ETV Bharat / state

ಸೋಮೇಶ್ವರ ಪುರಸಭೆ ಚುನಾವಣೆ: ಮಧ್ಯಾಹ್ನದವರೆಗೆ ಶೇ.32ರಷ್ಟು ಮತದಾನ - ಸೋಮೇಶ್ವರ

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆ ಚುನಾವಣೆ ಇಂದು ನಡೆಯುತ್ತಿದ್ದು, ಮಧ್ಯಾಹ್ನದವರೆಗೆ ಶೇ.32ರಷ್ಟು ಮತದಾನ ನಡೆದಿದೆ.

someshwar-municipality-election
ಸೋಮೇಶ್ವರ ಪುರಸಭೆ ಚುನಾವಣೆ : ಮಧ್ಯಾಹ್ನದವರೆಗೆ ಶೇ.32ರಷ್ಟು ಮತದಾನ
author img

By ETV Bharat Karnataka Team

Published : Dec 27, 2023, 3:57 PM IST

ಉಳ್ಳಾಲ(ದಕ್ಷಿಣ ಕನ್ನಡ): ರಾಜ್ಯದ ಅತಿದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಇಂದು ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಮಧ್ಯಾಹ್ನದವರೆಗೆ ಶೇ.32ರಷ್ಟು ಮತದಾನ ನಡೆದಿದೆ. ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 23 ವಾರ್ಡ್‍ಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 50 ಅಭ್ಯರ್ಥಿಗಳು (25 ಪುರುಷ ಅಭ್ಯರ್ಥಿಗಳು, 25 ಮಹಿಳಾ ಅಭ್ಯರ್ಥಿಗಳು)ಕಣದಲ್ಲಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 22,502 ಮತದಾರರಿದ್ದಾರೆ.

ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಸೋಮೇಶ್ವರ ಗ್ರಾಮ ಪಂಚಾಯತ್​ ಆಗಿದ್ದ ಸಂದರ್ಭ ಬಿಜೆಪಿ ಸುಮಾರು 30 ವರ್ಷಗಳ ಕಾಲ ತನ್ನ ಪ್ರಾಬಲ್ಯ ಸಾಧಿಸಿತ್ತು. 23 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 22 ವಾರ್ಡ್​ಗಳಲ್ಲಿ​ ಕಾಂಗ್ರೆಸ್​ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ವಾರ್ಡ್‍ನಲ್ಲಿ ಕಾಂಗ್ರೆಸ್​, ಸಿಪಿಐಎಂ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ.

19 ವಾರ್ಡ್‍ಗಳಲ್ಲಿ 18 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ಒಂದು ವಾರ್ಡ್‍ನಲ್ಲಿ ಬಿಜೆಪಿ-ಸಿಪಿಐಎಂ ನಡುವೆ ಸ್ಪರ್ಧೆ ನಡೆಯಲಿದೆ. ಉಳಿದ ನಾಲ್ಕು ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಿಪಿಐಎಂ, ಎಎಪಿ, ಸೋಷಿಯಲ್ ವೆಲ್ಫೇರ್ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

6 ಶಾಲೆಗಳಲ್ಲಿ ಮತಗಟ್ಟೆ: ಸೋಮೇಶ್ವರ ಪುರಸಭೆ ವ್ಯಾಪ್ತಿಯ 6 ಶಾಲೆಗಳಲ್ಲಿ 23 ವಾರ್ಡ್‍ಗಳ ಮತದಾನ ನಡೆಯಲಿದೆ. ಕುಂಪಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪೌಢಶಾಲೆಯಲ್ಲಿ 8 ಮತದಾನ ಕೇಂದ್ರವಿದ್ದು, ಸ್ಟೆಲ್ಲಾ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1, ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5, ಆನಂದಾಶ್ರಮ, ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆನಂದಾಶ್ರಮ ಶಾಲೆಯಲ್ಲಿ ತಲಾ 2 ಮತದಾನ ಕೇಂದ್ರಗಳಿವೆ.

