ETV Bharat / state

ಸೇವಾ ರೂಪದಲ್ಲಿ ಬೆಂಕಿ ಎರಚಾಟ... ಮೈ ಜುಮ್ಮೆನಿಸುತ್ತೆ ಈ ಜಾತ್ರೆಯ ಆಚರಣೆ - Kateel Temple

ಇದೊಂದು ಮೈ ಜುಮ್ಮೆನ್ನಿಸುವಂತಹ ಜಾತ್ರೆ. ಇಲ್ಲಿ ಬಣ್ಣ, ಭಂಡಾರ, ಯಾವುದೂ ಕಾಣುವುದಿಲ್ಲ. ಕಾಣುವುದು ಬೆಂಕಿ ಉಂಡೆ ಮಾತ್ರ. ಈ ಭಯಾನಕ ಹಾಗೂ ವಿಶಿಷ್ಟ ಜಾತ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಿಸಲಾಗುತ್ತದೆ.

ಕಟೀಲು ಶೀದೇವಿಯ ಅವಭ್ರತೋತ್ಸವ (ಆರಟ)
author img

By

Published : Apr 22, 2019, 1:13 PM IST

ಮಂಗಳೂರು: ಪರಸ್ಪರ ದ್ವೇಷವುಳ್ಳವರು ಹೊಡೆದಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ, ಯಾವುದೇ ದ್ವೇಷವಿಲ್ಲದೇ ಪರಸ್ಪರ ಬೆಂಕಿಯ ಪಂಜು ಹಿಡಿದುಕೊಂಡು ಒಬ್ಬರ ಮೇಲೊಬ್ಬರು ಎಸೆಯುತ್ತಾ ಹೊಡೆದಾಡಿಕೊಳ್ಳುವ ವಿಶಿಷ್ಟ ಜಾತ್ರೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಅದುವೇ ಕಟೀಲು ಶ್ರೀದೇವಿಯ ಅವಭ್ರತೋತ್ಸವ (ಆರಟ). ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಈ ಆಕರ್ಷಕ ಹಾಗೂ ರೋಮಾಂಚನಕಾರಿ ಆರಟ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಯಾವುದೇ ರೀತಿಯ ದ್ವೇಷ ಇಲ್ಲಿ ಕಂಡುಬರುವುದಿಲ್ಲ. ಮೇಷ ಸಂಕ್ರಮಣದಿಂದ ಮೊದಲ್ಗೊಂಡು ಸುಮಾರು ಎಂಟು ದಿನಗಳ ಕಾಲ ಕಟೀಲು ಶ್ರೀ ದೇವಿ ವರ್ಷಾವಧಿ ಉತ್ಸವ ನಡೆಯುತ್ತದೆ. ಮೊದಲು ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಕೊನೆಯ ದಿನ ಶ್ರೀದೇವಿಯು ಬ್ರಹ್ಮರಥಾರೂಢಳಾಗಿ ದೇವಳದ ರಥಬೀದಿಯಲ್ಲಿ ಸವಾರಿ ಮಾಡುತ್ತಾಳೆ.

ಕಟೀಲು ಶೀದೇವಿಯ ಅವಭ್ರತೋತ್ಸವ (ಆರಟ)

ಬಳಿಕ ಅವಭ್ರತ ಸ್ನಾನದ ಹಿನ್ನೆಲೆ ಬೆಳ್ಳಂಬೆಳಗ್ಗೆ ಈ ಆರಟ ಜರುಗುತ್ತದೆ. ಕಟೀಲು ದೇವಾಲಯಕ್ಕೊಳಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮದ ಜನರ ನಡುವೆ ಈ ಅಗ್ನಿಕೇಳಿ ಅಥವಾ ಬೆಂಕಿಯ ಪಂಜನ್ನು ಎಸೆಯುವ ವಿಶಿಷ್ಟವಾದ ಆಟ ನಡೆಯುತ್ತದೆ. ಆದರೆ, ಈ ಭಯಾನಕ ಅಗ್ನಿಕೇಳಿಯಲ್ಲಿ ಯಾವುದೇ ರೀತಿಯ ಅವಘಡಗಳಾದ, ಯಾರಿಗೂ ಗಾಯಗಳಾದ ಘಟನೆ ಈವರೆಗೂ ನಡೆದಿಲ್ಲ. ಒಂದು ವೇಳೆ ಸಣ್ಣಪುಟ್ಟ ಗಾಯಗಳಾದರೂ ದೇವಿಯ ಪ್ರಸಾದವೇ ಇದಕ್ಕೆ ಔಷಧಿ ಎನ್ನುತ್ತಾರೆ ದೇವಳದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ.

