ETV Bharat / state

ನಿರ್ಭೀತಿಯಿಂದ ಕೆಲಸ ಮಾಡಿ: ಪೌರಕಾರ್ಮಿಕರಿಗೆ ಶಾಸಕ ಸಂಜೀವ ಮಠಂದೂರು ಅಭಯ - ಸಂಜೀವ ಮಠಂದೂರು ಲೆಟೆಸ್ಟ್​ ನ್ಯೂಸ್​

ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಕಸ ಸಂಗ್ರಹದ ಲಾರಿ ಚಾಲಕನಿಗೆ ಜೂನ್​ 29ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಇಂದು ಕಸ ಸಂಗ್ರಹದ ಸುಮಾರು 41 ಮಂದಿ ಹೊರಗುತ್ತಿಗೆ ಪೌರಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ.

MLA Sanjeeva Matandoor
ನಿರ್ಭಿತಿಯಿಂದ ಕೆಲಸ ಮಾಡಿ: ಪೌರಕಾರ್ಮಿಕರಿಗೆ ಶಾಸಕ ಸಂಜೀವ ಮಠಂದೂರು ಅಭಯ
author img

By

Published : Jun 30, 2020, 12:51 PM IST

ಪುತ್ತೂರು: ಪೌರಕಾರ್ಮಿಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಪೌರ ಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿ ಊರಿಗೆ ಹೊರಡುವ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಶಾಸಕ ಸಂಜೀವ ಮಠಂದೂರು ನಗರಸಭೆಗೆ ಭೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ.

ನಿರ್ಭಿತಿಯಿಂದ ಕೆಲಸ ಮಾಡಿ: ಪೌರಕಾರ್ಮಿಕರಿಗೆ ಶಾಸಕ ಸಂಜೀವ ಮಠಂದೂರು ಅಭಯ

ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಕಸ ಸಂಗ್ರಹದ ಲಾರಿ ಚಾಲಕನಿಗೆ ಜೂ.29ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಇಂದು ಕಸ ಸಂಗ್ರಹದ ಸುಮಾರು 41 ಮಂದಿ ಹೊರಗುತ್ತಿಗೆ ಪೌರಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಇದನ್ನು ಮನಗಂಡ ಶಾಸಕರು ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಆವರಣಕ್ಕೆ ಬಂದು ಎಲ್ಲಾ ಪೌರಕಾರ್ಮಿಕರಿಗೆ ಕೊರೊನಾ ವಿರುದ್ಧದ ಹೋರಾಟ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಧೈರ್ಯ ತುಂಬಿದರು.

ರೋಗ ಉಲ್ಬಣ ಆಗುವ ಸನ್ನಿವೇಶವನ್ನು ನಾವು ತಡೆಗಟ್ಟಿ, ನಾವು ಜಾಗೃತರಾಗಬೇಕು. ಪ್ರಮುಖವಾಗಿ ನಗರದಲ್ಲಿ ಕೆಲಸ ಮಾಡುವಾಗ ನಾವು ಜಾಗೃತರಾಗಿರಬೇಕು. ಎಚ್ಚರ ತಪ್ಪಿದರೆ ಮತ್ತೆ ಏನು ಮಾಡಲು ಆಗುವುದಿಲ್ಲ. ಕೊರೊನಾ ಇವತ್ತು ನಾಳೆಗೆ ಮುಗಿಯವಂತದ್ದಲ್ಲ. ಸರಿಯಾದ ಔಷಧಿ ಕಂಡು ಹಿಡಿಯವ ತನಕ ಇದಕ್ಕೆ ಮುಕ್ತಿ ಇಲ್ಲ. ಹಾಗೆಂದು ಮನೆಗೆ ಬೀಗ ಹಾಕಿ ಕುಳಿತುಕೊಳ್ಳಲು ಆಗುವುದಿಲ್ಲ. ಸಹಜ ಜೀವನಕ್ಕೆ ತೊಡಗಿಸಿಕೊಳ್ಳಬೇಕಾಗುತ್ತದೆ. ಇನ್ನು ಒಂದಷ್ಟು ಸಮಯ ಲಾಕ್‌ಡೌನ್ ಆದರೆ ಆರ್ಥಿಕ ಸ್ಥಿತಿಗೆ ಹೊಡೆತ ಬೀಳಬಹುದು. ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.