ಮಹಿಳಾ ಮತದಾರರ ಪ್ರಾಬಲ್ಯ: 22,502 ಮತದಾರರಿರುವ ಸೋಮೇಶ್ವರದಲ್ಲಿ ಒಟ್ಟು 11,697 ಮಹಿಳಾ ಮತದಾರರು, 10,503 ಪುರುಷ ಮತದಾರರಿದ್ದಾರೆ. ಇಬ್ಬರು ತೃತೀಯ ಲಿಂಗಿ ಮತದಾರರಿದ್ದಾರೆ. ಪುರಸಭೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಪ್ರಾಬಲ್ಯ ಹೆಚ್ಚಿದೆ. 23 ವಾರ್ಡ್‍ಗಳಲ್ಲಿ 3ನೇ ವಾರ್ಡ್ ಲಕ್ಷ್ಮಿಗುಡ್ಡೆ ಪ್ರಕಾಶ್‍ನಗರದಲ್ಲಿ ಅತೀ ಕಡಿಮೆ 642 ಮತದಾರರಿದ್ದರೆ, 10ನೇ ವಾರ್ಡ್ ಚೇತನನಗರದಲ್ಲಿ 1494 ಅತೀ ಹೆಚ್ಚು ಮತದಾರರಿದ್ದಾರೆ.

ಸಹಾಯಕ ಆಯುಕ್ತ, ತಹಶೀಲ್ದಾರ್​ ಭೇಟಿ: ಎಲ್ಲ ಮತಗಟ್ಟೆಗಳಿಗೆ ಸಹಾಯಕ ಆಯುಕ್ತರಾದ ಹರ್ಷ ಹಾಗೂ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಣೆ ಮಾಡಿದರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹರ್ಷ, ಬೆಳಿಗ್ಗೆ 7 ರಿಂದ 23 ಬೂತ್​ಗಳಲ್ಲಿಯೂ ಶಾಂತಿಯುತವಾಗಿ ಮತದಾನ ನಡೆದಿದೆ. 7 ಗಂಟೆ ಹೊತ್ತಿಗೆ ಶೇ.16 ಮತದಾನ ನಡೆದಿದ್ದರೆ, 11 ಗಂಟೆ ಹೊತ್ತಿಗೆ ಶೇ.32ರಷ್ಟು ಮತದಾನ ನಡೆದಿತ್ತು. ಪುರಸಭಾ ವ್ಯಾಪ್ತಿಯಲ್ಲಿ ಎಲ್ಲಿಯೂ ಸೂಕ್ಷ್ಮ ಮತಗಟ್ಟೆಗಳಿಲ್ಲ. ಎಲ್ಲರೂ ಪ್ರಜಾಪ್ರಭುತ್ವ ಹಕ್ಕು ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ತಹಶೀಲ್ದಾರ್ ಪುಟ್ಟರಾಜು ಮಾತನಾಡಿ, 22,502 ಮತದಾರರಿರುವ ಸೋಮೇಶ್ವರದಲ್ಲಿ 11,697 ಮಹಿಳಾ ಮತದಾರರಿದ್ದು, 10,503 ಪುರುಷ ಮತದಾರರಿದ್ದಾರೆ. ಬ್ಯಾನರ್, ಬೋರ್ಡುಗಳನ್ನು ಅಳವಡಿಸದೆ ಶಾಂತಿಯುತವಾಗಿ ಚುನಾವಣಾ ಪ್ರಚಾರ ಕಾರ್ಯ ನಡೆದಿದೆ. ಮತದಾನ ಪ್ರಕ್ರಿಯೆಗಳು ಸೋಮೇಶ್ವರದ ಜನತೆಯ ಸಹಕಾರದಿಂದ ಶಾಂತಿಯುತವಾಗಿ ನಡೆದಿದೆ ಎಂದು ಹೇಳಿದರು.

ಇದನ್ನೂ ಓದಿ: ಒಕ್ಕಲಿಗ ಕಾರ್ಯಕ್ರಮದಲ್ಲಿ ಆಡಿದ ಒಂದು ಮಾತಿನಿಂದ ಸಿಎಂ ಸ್ಥಾನವನ್ನೇ ಕಳೆದುಕೊಂಡೆ: ಸದಾನಂದಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.