾಗಿದೆ.

ಈ ಕುರಿತು ಶ್ರೀಕ್ಷೇತ್ರ ಕಟೀಲು ದೇವಾಲಯದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಿ ವಸ್ತ್ರಧಾರಣೆ ಬೇರೆ ಕಡೆಗಳಲ್ಲಿ ಸಮಂಜಸ ಎಂದು ಕಂಡುಕೊಂಡರೂ, ಬಾಹ್ಯ ಹಾಗೂ ಅಂತರಂಗ ಶುದ್ಧಿಯನ್ನು ಇರಿಸಿಕೊಂಡು ದೇವರ ದರ್ಶನಕ್ಕೆ ಬರುವ ದೇವಾಲಯಗಳಲ್ಲಿ ಇದು ಸಮಂಜಸವಲ್ಲ ಎಂದರು.

ಮುಂದಿನ‌ ದಿನಗಳಲ್ಲಿ ಸಭೆ ನಡೆಸಿ ಯಾವ ರೀತಿಯ ವಸ್ತ್ರ ಧರಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಈ ಬಗ್ಗೆ ಸರ್ಕಾರದಿಂದ ನಮಗೆ ಯಾವ ನೋಟಿಸ್ ಬಂದಿಲ್ಲ. ನಮ್ಮ ದೇವಾಲಯದ ಆಡಳಿತ ಕಮಿಟಿಯೇ ಇದನ್ನು ನಿರ್ಧರಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಐಟಿ ದಾಳಿ: ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ- ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.