ಮುನ್ನೆಚ್ಚರಿಕಾ ಕ್ರಮ ಕೈಗೊಂಡು ನಿರ್ಭೀತಿಯಿಂದ ಕೆಲಸ ಮಾಡಿ: ನಗರಸಭೆಯ ಪೌರಕಾರ್ಮಿಕರು ಕೆಲಸ ಮಾಡಿದಾಗ ಜನರು ನೆಮ್ಮದಿಯಿಂದ ಇರಬಹುದು. ಆದರೆ ಇಂತಹ ಮಳೆಗಾಲದ ಸಂದರ್ಭದಲ್ಲಿ ನೀವೇ ಊರಿಗೆ ತೆರಳಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಲೋಚಿಸಿ. ಬಹುಶಃ ಸರ್ಕಾರ ಲಾಕ್‌ಡೌನ್ ಮಾಡಿದಾಗಲೂ ನಿಮಗೆ ಲಾಕ್‌ಡೌನ್ ಇಲ್ಲ. ನೀವು 365ದಿನವೂ ಕೆಲಸ ಮಾಡಿದ್ದೀರಿ. ಇಂತಹ ಸಂದರ್ಭಲ್ಲಿ ನಿಮ್ಮ ಆರೋಗ್ಯದ ಹಿತವನ್ನು ನೋಡುವ ಜವಾಬ್ದಾರಿ ನಮ್ಮದು. ಮಹಾಲಿಂಗೇಶ್ವರನ ಅನುಗ್ರಹದಿಂದ ಕೊರೊನಾ ಯಾರಿಗೂ ಬರುವುದು ಬೇಡ. ಈಗಾಗಲೇ ಪುತ್ತೂರಿಗೆ ಬಂದ ಕೇಸ್‌ಗಳಲ್ಲಿ ಬಹುತೇಕ ಮತ್ತೆ ನೆಗೆಟಿವ್ ವರದಿ ಬಂದಿದೆ. ಜೊತೆಗೆ ಪುತ್ತೂರಿನಲ್ಲಿ ಕೊರೊನಾದಿಂದ ಯಾರೂ ಮೃತಪಟ್ಟಿಲ್ಲ. ಯಾವುದೆ ವ್ಯಕ್ತಿ 14 ದಿನಗಳ ಹೆಚ್ಚು ಪಾಸಿಟಿವ್ ಕೇಸ್‌ನಲ್ಲಿ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಶಾಸಕರು ಮಾಸ್ಕ್ ವಿತರಣೆ ಮಾಡಿದರು.

ನಿಮ್ಮ ಭದ್ರತೆಗೆ ಎಲ್ಲಾ ಸಲಕರಣೆ ನೀಡುತ್ತೇವೆ: ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ಕೆಲಸವಿಲ್ಲದಿದ್ದರೆ ಜೀವನ ಸಾಗಿಸುವುದು ಕಷ್ಟ. ಆದರೆ ಕೊರೊನಾ ಭಯ ಎಂದು ಕೆಲಸಕ್ಕೆ ಹೋಗದೆ ಇರುವುದು ಸರಿಯಲ್ಲ. ನಿಮಗೆ ಏನೇ ಸಮಸ್ಯೆ ಬಂದರೂ ಅದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಇಲ್ಲಿ ಯಾವುದೇ ಭಯ ಬೇಡ. ನಿಮ್ಮ ಭದ್ರತೆಗೆಗಾಗಿ ಇನ್ನಷ್ಟು ಸಲಕರಣೆಗಳನ್ನು ನೀಡಲಾಗುವುದು ಎಂದು ಅಭಯ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.