ಶ್ರೀದೇವಿಯ ಸೇವಾ ರೂಪದಲ್ಲಿ ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಈ ಅಗ್ನಿಕೇಳಿ ಆಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅತ್ತೂರು ಹಾಗೂ ಕೊಡೆತ್ತೂರು ಈ ಎರಡೂ ಗ್ರಾಮದ ಜನರು ತಮಗೆ ಕಷ್ಟ ಕಾರ್ಪಣ್ಯಗಳು ಬಂದ್ರೆ ಹರಕೆ ರೂಪದಲ್ಲಿ ಈ ಸೇವೆಯನ್ನು ಸಲ್ಲಿಸುತ್ತಾರೆ. ಎರಡೂ ಗ್ರಾಮದ ಜನರೂ ಈ‌ ದಿನಗಳಲ್ಲಿ‌ ಸಾತ್ವಿಕ ಆಹಾರಗಳನ್ನು‌ ಸೇವಿಸಿ, ಮನೆಗೊಬ್ಬರಂತೆ ಈ ಸೇವಾ ಕೈಂಕರ್ಯದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಕೇವಲ ಸಾಂಕೇತಿಕ ದ್ವೇಷವನ್ನು ಪ್ರಕಟಗೊಳಿಸಲಾಗುತ್ತದೆ. ಆದರೆ, ಅಗ್ನಿಕೇಳಿಯ ಬಳಿಕ ಈ ದ್ವೇಷ ಮುಂದುವರಿಸುವುದಿಲ್ಲ ಎನ್ನುತ್ತಾರೆ ಅತ್ತೂರಿನ ಗ್ರಾಮಸ್ಥರು.

Intro:SPECAIL STORY

ಮಂಗಳೂರು: ಪರಸ್ಪರ ದ್ವೇಷವುಳ್ಳವರು ಹೊಡೆದಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಯಾವುದೇ ದ್ವೇಷವಿಲ್ಲದೆ ಪರಸ್ಪರ ಬೆಂಕಿಯ ಪಂಜುಗಳನ್ನು ಹಿಡಿದುಕೊಂಡು ಒಬ್ಬರ ಮೇಲೊಬ್ಬರು ಎಸೆದುಕೊಂಡು ಹೊಡೆದಾಡಿಕೊಳ್ಳುವ ವಿಶಿಷ್ಟ ಜಾತ್ರೆಯೊಂದು ಮಂಗಳೂರಿನಲ್ಲಿ‌ ನಡೆಯುತ್ತಿದೆ.

ಹೌದು, ಅದುವೇ ಕಟೀಲು ಶೀದೇವಿಯ ಆರಾಟ ಅಥವಾ ತೂಟೆದಾರ. ಶತಶತಮಾನಗಳಿಂದ ನಡೆಯುವ ಈ ಆಕರ್ಷಕ, ಮೈರೋಮಾಂಚನಕಾರಿ ಆರಾಟ ಉತ್ಸವದಲ್ಲಿ ಜನರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಯಾವುದೇ ರೀತಿ ದ್ವೇಷವನ್ನು ಮುಂದುವರಿಸದೆ ಕೇವಲ ಉತ್ಸವಕಾಲಕ್ಕೆ ಮಾತ್ರ ಸಂಪ್ರದಾಯದ ಹಿನ್ನೆಲೆಯಲ್ಲಿ ಈ ದ್ವೇಷವನ್ನು ಪ್ರಕಟಿಸಲಾಗುತ್ತದೆ.

