ETV Bharat / state

ಈಟಿವಿ ಭಾರತ ವರದಿ ಫಲಶೃತಿ : ಬೀದಿ ಬದಿ ಹಸಿಮೀನು ವ್ಯಾಪಾರಕ್ಕೆ ಕೊನೆಗೂ ಮುಕ್ತಿ - ಕಡಬ ಮೀನು ಮಾರುಕಟ್ಟೆ

ಕೆಲವೇ ಕೆಲವು ವರ್ಷಗಳ ಹಿಂದೆ ಹಸಿಮೀನು ಮಾರಾಟಕೋಸ್ಕರ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಕಡಬದ ಅಂದಿನ ಗ್ರಾಪಂ ವತಿಯಿಂದ ಕಟ್ಟಿಸಿದ ಸುಸಜ್ಜಿತ ಕಟ್ಟಡ ಬಳಕೆಯಾಗದೆ ಬಿದ್ದಿತ್ತು. ಸುಸಜ್ಜಿತ ಕಟ್ಟಡ ಇದ್ದರೂ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡಲಾಗುತ್ತಿತ್ತು..

street-side-fish-market-displacement-to-new-market-after-etv-bharat-report
ಬೀದಿ ಬದಿ ಹಸಿಮೀನು ವ್ಯಾಪಾರಕ್ಕೆ ಕೊನೆಗೂ ಮುಕ್ತಿ
author img

By

Published : Jan 9, 2021, 5:23 PM IST

ಕಡಬ (ದ.ಕ): ಗ್ರಾಮ ಪಂಚಾಯತ್‌ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ಸುಸಜ್ಜಿತ ಹಸಿಮೀನು ಮಾರಾಟ ಕಟ್ಟಡ ಪಾಳು ಬಿದ್ದು ರಸ್ತೆ ಬದಿಯಲ್ಲಿಯೇ ಮೀನು ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು.

ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿತ್ತು. ಮೀನು ಮಾರುಕಟ್ಟೆಯ ಆಸುಪಾಸು ದುರ್ವಾಸನೆ ಬೀರುವ ವಾತಾವರಣ ಸೃಷ್ಟಿಯಾಗಿತ್ತು. ಈ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಬಿದಿ ಬದಿಯ ಮೀನು ಮಾರಾಟವನ್ನು ಇದೀಗ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಿದ್ದಾರೆ.

ಬೀದಿ ಬದಿ ಹಸಿಮೀನು ವ್ಯಾಪಾರಕ್ಕೆ ಕೊನೆಗೂ ಮುಕ್ತಿ..

ಅಸಲಿ ಕಥೆ ಏನು?: ಕೆಲವೇ ಕೆಲವು ವರ್ಷಗಳ ಹಿಂದೆ ಹಸಿಮೀನು ಮಾರಾಟಕೋಸ್ಕರ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಕಡಬದ ಅಂದಿನ ಗ್ರಾಪಂ ವತಿಯಿಂದ ಕಟ್ಟಿಸಿದ ಸುಸಜ್ಜಿತ ಕಟ್ಟಡ ಬಳಕೆಯಾಗದೆ ಬಿದ್ದಿತ್ತು. ಸುಸಜ್ಜಿತ ಕಟ್ಟಡ ಇದ್ದರೂ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡಲಾಗುತ್ತಿತ್ತು.

ಈ ಕಟ್ಟಡದಲ್ಲಿ ಮೀನು ವ್ಯಾಪಾರ ಮಾಡಿದ್ದಲ್ಲಿ ಗ್ರಾಹಕರಿಗೆ ದರದ ವಿಚಾರದಲ್ಲಿ ಯಾವುದೇ ದೊಡ್ಡ ಮಟ್ಟದ ವಂಚನೆ ನಡೆಯುತ್ತಿರಲಿಲ್ಲ. ಮಾತ್ರವಲ್ಲದೆ ಗ್ರಾಹಕರಿಗೂ ಉತ್ತಮ ಗುಣಮಟ್ಟದ ವಿವಿಧ ರೀತಿಯ ಮೀನುಗಳು ಲಭ್ಯವಾಗುತ್ತಿತ್ತು.

ಈ ಸಮಯದಲ್ಲಿ ಪಂಚಾಯತ್​ಗೆ ಆದಾಯವೂ ಹೆಚ್ಚಿಗೆ ಬರುತ್ತಿತ್ತು. ಆದರೆ, ಸಾರ್ವಜನಿಕ ತೆರಿಗೆ ಹಣದಿಂದ ಮಾಡಿದ ಈ ಕಟ್ಟಡವನ್ನು ಅವನತಿಗೆ ತಳ್ಳಿದ ಅಧಿಕಾರಿಗಳು, ಪಂಚಾಯತ್ ಆಡಳಿತ ಮಂಡಳಿ ಮತ್ತು ಜನಪ್ರತಿನಿಧಿಗಳು ಮೀನು ವ್ಯಾಪಾರಿಗಳಿಗೆ ಕಡಬ ಪೇಟೆಯ ರಸ್ತೆಯ ಎರಡು ಕಡೆಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದರು.

ಕಡಬದ ಮೀನು ಮಾರುಕಟ್ಟೆ ಕಟ್ಟಡವನ್ನು ಸೂಕ್ತ ರೀತಿ ಸರಿಪಡಿಸದ ಕಾರಣ,ಮದ್ಯಪಾನದ ಅಡ್ಡೆಯಾಗಿ ಈ ಕಟ್ಟಡ ಬದಲಾಗಿತ್ತು. ಇದೀಗ ಮೀನು ಮಾರುಕಟ್ಟೆ ಸ್ವಚ್ಛಗೊಳಿಸುವ ಮೂಲಕ ಕಡಬ ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ರಸ್ತೆ ಬದಿಯ ಮೀನು ವ್ಯಾಪಾರಕ್ಕೆ ಅಂತ್ಯ ಹಾಡಿದ್ದಾರೆ.

ಇದನ್ನೂ ಓದಿ: ಕಡಬದಲ್ಲಿ ರಸ್ತೆ ಬದಿ ಮೀನು ಮಾರಾಟಕ್ಕೆ ಅವಕಾಶ: ಅಧಿಕಾರಿಗಳ ಕುತಂತ್ರವೆಂದು ಸ್ಥಳೀಯರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.