ETV Bharat / state

ಹಿಂದೂ ಮುಖಂಡ ಡಾ. ಎಂ.ಕೆ.ಪ್ರಸಾದ್ ಕೋವಿಡ್​ನಿಂದ ಗುಣಮುಖರಾಗಲು ವಿಶೇಷ ಪ್ರಾರ್ಥನೆ - Prayer for the health of Nalin Kumar Kateel

ಪುತ್ತೂರಿನ ಹಿರಿಯ ಹಿಂದೂ ಮುಖಂಡ ಪ್ರಸಿದ್ಧ ವೈದ್ಯರಾದ ಡಾ. ಎಂ.ಕೆ.ಪ್ರಸಾದ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಆರೋಗ್ಯಕ್ಕಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Puttur
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ
author img

By

Published : Sep 1, 2020, 6:36 PM IST

ಪುತ್ತೂರು: ಪುತ್ತೂರಿನ ಹಿರಿಯ ಹಿಂದೂ ಮುಖಂಡ, ಪ್ರಸಿದ್ಧ ವೈದ್ಯರಾದ ಡಾ. ಎಂ.ಕೆ.ಪ್ರಸಾದ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಆರೋಗ್ಯಕ್ಕಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕೋವಿಡ್-19 ಸೋಂಕು ತಗುಲಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊರೊನಾದಿಂದ ಶೀಘ್ರ ಗುಣಮುಖರಾಗುವಂತೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾದನಲ್ಲಿ ಸೆ.1ರಂದು ಬೆಳಿಗ್ಗೆ ಪ್ರಾರ್ಥನೆ ಮಾಡಲಾಯಿತು.

ಶ್ರೀ ಗಣೇಶೋತ್ಸವ ಸಮಿತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಳದ ಪ್ರಧಾನ ಅರ್ಚಕ ವಿ.ಎಸ್ ಭಟ್ ಅವರು ವಿಶೇಷವಾಗಿ ಪ್ರಾರ್ಥನೆ ಮಾಡಿದರು. ಇದೇ ಸಂದರ್ಭದಲ್ಲಿ ಡಾ. ಎಂ.ಕೆ.ಪ್ರಸಾದ್ ಅವರ ಚಿಂತನೆಯಂತೆ ಲೋಕ ಕಲ್ಯಾಣಕ್ಕಾಗಿಯೂ ಪ್ರಾರ್ಥನೆ ಮಾಡಲಾಯಿತು.

ಇನ್ನು ವಿಶೇಷ ಪ್ರಾರ್ಥನೆ ವೇಳೆಯೇ ಡಾ. ಎಂ.ಕೆ.ಪ್ರಸಾದ್ ಅವರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರೆ ಮಾಡಿ ಪುತ್ತೂರಿನ ಯೋಗ ಕ್ಷೇಮ ವಿಚಾರಿಸಿದರು. ಲೋಕಕಲ್ಯಾಣಾರ್ಥಕ್ಕೆ ಪ್ರಾರ್ಥನೆ ಮಾಡಿ. ವಿಶ್ವದಿಂದಲೇ ಕೊರೊನಾ ದೂರ ಹೋಗುವಂತೆ ಸಂಕಲ್ಪ ಮಾಡಿ ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಮಿತಿಯ ಪದಾಧಿಕಾರಿಗಳಾದ ನಗರಸಭಾ ಮಾಜಿ ಸದಸ್ಯ ಸುಜೀಂದ್ರ ಪ್ರಭು, ನೀಲಂತ್, ಶೇಖರ್ ಗೌಡ ಬನ್ನೂರು, ರಾಜೇಶ್ ಆನಡ್ಕ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.