Body:ಮೇಷ ಸಂಕ್ರಮಣದಿಂದ ಮೊದಲ್ಗೊಂಡು ಸುಮಾರು ಎಂಟು ದಿನಗಳಕಾಲ ಕಟೀಲು ಶ್ರೀ ದೇವಿ ವರ್ಷಾವಧಿ ಉತ್ಸವ ನಡೆಯುತ್ತದೆ. ಮೊದಲು ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದು ಕೊನೆಯ ದಿನ ಶ್ರೀದೇವಿಯು ಬ್ರಹ್ಮರಥಾರೂಢಳಾಗಿ ದೇವಳದ ರಥಬೀದಿಯಲ್ಲಿ ಸವಾರಿ ಮಾಡುತ್ತಾಳೆ ಬಳಿಕ ಅವಭೃತ ಸ್ನಾನದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಈ ಆರಟ ಅಥವಾ ತೂಟೆದಾರ ನಡೆಯುತ್ತದೆ. ಕಟೀಲು ದೇವಾಲಯಕ್ಕೊಳಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮದ ಜನರ ನಡುವೆ ಈ ಅಗ್ನಿಕೇಳಿ ಅಥವಾ ಬೆಂಕಿಯ ಪಂಜನ್ನು ಎಸೆಯುವ ವಿಶಿಷ್ಟವಾದ ಆಟ ನಡೆಯುತ್ತದೆ. ಆದರೆ ಈ ಭಯಾನಕ, ಮೈಜುಮ್ಮೆನಿಸುವ ಅಗ್ನಿಕೇಳಿಯಲ್ಲಿ ಯಾವುದೇ ರೀತಿಯ ಅವಘಡಗಳಾದ, ಯಾರಿಗೂ ಗಾಯಗಳಾದ ಘಟನೆ ಈ ಈವರೆಗೆ ನಡೆದಿಲ್ಲ. ಒಂದು ವೇಳೆ ಸಣ್ಣಪುಟ್ಟ ಗಾಯಗಳಾದರೂ ದೇವಿಯ ಪ್ರಸಾದವೇ ಇದಕ್ಕೆ ಔಷಧಿ ಎಂದು ದೇವಳದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.

ಶ್ರೀದೇವಿಯ ಸೇವಾ ರೂಪದಲ್ಲಿ ಅನಾದಿಕಾಲದಿಂದಲೂ ನಮ್ಮ ಹಿರಿಯರು ನಡೆಸಿಕೊಂಡು ಬರುವ ಈ ಅಗ್ನಿಕೇಳಿ ಆಟವು ನಡೆದುಕೊಂಡು ಬರುತ್ತಿದ್ದು, ಅತ್ತೂರು ಹಾಗೂ ಕೊಡೆತ್ತೂರು ಈ ಎರಡೂ ಗ್ರಾಮದ ಜನರೂ ತಮ್ಮ‌ ಕಷ್ಟ ಕಾರ್ಪಣ್ಯಗಳು ಬಂದರೆ ಹರಕೆ ರೂಪದಲ್ಲಿ ಈ ಸೇವೆಯನ್ನು ನಡೆಸುತ್ತಿದ್ದಾರೆ. ಎರಡೂ ಗ್ರಾಮದ ಜನರೂ ಈ‌ ದಿನಗಳಲ್ಲಿ‌ ಸಾತ್ವಿಕ ಆಹಾರಗಳನ್ನು‌ ಸೇವನೆ ಮಾಡಿ, ಮನೆಗೊಬ್ಬರಂತೆ ಈ ಸೇವಾಕೈಂಕರ್ಯದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಕೇವಲ ಸಾಂಕೇತಿಕ ದ್ವೇಷವನ್ನು ಪ್ರಕಟಗೊಳಿಸಲಾಗುತ್ತದೆ. ಆದರೆ ಅಗ್ನಿಕೇಳಿಯ ಬಳಿಕ ಈ ದ್ವೇಷ ಮುಂದುವರಿಸುವುದಿಲ್ಲ‌ ಎಂದು ಅತ್ತೂರು ಗ್ರಾಮದ ಮುಖ್ಯಸ್ಥರು ಹೇಳಿದರು.

Conclusion:ವಿಶೇಷವೆಂದರೆ ರಕ್ತೇಶ್ವರಿ ಸಾನಿಧ್ಯವಿರುವ ದೇವಳದ ಮಾಗಣೆಗೊಳಪಟ್ಟ ಎರಡು ಕಡೆಗಳಲ್ಲಿ ತೂಟೆದಾರ ಅಥವಾ ಆರಾಟ ನಡೆಯುತ್ತದೆ. ಅಜಾರು ಸಮೀಪದ ಜಳಕದ ಕಟ್ಟೆಯಲ್ಲಿ ಸ್ನಾನ ಮುಗಿಸಿ ಅಲ್ಲಿರುವ ರಕ್ತೇಶ್ವರಿ ಸಾನಿಧ್ಯದ ಬಳಿ ಅತ್ತೂರು ಮತ್ತು ಕೊಡೆತ್ತೂರು ಗ್ರಾಮದ ಜನರು ಎರಡು ತಂಡಗಳಾಗಿ ವಿಭಜನೆಗೊಂಡು ಒಬ್ಬರ ಮೇಲೊಬ್ಬರು ಬೆಂಕಿಯ ಪಂಜುಗಳನ್ನು ಎಸೆಯುತ್ತಾರೆ. ಒಬ್ಬರಿಗೊಬ್ಬರು ಆಪ್ತರಾಗಿರುವ ಇವರು ಒಬ್ಬರಿಗೊಬ್ಬರು ಅಕ್ಷರಶಃ ವೈರಿಗಳಂತೆ ಕಾದಾಡುತ್ತಾರೆ. ಇಲ್ಲಿ ಮೂರು ಸುತ್ತು ಬೆಂಕಿಯ ಪಂಜುಗಳನ್ನು ಎಸೆಯುವ ಯುದ್ಧ ನಡೆಯುತ್ತದೆ. ನಂತರ ದೇವಳದ ರಥಬೀದಿಯಲ್ಲಿ ಮತ್ತೊಮ್ಮೆ ಇದೇ ರೀತಿ ಮೂರು ಸುತ್ತು ಪಂಜುಗಳನ್ನು ಎಸೆಯುತ್ತಾರೆ. ಈ ಅಗ್ನಿಕೇಳಿ‌ ಅತಿರೇಕಕ್ಕೆ ಹೋಗದಂತೆ ಎರಡೂ ಕಡೆಗಳ ಗುತ್ತಿನ ಯಜಮಾನರು ನಿಯಂತ್ರಣ ಮಾಡುತ್ತಿರುತ್ತಾರೆ. ಇದು ಕೇವಲ ಅಗ್ನಿಕೇಳಿ ಮಾತ್ರವಲ್ಲದೆ ಇದರ ಹಿಂದೆ ಧಾರ್ಮಿಕ ನಂಬಿಕೆ ಇದೆ. ಹಿಂದೆ ಶ್ರೀ ದೇವಿಯು ಅರುಣಾಸುರನೆಂಬ ದಾನವ ಸಂಹಾರ ಮಾಡಿ ಬಂದ ವಿಜಯದ ಸಂಭ್ರಮಾಚರಣೆಯನ್ನು ನಡೆಸುವ ಸಲುವಾಗಿ ಸಾಂಕೇತಿಕವಾಗಿ ಈ ಅಗ್ನಿಕೇಳಿ ನಡೆಯುತ್ತಾ ಬಂದಿದೆ.

Reporter_Vishwanath Panjimogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.